ತಾಳಿಕೋಟೆಯಲ್ಲಿ ಆ.26ರಿಂದ ಸೀರತ್ ಅಭಿಯಾನ

ತಾಳಿಕೋಟೆಯಲ್ಲಿ ಆ.26ರಿಂದ ಸೀರತ್ ಅಭಿಯಾನ  Seerat campaign in Talikote from August 26


ತಾಳಿಕೋಟಿ: ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್   ಅವರ ಜನ್ಮದಿನದ ಅಂಗವಾಗಿ ಆ.26ರಿಂದ ಸೆ.6ರವರೆಗೆ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್   ಶೀರ್ಷಿಕೆಯಡಿ ಸೀರತ್ ಅಭಿಯಾನ ನಡೆಯಲಿದೆ ಎಂದು ಅಭಿಯಾನದ ಉಪ ಸಂಚಾಲಕ ಹುಸೇನಪಟೇಲ ಹೇಳಿದರು. ಪಟ್ಟಣದಲ್ಲಿ 10 ದಿನಗಳ ಕಾಲ ವಿಚಾರ ಸಂಕಿರಣ, ಮುಖಂಡರ ಸಭೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆ, ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರವಾದಿಯವರ ಜೀವನ, ಸಂದೇಶ, ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ, ಶಾಂತಿ ಹಾಗೂ ಸೌಹಾರ್ದತೆಯ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಭಿಯಾನ ಯಶಸ್ವಿಗೆ ಎಲ್ಲ ಸಮಾಜಗಳ ಜನರು ಸಹಕಾರ ನೀಡಬೇಕು ಎಂದು ಜಮಾತೆ ಇಸ್ಲಾಮಿ ಹಿಂದ್ ನಗರ ಶಾಖೆ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಮನವಿ ಮಾಡಿದರು.