ಲೋಕದರ್ಶನವರದಿ
ಮಹಾಲಿಂಗಪುರ ೨೮: ಮಹಾಲಿಂಗಪುರದಿಂದ 5 ಕಿಮೀ ದೂರದ ಸಂಗಾನಟ್ಟಿ ಗ್ರಾಮದ ಬಯಲು ಸೀಮೆಯಲ್ಲಿ ನೆಲೆಸಿರುವ ಲಕ್ಷ್ಮೀದೇವಿ ಜಾತ್ರೆ ಪ್ರತಿ ವರ್ಷ ಶ್ರಾವಣದ ಕೊನೆಯ ಮಂಗಳವಾರ ಅದ್ಧೂರಿಯಾಗಿ ನಡೆಯುತ್ತದೆ.
ಪೂರ್ವಕ್ಕೆ ಸಂಗಾನಟ್ಟಿ ಪಶ್ಚಿಮಕ್ಕೆ ಮದಬಾಂವಿ, ಉತ್ತರಕ್ಕೆ ಸೈದಾಪುರ, ದಕ್ಷಿಣಕ್ಕೆ ಢವಳೇಶ್ವರ ಗ್ರಾಮಗಳಿದ್ದು, ಈ ನಾಲ್ಕೂ ಗ್ರಾಮಗಳ ಭೌಗೋಳಿಕ ಸೀಮಾರೇಖೆ (ಸವರ್ೇ ನಂ) ಇಲ್ಲಿಯೇ ಸಂಧಿಸುವುದರಿಂದ ಈ ಜಾಗದಲ್ಲಿ ನೆಲೆಸಿರುವ ದೇವಿಯನ್ನು ಸೀಮಿ ಲಕ್ಷ್ಮೀದೇವಿ ಎಂದೇ ಕರೆಯಲಾಗುತ್ತದೆ.
ಗ್ರಾಮಗಳ ಗಡಿಯಲ್ಲಿ ಬಾಂಧವ್ಯ ಬೆಸೆವ ಜಾತ್ರೆ
ನಾಲ್ಕು ಊರಿನ ಜನ ಸೇರಿ ಆಚರಿಸುವ ಬಾಂಧವ್ಯದ ಯಾತ್ರೆ ಎಂದೇ ಹೆಸರಾದ ಜಾತ್ರೆಯನ್ನು ಈ ವರ್ಷವೂ ನಾಲ್ಕು ಊರುಗಳ ಭಕ್ತರು ಸೇರಿ ಅದ್ದೂರಿಯಾಗಿ ನೆರವೇರಿಸಿದರು. ಸೀಮಿಲಕ್ಷ್ಮಿ ಯುವಕ ಸಂಘದ ಗೆಳೆಯರು ಹಿರಿಯರ ಮಾರ್ಗದರ್ಶನದಲ್ಲಿ ಮೂರು ವಾರಗಳ ಸತತ ಪ್ರಯತ್ನದಿಂದ ನಾಲ್ಕೂ ಊರುಗಳಿಂದ ದೇಣಿಗೆ, ಆಹಾರ ಸಾಮಗ್ರಿ ಸಂಗ್ರಹಿಸಿದ್ದಾರೆ. ಜಾತ್ರೆಯ ದಿನವೂ ಅವಿಶ್ರಾಂತವಾಗಿ ದೇವಿಯ ಮತ್ತು ಭಕ್ತರ ಸೇವೆ ಮಾಡಿದ್ದಾರೆ. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀ ಆರಂಭವಾದ ಜಾತ್ರೆಯಲ್ಲಿ ಭಕ್ತರು ನಸುಕಿನ ಜಾವದಿಂದಲೇ ದೀಡನಮಸ್ಕಾರದ ಹರಕೆ ಸಲ್ಲಿಸಿದರು. ಬೆಳಗ್ಗೆ 7 ಗಂಟೆಗೆ ಮಹಾಭಿಷೇಕ, 10 ಗಂಟೆಗೆ ಮುತೈದೆಯರಿಗೆ ಉಡಿ ತುಂಬುವ, ಮಧ್ಯಾಹ್ನ ಹಾಗೂ ರಾತ್ರಿ ಹಾಲುಗ್ಗಿ, ಅನ್ನಸಾರು ಪ್ರಸಾದ ಭೋಜನ, ರಾತ್ರಿ ಹೊಸೂರಿನ ಹರದೇಶಿ ಮೇಳ, ಯಡಹಳ್ಳಿಯ ನಾಗೇಶಿ ಮೇಳಗಳಿಂತ ತುರುಸಿನ ಚೌಡಕಿ ಪದ ಹಾಗೂ ಇತರೆ ಮನರಂಜನಾ ಕಾರ್ಯಗಳು ನೆರವೇರಿದವು.
ತನ್ನ ಗುಡಿಗೆ ತಾನೇ ಕಲ್ಲು ತರಿಸಿದ ದೇವಿ:
ನೂರಾರು ವರ್ಷಗಳಿಂದ ಪುಟ್ಟ ಪೊದೆಯಲ್ಲಿ ಪೂಜಿಸಲ್ಪಡುತ್ತಿದ್ದ ಸೀಮಿ ಲಕ್ಷ್ಮೀದೇವಿಗೆ ಗುಡಿ ಇರಲಿಲ್ಲ. ಸುತ್ತಲಿನ ನಾಲ್ಕೂ ಗ್ರಾಮಗಳ ರೈತರ ಹಿತರಕ್ಷಕಳು ಎಂಬ ನಂಬಿಕೆ ಇರುವುದರಿಂದ ಜನರು ಭಕ್ತಿ ಭಾವದಿಂದ ಪೂಜಿಸುತ್ತಿದ್ದರು. ಮಹಾಲಿಂಗಪುರ-ಮಾರಾಪುರ ಮುಖ್ಯ ರಸ್ತೆಯ ಬದಿಯಿರುವ ಈ ದೇವಿಯನ್ನು ಉದಾಸೀನ ಮಾಡಿದ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಮೊದಲು ಮಾರಾಪುರ ಕ್ವಾರಿ (ಕಣಿವೆ) ಯಿಂದ ಕಲ್ಲು ಸಾಗಿಸುವ ಟ್ರ್ಯಾಕ್ಟರ್ಗಳು ಕೋಟಾ ಆಗಿ ನಿಂತು ಬಿಡುತ್ತಿದ್ದವು. ಅಂದಿನಿಂದ ಪ್ರತಿ ಕಲ್ಲಿನ ಲೋಡ್ ಸಾಗಿಸುವಾಗಲೂ ಒಂದೊಂದು ಕಲ್ಲನ್ನು ದೇವಿ ಸನ್ನಿಧಿ ಮುಂದೆ ಇಟ್ಟು ಹೋಗುತ್ತಿದ್ದರು. ಹಾಗೆ ಇಟ್ಟ ಕಲ್ಲುಗಳಿಂದಲೇ ದೇವಿಗೆ ಗುಡಿ ನಿಮರ್ಿಸಲಾಗಿದೆ. ಕಳೆದ 4 ವರ್ಷಗಳ ಹಿಂದೆ ಗರ್ಭಗುಡಿ ಮತ್ತು ಸುತ್ತ ಮಂಟಪ ನಿಮರ್ಿಸಿ, ಹೊಸ ಮೂತರ್ಿ ಪ್ರತಿಷ್ಠಾಪನೆ ಮಾಡಿ ಅದ್ದೂರಿ ಜಾತ್ರೆ ಆಚರಿಸಲಾಗುತ್ತಿದೆ.
ಸಂಗಾನಟ್ಟಿ ಗ್ರಾಮದ ಯಲ್ಲಟ್ಟಿ ಪರಿವಾರದವರು ನೀಡಿದ 5 ಗುಂಟೆ ಜಾಗದಲ್ಲಿ ಗುಡಿ ನಿಮರ್ಾಣವಾಗಿದೆ. ಶ್ರೀಶೈಲ ಚೆನ್ನಪ್ಪ ಯಲ್ಲಟ್ಟಿ ಅರ್ಚಕರಾಗಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ