ಮುಂಗಡ ಪತ್ರ ಕುರಿತ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿದ ಸೇಡಂ

ಮುಂಗಡ ಪತ್ರ ಕುರಿತ ವಿಶೇಷ ಉಪನ್ಯಾಸಕ್ಕೆ ಚಾಲನೆ ನೀಡಿದ ಸೇಡಂ Sedam launches special lecture on budget

ಗಂಗಾವತಿ 14:  ನಗರದ ಕೊಲ್ಲಿ ನಾಗೇಶ್ವರಾವ್ ಪದವಿಮಹಾ ವಿದ್ಯಾಲಯದಲ್ಲಿ ಇಂದು ಕರ್ನಾಟಕ ರಾಜ್ಯ ಮುಂಗಡ ಪತ್ರ 2026-27ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.ಎಸ್‌.ಕೆ.ಎನ್‌.ಜಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಕೋಶದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ  ಕಾರ್ಯಕ್ರಮಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾದ್ಯಾಪಕರಾದ ಡಾ. ವಾಸುದೇವ ಸೇಡಂ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,ದೇಶ  ಪ್ರಬಲ ಆರ್ಥಿಕ ಶಕ್ತಿಯಾಗಿ  ವಿಶ್ವದಲ್ಲಿ ಮೊದಲ ಅ್ಥ ಸ್ಥಾನದಲ್ಲಿ ನಿಲ್ಲಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಠಿಗೆ ಆದ್ಯತೆ ಸಿಗಬೇಕು.ಜನರಿಗೆ ಎಲ್ಲವನ್ನು ಉಚಿತವಾಗಿ ಕೊಡುವುದರಿಂದ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಲು ಸಾಧ್ಯವಾಗುತ್ತದೆಯೇ ಎಮಧು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಗಂಗಾವತಿಯ ವಿಶ್ರಾಂತ ಪ್ರಾದ್ಯಾಪಕರಾದ ಡಾ. ಅಬ್ದುಲ್ ರೆಹಮಾನ ಅವರು ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಬಜೆಟ್ ನಿಂದಲೇ ಎಲ್ಲ ಬದಲಾವಣೆಯನ್ನು ನೀರೀಕ್ಷಣೆ ಮಾಡಲಾಗದು.

ವೈಜ್ಞಾನಿಕ ಹಾಗೂ ತರ್ಕಬದ್ದ ಚಿಂತನೆಗಳಿಂದ  ಕೂಡಿದ ಸಮತೋಲಿತ ಬಜೆಟ್ ಆರ್ಥಿಕ ಬದಲಾವಣೆಗೆ ಕಾರಣವಾಗುತ್ತದೆ ಎಂದರು.ಮುಂಗಡ ಪತ್ರದ ಕುರಿತ ವಿಶೇಷ ಉಪನ್ಯಾಸಕರೂ,ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹೂವಿನ ಹಡಗಲಿಯ ಜಿ.ಬಿ.ಆರ್ ಮಹಾವಿದ್ಯಾಲಯದ  ಪ್ರಾಚಾರ್ಯರಾದ ಪ್ರೊ.ಎಸ್‌.ಎಸ್‌.ಪಾಟೀಲ್ ಅವರು ಈ ವೇಳೆ ಬಜೆಟ್ ಕುರಿತು ಉಪನ್ಯಾಸ ನೀಡಿದರು. ಬಜೆಟ್ ನಲ್ಲಿನ ಅಂಶಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವುದರಿಂದ ಆರ್ಥಿಕ ಅಭಿವೃದ್ದಿ ಸಾಧ್ಯವಾಗುತ್ತದೆ.

ಇದಕ್ಕಾಗಿ ವಿಶೇಷ ಕಾರ್ಯಾಚರಣೆ ತಂಡ ಸಿದ್ದಗೊಳಿಸುವುದು ಅವಶ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ ಅವರು ವಹಿಸಿ ಮಾತನಾಡಿದರು.  ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣ.ಜೆ, ಸಹಾಯಕ ಪ್ರಾದ್ಯಾಕರಾದ ಡಾ.ಕೆ.ಎನ್‌.ರವಿ, ಇತರೆ ಬೋಧಕ ಸಿಬ್ಬಂಧಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಇನ್ನಿತರರು ಉಪಸ್ಥಿತರಿದ್ದರು.