ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ, ಮುಂದುವರೆದ ಶೋಧ ಕಾರ್ಯ
Search continues for man washed away in rainwater
ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಪರೀಶೀಲನೆ ಇಂದು ಸಂಜೆ 5 ಗಂಟೆಗೆ ಮೃತದೇಹ ಪತ್ತೆ
ಬೀದರ 20: ದಕ್ಷಿಣ ಕ್ಷೇತ್ರದ ಬರೂರ ಗ್ರಾಮದ ಪ್ರಭಾಕರ ರೆಡ್ಡಿ ಬರೂರ ನಿಂದ ಗಂಗ್ವಾರ ಮಧ್ಯದಲ್ಲಿರುವ ಸೇತುವೆ ದಾಟಲು ಹೋಗಿ ನೀರನ ರಬಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಸಂಭವಿಸಿದ್ದು ವ್ಯಕ್ತಿಯ ಶೋಧ ಕಾರ್ಯ ಮುಂದುವರಿದಿದೆ ಸ್ಥಳಕ್ಕೆ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಇಂದು ಸಂಜೆ 5 ಗಂಟೆಗೆ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೀದರ್ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಬರೂರ ಗ್ರಾಮದ ಪ್ರಭಾಕರ ರೆಡ್ಡಿ ಬರೂರ ನಿಂದ ಗಂಗ್ವಾರ ಸೇತುವೆ ರಸ್ತೆ ದಾಟಲು ಹರಸಾಹಸ ಮಾಡಿ ರಸ್ತೆ ದಾಟುವ ಸಂದರ್ಭದಲ್ಲಿ ನೀರಲ್ಲಿ ಕೊಚ್ಚಿ ಹೋಗಿದ್ದು, ಕೊಚ್ಚಿ ಹೋದ ವ್ಯಕ್ತಿ ಪತ್ತೆ ಹಚ್ಚಲು ಈಗಾಗಲೇ ಅಗ್ನಿಶಾಮಕ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರೊಂದಿಗೆ ಕಾರ್ಯಚರಣೆಯಲ್ಲಿದ್ದಾರೆ. ವ್ಯಕ್ತಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗುತಿತ್ತು ಇದೀಗ ವ್ಯಕ್ತಿಯ ಮೃತದೇಹ ಪತ್ತೆಹಚ್ಚಲಾಗಿದೆ ಸರಕಾರದ ನಿಯಮಾನುಸಾರ ಮುಂದಿನ ಕಾರ್ಯಾ ಪೂರ್ಣಗೊಳಿಸಿ ಕುಟುಂಬಕ್ಕೆ ಶವ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಇಂದು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಲಾಗಿದೆ ಮತ್ತು ಸೇತುವೆ ಸುತ್ತಮುತ್ತ ನಿಗಾ ವಹಿಸಬೇಕು ಮುಂದೆ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಕಂದಾಯ ಇಲಾಖೆ ಹಾಗೂ ಪೋಲಿಸ್ ಅಧಿಕಾರಿಗಳಿಗೆ ತಿಳಿಸಿದರು. ಮಳೆ ಸುರಿಯುವ ಸಂದರ್ಭದಲ್ಲಿ ಯಾರು ಸಹ ಎಲ್ಲ ಗ್ರಾಮದಲ್ಲಿ ಸೇತುವೆ ಹಳ್ಳ, ಕೊಳ್ಳ ದಾಟಬಾರದು ಎಚ್ಚರ ವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿಕುಮಾರ ದಾಮಾ, ಪಿಎಐ ನಂದಿನಿ, ಗ್ರಾಪಂ ಅಧ್ಯಕ್ಷ ನರಸಿಂಹಮ್ಲೂ ಮುಖಂಡರಾದ ರಾಜಶೇಖರ ರೆಡ್ಡಿ, ದಯಾನಂದ ರೆಡ್ಡಿ, ಇಂದ್ರಾ ರೆಡ್ಡಿ, ಉಲ್ಲಾಸ ರೆಡ್ಡಿ, ಬಲವಂತ ರೆಡ್ಡಿ, ಶ್ರೀನಿವಾಸ ರೆಡ್ಡಿ. ಸುಧಾಕಾರ ರೆಡ್ಡಿ, ನವೀನ ರೆಡ್ಡಿ, ಅನೀಲ ಗುನ್ನಳ್ಳಿ, ರಾಜಶೇಖರ್ ನೌಬಾದ, ರಮೇಶ, ಸಂತೋಷ, ಪ್ರವೀಣ, ಬಲವಂತ ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಮತ್ತಿತರರು ಉಪಸ್ಥಿತರಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 