ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ಅಂಕಲಗಿ ಗ್ರಾಮದ ರೈತನ ಹೋಲಕ್ಕೆ ವಿಜ್ಞಾನಿಗಳ ಬೇಟಿ

ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ಅಂಕಲಗಿ ಗ್ರಾಮದ ರೈತನ ಹೋಲಕ್ಕೆ ವಿಜ್ಞಾನಿಗಳ ಬೇಟಿ Scientists visit Ankalagi village farmer's farm after losses due to poor quality onion seeds

ಕಳಪೆ ಈರುಳ್ಳಿ ಬೀಜದಿಂದ ನಷ್ಟಗೊಂಡ ಅಂಕಲಗಿ ಗ್ರಾಮದ ರೈತನ ಹೋಲಕ್ಕೆ ವಿಜ್ಞಾನಿಗಳ ಬೇಟಿ 

 ವಿಜಯಪುರ  04: ಈರುಳ್ಳಿ ನಷ್ಟ ಕುರಿತು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಡನೆ ಬೇಟಿ ನೀಡಿದ್ದೇವೆ ವರದಿ ಬಂದ್ ತಕ್ಷಣ ಈರುಳ್ಳಿ ಬೀಜದ ಕಂಪನಿ ಬೀಜಗಳು ಕಳಪೆ ಅಂತಾ ಸಾಭಿತಾದರೆ ನಾವೇ ಸ್ವತಃ ದೂರನ್ನು ದಾಖಲಿಸಿ ಪರಿಹಾರ ಕೊಡಿಸುತ್ತೆವೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ ಅವರು ಮಾತನಾಡಿದರು 

ತಾಲೂಕಿನ ಅಂಕಲಗಿ ಗ್ರಾಮದ ಶಾರವ್ವ ಗುರ​‍್ಪ ತಳವಾರ ಸರ್ವೇ ನಂ 75/5 ರ ಒಟ್ಟು 4 ಎಕರೆ ಈರುಳ್ಳಿಯೂ ಸಂಪೂರ್ಣ ಹಾಳಾಗಿರುವ ಕುರಿತು ಜಿಲ್ಲಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿರುವ ಹಿನ್ನಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಡನೆ ಬಾಗಲಕೋಟ ಮತ್ತು ತಿಡಗುಂದಿ ವಿಜ್ಞಾನಿಗಳ ತಂಡ ಗುರುವಾರ ಬೆಳಿಗ್ಗೆ ಬೇಟಿ ನೀಡಿ ಶ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ವರದಿ ಸಲ್ಲಿಸುವುದಾಗಿ ವಿಜ್ಞಾನಿಗಳು ಹೇಳಿದರು. 

ಕೃಷಿ ಇಲಾಖೆಯ ಜಾರಿದಳ ಸಹಾಯಕ ನಿರ್ದೇಶಕರಾದ ಎ.ಪಿ ಬಿರಾದಾರ ಅವರು ಮಾತನಾಡಿ ವಿಜ್ಞಾನಿಗಳೊಂದಿಗೆ ಪ್ಲಾಟ್ ವಿಕ್ಷಣೆ ಮಾಡಿದ್ದೇವೆ ವರದಿ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೆವೆ ಅಂದರು. 

ಈ ವೇಳೆ ತಿಡಗುಂದಿ ಸಸ್ಯ ಶರೀರ ಕ್ರಿಯಾ ಶಾಸ್ತ್ರ ತಜ್ಞರಾದ ಡಾ. ಮಲ್ಲಿಕಾರ್ಜುನ್ ಅವಟಿ,ಸಸ್ಯ ರೋಗಶಾಸ್ತ್ರ ತಜ್ಞರಾದ ರಮೇಶ್ ರಾಥೋಡ್,  ಬಾಗಲಕೋಟೆಯ ಕೀಟಶಾಸ್ತ್ರಜ್ಞರಾದ ಡಾ.ಎಂ.ಎ ವಾಸಿಮ್  ಕೃಷಿ ಇಲಾಖೆಯ ಜಾರಿದಳದ ಸಹಾಯ ಕೃಷು ನಿರ್ದೇಶಕರಾದ ಡಾ.ಎ.ಪಿ ಬಿರಾದಾರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ, ತೋಟಗಾರಿಕಾ ಸಹಾಯಕ ಅಧಿಕಾರಿಗಳಾದ ರಮೇಶ್ ಮಿರ್ಜಿ ಸಹಾಯಕ ಇದ್ದರು 

ಈ ಸಂದರ್ಭದಲ್ಲಿ ರೈತ ಮಹಿಳೆ ಶಾರವ್ವ ಗುರ​‍್ಪ ತಳವಾರ್, ಗುರ​‍್ಪ ತಳವಾರ್, ವಿಜಯಪೂರ ತಾಲೂಕಾ ಅಧ್ಯಕ್ಷರಾದ ಅನಮೇಶ್ ಜಮಖಂಡಿ, ತಾಲೂಕಾ ಸಂಚಾಲಕರಾದ ರಾಜೇಸಾ ನದಾಫ್ , ಅಂಕಲಗಿ ಗ್ರಾಮ ಘಟಕದ ಅಧ್ಯಕ್ಷರಾಧ ಅಮೋಗಿ ಉಕ್ಕಲಿ, ಅಜೀಸ್ ಪಟೇಲ್ ಪಾಟೀಲ್, ಸಿದ್ದಪ್ಪ ಬಿಂಡವಾರ್, ಸುಭಾಷ್ ಹಿಟ್ನಳ್ಳಿ, ತೌಸೀಫ್ ಮುಲ್ಲಾ, ದಾಜಿ ಮಾಲಕರು ಜಾಗೀರ್ದಾರ್, ಬಸವರಾಜ್ ಮಪುಗಾರ್, ಶರಣು ಅವಜಿ ಸೇರಿದಂತೆ ಗ್ರಾಮದ ಅನೇಕ ರೈತರು ಇದ್ದರು