2025-26 ನೇ ಸಾಲಿನ ವಿಜ್ಞಾನ ಸಮಾಜ ಕಲಾ ಕರಕುಶಲ ವಸ್ತು ಪ್ರದರ್ಶನ

2025-26 ನೇ ಸಾಲಿನ ವಿಜ್ಞಾನ ಸಮಾಜ ಕಲಾ ಕರಕುಶಲ ವಸ್ತು ಪ್ರದರ್ಶನ Science, Social, Arts, Crafts Exhibition for the year 2025-26

ಧಾರವಾಡ 05: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮಕ್ಕಳು ಬಾಲ್ಯದಲ್ಲಿ ಸೃಜನಶೀಲತೆಯನ್ನು ರೂಡಿಸಿಕೊಂಡು ಮುಂದೆ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸುವ ಸತ್ಪ್ರಜೆಗಳಾಗಲಿ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ, ಸಮಾಜ ವಿಜ್ಞಾನ, ಕಲಾ ಹಾಗೂ ಕರಕುಶಲ ವಸ್ತುಪ್ರದರ್ಶನವನ್ನು ಜನತಾ ಶಿಕ್ಷಣಸಮಿತಿಯ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ ಅವರು ದೀಪ ಪ್ರಜ್ವಲಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ತಾವೇ ತಯಾರಿಸಿದ ಪ್ರತಿಯೊಂದು ಮಾದರಿಗಳನ್ನು ಉತ್ಸಾಹದಿಂದ ವೀಕ್ಷಿಸಿ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಮಾದರಿಗಳನ್ನು ತಯಾರಿಸಿದ್ದಾರೆ. ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೊರಹಮ್ಮಿಸಲು ಇಂಥ ವಸ್ತುಪ್ರದರ್ಶನಗಳು ಸೂಕ್ತ ವೇದಿಕೆಯಾಗಿದೆ. ಮಕ್ಕಳಿಗೆ ಶಿಕ್ಷಕರು ಉತ್ತಮವಾಗಿ ಮಾರ್ಗದರ್ಶನ ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಜರುಗಲಿ" ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.  

ಈ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಯುತ ಮಹಾವೀರ ಉಪಾದ್ಯೆಯವರು ಮಕ್ಕಳನ್ನು ಅಭಿನಂದಿಸಿ, ಲಭ್ಯವಿರುವ ಸಂಪನ್ಮೂಲಗಳಿಂದ ಅತ್ಯುತ್ತಮ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಶಿಕ್ಷಕರ ಮಾರ್ಗದರ್ಶನ ಅತ್ಯುತ್ತಮವಾಗಿದೆ. ಮಕ್ಕಳು ಇದೇ ರೀತಿ ನವೀನತೆ, ಕ್ರಿಯಾಶೀಲತೆಯನ್ನು ರೂಢಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.  

 ಶ್ಯಾಮಲಾ ಹೆಗಡೆ ಅವರು ಪ್ರಾರ್ಥನೆಗೈದರು. ಮಹಾಂತೇಶ ಕಬನೂರ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಪ್ರಾಚಾರ್ಯೆ ಮೈನಾವತಿ ದಿವಟೆ ಹಾಗೂ ಜೆ.ಎಸ್‌.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ  ಸುಧಾಮಣಿರಾವ್ ಮತ್ತು ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.