ದೇವಾಲಯಗಳಿಗಿಂತ ಹೆಚ್ಚು ಮಹತ್ವವನ್ನು ಇಂದು ಶಿಕ್ಷಣ ನೀಡುವ ಶಾಲೆಗಳಿಗೆ : ಪ್ರಕಾಶ್ ಕೋಳಿವಾಡ
Schools that provide education today are more important than temples: Prakash Koliwada
ರಾಣೆಬೆನ್ನೂರು : 5 ದೇವಾಲಯಗಳಿಗಿಂತ ಹೆಚ್ಚು ಮಹತ್ವವನ್ನು ಇಂದು ಶಿಕ್ಷಣ ನೀಡುವ ಶಾಲೆಗಳಿಗೆ ನೀಡಬೇಕಾದ ಇಂದಿನ ಅಗತ್ಯವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಸೋಮವಾರ ತಾಲೂಕಿನ ಗಂಗಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಸಹಯೋಗದಲ್ಲಿ 2024-25 ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಿರ್ಮಿಸಲಾದ ಎರಡು ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾವು ತಾಲೂಕಿನ ಸಮಗ್ರ ಶಿಕ್ಷಣದ ಅಭಿವೃದ್ಧಿಗಾಗಿ ಒಟ್ಟು12 ಕೋಟಿ ತಮ್ಮ ಅನುದಾನವನ್ನು ಮೀಸಲಾಗಿಟ್ಟಿದ್ದೇನೆ. ಮುಂದುವರೆದ ದೇಶಗಳಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಶಾಲಾ ಕೊಠಡಿಗಳಲ್ಲಿ ಅಳವಡಿಕೆಯಾಗಿಲ್ಲ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ಪ್ರತಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಕ್ಲಾಸ್, ರೋಬೋ ಟೀಚರ್ ಡಿಜಿಟಲ್ ಲೈಬ್ರರಿ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ತಾಲೂಕಿನ ಹೆಮ್ಮೆ ಎಂದರು.
ಪಿಕೆಕೆ ಇನಿಶಿಯೇಟಿವ್, ಶಾಸಕರಾಗುವ ಮುನ್ನ, ಉದ್ಯೋಗ ಮೇಳ, ನೈಟಿಂಗಲ್ ಸ್ಪರ್ಧೆ, ಕೌಶಲ್ಯ ತರಬೇತಿ, ಟೈಲರಿಂಗ್, ಕಂಪ್ಯೂಟರ್ ಇತರೆ ತರಬೇತಿ ಆರಂಭಿಸಿ ತನ್ನ ಸಾಮಾಜಿಕ ಬದ್ಧತೆ ಮೆರೆದಿದೆ ಎಂದರು. ಇಂದಿನ ಮಕ್ಕಳಲ್ಲಿ ಅಪಾರಜ್ಞಾನ ಸಂಪತ್ತು ಮತ್ತು ಕೌಶಲ್ಯ ಚಟುವಟಿಕೆ ಅಳವಡಿಕೆಯಾಗಿದೆ ಶಿಕ್ಷಕರಾದರು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಜಿಲ್ಲೆಯ ಹೆಸರು ವಿಶ್ವದ ಭೂಪಟದಲ್ಲಿ ಗುರುತಿಸುವಂತೆ ಮಾಡುತ್ತಾರೆ ಎನ್ನುವ ನಂಬಿಕೆ ನನ್ನದಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ಆಧುನಿಕ ಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯ ಅವಕಾಶವನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ತಮ್ಮ ಜೊತೆಗೆ ತಮ್ಮ ಕುಟುಂಬದವರನ್ನು ಸಹ ಉತ್ತಮ ಜೀವನ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು. ಎಸ್.ಡಿ. ಎಂ. ಸಿ. ಅಧ್ಯಕ್ಷ ಪರಮೇಶ್ ನೀಲಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಶಾಸಕರ ಪತ್ನಿ ಶ್ರೀಮತಿ ಪೂರ್ಣಿಮಾ ಪ್ರಕಾಶ್ ಕೋಳಿವಾಡ, ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಸಿ. ಆರ್. ಪಿ.ಗಳಾದ ಗಂಗಪ್ಪ ನಾಯಕ್. ಚಿತ್ರದೀಪ,ಎಲ್, ಮಾತನಾಡಿದರು. ವೇದಿಕೆಯಲ್ಲಿ ಗಣ್ಯರಾದ, ಮಂಜಪ್ಪ ಹರಿಜನ, ಕೃಷ್ಣಪ್ಪ ವಾಸನದ,
ಸೋಮಪ್ಪ ಚಿಕ್ಕಳ್ಳವರ, ಸುರೇಶ್ ಹಲವಾಗಲ, ಕೃಷ್ಣಪ್ಪ ಮಾಸ್ತಿ ಜಗದೀಶ್ ಮಲ್ಲೇರ, ಹನುಮಂತಪ್ಪ ಹಲವಾಗಲ, ಕೆಂಚಪ್ಪ ನಂದ್ಯಾಲ, ಶ್ರೀಕಾಂತ್ ಯತ್ನಳ್ಳಿ, ಸುರೇಶ್ ದುರ್ಗದ, ಹನುಮಂತಪ್ಪ, ಹೊನ್ನಪ್ಪ ರಾಹುತನಕಟ್ಟಿ, ಕೃಷ್ಣಪ್ಪ ಚನ್ನಗಿರಿ, ಜಗದೀಶ್ ನಂದ್ಯಾಲ, ಕವಿತಾ ಕೇಲೂರ, ಏ.ಕೆ. ಮೇಗಳಮನಿ, ಎನ್. ಬಿ. ಪೂಜಾರ, ಬಿ.ಎಸ್. ನಾಗರತ್ನ, ಧನಲಕ್ಷ್ಮಿ, ಮಾರುತಿ ಮೆಡ್ಲೇರಿ, ಶಿವಾನಂದ ಮಣಕೂರ, ಅಭಿಯಂತರ ಪ್ರದೀಪ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸೃಷ್ಟಿ ನಂದ್ಯಾಲ ಸಂಗಡಿಗರು ಪ್ರಾರ್ಥಿಸಿದರು. ಸಿ.ಆರ್. ಪಿ. ಮಂಜು ನಾಯಕ್ ಸ್ವಾಗತಿಸಿ, ಪ್ರಧಾನ ಗುರು ಎಸ್.ಎನ್.ದೊಡ್ಡ ಬೂದಿಹಾಳ, ಪ್ರಾಸ್ತಾನಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ಲೆಕ್ಕಪ್ಪಳ್ಳವರ ನಿರೂಪಿಸಿ, ಶ್ರೀಮತಿ ಎಸ್.ಎ. ಸೋಮನಕಟ್ಟಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 