ವಿದ್ಯಾರ್ಥಿಗಳ ಪ್ರಭಾತ್ ಪೇರಿಯೊಂದಿಗೆ ಶಾಲಾ ಪ್ರಾರಂಭೋತ್ಸವ
School commencement ceremony with students' morning prayers
ಮುಗಳಖೋಡ 02: ಪಟ್ಟಣದ ಪಿ ಎಂ ಶ್ರೀ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಪ್ರಾರಂಭೋತ್ಸವ ನಿಮಿತ್ಯ ಶಾಲಾ ಮಕ್ಕಳಿಂದ ಪ್ರಭಾತ್ ಪೇರಿ ನಡೆಸಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಹುಮ್ಮಸ್ಸಿನಿಂದ ಆಗಮಿಸಿದ್ದರು. ಬಳಿಕ ಹಮ್ಮಿಕೊಳ್ಳಲಾಗಿದ್ದ, ಪ್ರಭಾತ್ ತೇರಿ ಹಾಗೂ ಶಾಲಾ ದಾಖಲಾತಿ ಅಭಿಯಾನ ಹಾಗೂ . ಎತ್ತಿನಗಾಡಿಯ ಮೂಲಕ ಪ್ರಭಾತ್ ಪೇರಿಗೆ ಗಣ್ಯಮಾನ್ಯರಿಂದ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೈಕ್ಷಣಿಕ ಜಾಗ್ರತಾ ಘೋಷಣೆಗಳನ್ನು ಹೇಳುತ್ತ ಸಾಗಿದ ಪ್ರಭಾತ್ ಪೇರಿ ಶಾಲೆ ತಲುಪಿದ ಬಳಕ ಸಮಾಪ್ತಿ ಆಯ್ತು. ನಂತರ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಗಳಖೋಡ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ ಸಿ ಬಾಗೆನ್ನವರ, ಶಾಲೆಯ ಮುಖ್ಯ ಗುರುಗಳಾದ ಎಮ್ ಕೆ ಪತ್ತಾರ, ಸಹ ಶಿಕ್ಷಕ ಪಿ ಬಿ ಗಸ್ತಿ, ಸಹ ಶಿಕ್ಷಕ, ಶಿಕ್ಷಕಿಯರು ಶಾಲಾ ಮಕ್ಕಳು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಮಕ್ಕಳ ಪಾಲಕರು ಹಾಜರಿದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 