ಶಾಲಾ ಪ್ರಾರಂಭೋತ್ಸವ: ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸಿದ್ಧು ಮಾಳಿ ಸ್ವಾಗತ
School commencement ceremony: Siddhu Mali welcomes students with sweets
ರನ್ನ ಬೆಳಗಲಿ 01: ಪಟ್ಟಣದ ಮೊದಲ ಶಾಲೆ, ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರ ವಾರ ದಂದು ಶಾಲಾ ಪ್ರಾರಂಭೋತ್ಸವವು ವಿಶೇಷವಾಗಿ ಜರಗಿತು. ಶಾಲೆಯನ್ನು ತಳಿರು, ತೋರಣ, ಕಬ್ಬು, ಹೂವು ಹಾಗೂ ರಂಗೋಲಿಯಿಂದ ಸಿಂಗರಿಸಿ, ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕ ವೃಂದದವರು ಹಾಗೂ ಸದಸ್ಯರೆಲ್ಲರೂ ಸೇರಿ ರಿಬ್ಬನ್ ಕತ್ತರಿಸುವುದರ ಮೂಲಕ ಶಾಲೆಗೆ ಮಕ್ಕಳನ್ನು ಸ್ವಾಗತಿಸಲಾಯಿತು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ಹಂಚಿ, ವಿದ್ಯಾರ್ಥಿಗಳಿಗೆ ಹಾಗೂ ಪಾಲಕ ಪೋಷಕರಿಗೆ ಶಾಲಾ ದಾಖಲಾತಿಯ ಕರಪತ್ರವನ್ನು ನಿಡಿ ಹೆಚ್ಚಿನ ದಾಖಲಾತಿಗೆ ಎಸ್‌ಡಿಎಮ್‌ಸಿ ಅಧ್ಯಕ್ಷ ಸಿದ್ಧು ಮಾಳಿ ವಿನಂತಿಸಿ ಕೊಂಡರು.
ಸರಸ್ವತಿ ದೇವಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ ಮುಖಂಡರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಿದರು. ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಅರ್ಜುನ ದೊಡಮನಿ, ಪಟ್ಟಣ ಪಂಚಾಯತಿಯ ಸದಸ್ಯರಾದ ಪ್ರವೀಣ ಪಾಟೀಲ, ಶಿಕ್ಷಕರಾದ ಆರ್.ಎ. ತಳವಾರ, ವ್ಹಿ.ಎಸ್.ಬಿರಾದಾರ ಗೌರವ ಶಿಕ್ಷಕರಾದ ಚೇತನ ಕೊಣ್ಣೂರ, ಕಾಶಪ್ಪ ಸರವಿ, ಬಂದವ್ವ ಹೊಳೆಪ್ಪಗೋಳ, ವಿಜಯಲಕ್ಷ್ಮೀ ಮಠಪತಿ, ಎಸ್.ಡಿ.ಎಮ್.ಸಿ ಸದಸ್ಯರಾದ ರಾಜು ತೇರದಾಳ, ದುಂಡಪ್ಪ ಕೊಣ್ಣೂರ, ಸಿದ್ದಲಿಂಗಯ್ಯ ಮಠಪತಿ, ನಾಗಪ್ಪ ಲೋಹಾರ, ಮಧುಕರ ಇತಾಪಿ, ರೂಪಾ ಕೋಳಿ, ಲಕ್ಷ್ಮೀ ತೇರದಾಳ, ಮಂಜುನಾಥ ಪಾಟೀಲ ಮತ್ತು ವಿದ್ಯಾರ್ಥಿಗಳು, ಪಾಲಕ ಪೋಷಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 