ಹೈ ವೋಲ್ಟೇಜ್ ವಿದ್ಯುತ್ ತಂತಿಯಿಂದ ಶಾಲಾ ಮಕ್ಕಳು ಆತಂಕದಲ್ಲಿ : ರಫೀಕ ಡಿ. ಕೆ.
School children are worried about high voltage electric wires: Rafeek D. K.
ಯರಗಟ್ಟಿ 25 : ಪಟ್ಟಣದ ಅಂಬೇಡ್ಕರ್ ಶಾಲಾ ಮೈದಾನದಲ್ಲಿ 11 ಕೆ.ವಿ ವಿದ್ಯುತ್ ತಂತಿ ಹಾದು ಹೋಗಿದೆ. ಇದರಿಂದ ಶಾಲಾ ಮಕ್ಕಳು ಆತಂಕದಲ್ಲಿ ಜೀವನ ಸಾಗಿಸಬೇಕಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ರಫೀಕ ಡಿ. ಕೆ. ಆರೋಪಿಸಿದ್ದಾರೆ.
ಈ ಶಾಲೆಯ ಮೇಲೆ ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದು ಹೋಗಿವೆ. ಇವುಗಳನ್ನು ಬದಲಿಸುವಂತೆ ದೂರು ನೀಡಿದ್ದರೂ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಶಾಲೆಯ ಮೇಲೆ ಹೋದರೆ ತಲೆಗೆ ತಗುಲುವಂತೆ ವಿದ್ಯುತ್ ತಂತಿಗಳಿವೆ. ಮಳೆ ಬಂದರೆ ಎಲ್ಲಿ ಶಾಲೆಯ ಗೋಡೆಗಳಿಗೆ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುತ್ತದೆಯೊ ಎಂಬ ಭಯ ಇಲ್ಲಿನ ಮಕ್ಕಳು. ಕೆಲ ಎರಡು ದಿನಗಳ ಹಿಂದೆ ಮೇನ್ ಲೈನ್ ಕಟ್ಟಾಗಿ ಹೋಗಿತ್ತು. ಇಷ್ಟಾದರೂ ಅಧಿಕಾರಿಗಳು ತಂತಿ ಸ್ಥಳಾಂತರಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಬೇಕು ಎಂದು ಶಿಕ್ಷಣ ಸಂಯೋಜಕ ಎಂ. ಬಿ. ಕಡಕೋಳ, ಸಿ.ಆರ್.ಪಿ ವಸಂತ ಬಡಿಗೇರ,ಶಾಲಾ ಪ್ರಧಾನ ಗುರುಗಳಾದ ಪಿ. ಎಂ. ತಳವಾರ, ಶಿಕ್ಷಕರಾದ ಬಿ.ಆರ್.ಮಲ್ಲೂರ, ಎಚ್.ಎ.ಮುಗಜೋಳ, ಡಿ. ಎಚ್. ಭಜಂತ್ರಿ, ಆರ್.ಎ.ಗಂಗೂರ, ಸಂತೋಷ ಚನ್ನಮೆತ್ರಿ, ಫಾರೂಕ್ ಅತ್ತಾರ, ಹಣಮಂತ ಉದ್ದಪ್ಪನವರ ಹಸನ ಹುಸೇನಾಯ್ಕರ, ಹಸನ ಶೀಗಿಹಳ್ಳಿ, ಸೋಮು ರೈನಾಪೂರ ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಅಂಬೇಡ್ಕರ್ ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 