ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ
School anniversary is a good platform for children's talents
ಹೂವಿನಹಡಗಲಿ 01: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಗಳು ಮಕ್ಕಳ ಪ್ರತಿಭೆಯನ್ನು ಹೊರ ತರಲು ಸಹಕಾರಿ. ಶಾಲೆಯಲ್ಲಿನ ಪ್ರತಿ ಪುರಸ್ಕರಿಸುವಂತಹ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಸಂಸ್ಥೆ ಗೌರವಾಧ್ಯಕ್ಷ ಹೆಚ್.ಎಂ.ಬೆಟ್ಟಯ್ಯ ಹೇಳಿದರು. ಪಟ್ಟಣದ ಮಲ್ಲಿಗೆ ವಿದ್ಯಾಸಂಸ್ಥೆ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 26ನೇ ಶಾಲಾ ವಾರ್ಷಿಕೋತ್ಸವದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾಭಿವೃದ್ದಿಗೆ ಅನುವಾಗುವಂತೆ ಪೋಷಕರು ಶಿಕ್ಷಕರ ಜತೆ ಒಡನಾಟ ಇಟ್ಟುಕೊಳ್ಳಬೇಕೆಂದರು.ಡಾ.ಉಮರ್ ಮಾತನಾಡಿದರು. ವಿದ್ಯಾಸಂಸ್ಥೆ ಅದ್ಯಕ್ಷ ಕೆ.ಮೆಹಬೂಬ್ ಸುಬಾನ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ದೈಹಿಕ ಶಿಕ್ಷಣ ಪರಿ ವೀಕ್ಷಕ ರಫಿ ಅಹ್ಮದ್ ಖವಾಸ್, ಡಾ. ಉಮರ್, ಮಲ್ಲಿಗೆ ಕಲಾ ಸಂಸ್ಥೆ ಅದ್ಯಕ್ಷ ಎಲ್.ಖಾದರ್ ಬಾಷಾ, ಸಿಆರ್ ಪಿ. ವಿರೇಶ, ಖಲಂದರ್, ಶಿಕ್ಷಕ ಶೇಕ ಅಹ್ಮದ್, ಸಂಸ್ಥೆ ಕಾರ್ಯ ದರ್ಶಿ ಎಲ್.ಅಕ್ಬರ್, ನಿರ್ದೇಶಕ ರಾದಅರಿಪ್ ಬಾನು, ಹಸೀನಾ, ರಹಮಾನ್ ಸಾಬ್ ಇದ್ದರು. ಮು.ಗು. ಪರ್ವಿನ್ ತಾಜ್ ಸ್ವಾಗತಿಸಿದರು. ಶಿಕ್ಷಕಿ ಕೊಟ್ರಮ್ಮ ವಂದಿಸಿದರು. ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆ ಗೊಂಡಿತು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 