ಶಾಲಾ ದಾಖಲಾತಿ ಆಂದೋಲನ: ಸರಕಾರಿ ಶಾಲೆಗೆ ಬಣ್ಣದ ಚಿತ್ತಾರ ಸರ್ಕಾರಿ ಶಾಲೆ ಸಂಗಾನಟ್ಟಿ ವಿಶೇಷ ವರದಿ-ಪರಶುರಾಮ. ಹ. ಲಮಾಣಿ
School Enrolment Movement: A colourful picture for government schools Government School Sanganatti S
ಬಾಗಲಕೋಟೆ 23: ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸೈದಾಪುರ್ - ಸಮೀರವಾಡಿಯ ಸಮೀಪದ ಸಂಗಾನಟ್ಟಿ ಗ್ರಾಮ ಸರ್ಕಾರಿ ಶಾಲೆಗಳು ಅಂದ್ರೆ ಮೂಗುಮುರಿಯುವವರೇ ಹೆಚ್ಚು ಆದ್ರೆ ಇಂಥಹ ಮಾತನ್ನು ಸುಳ್ಳು ಮಾಡಿರುವ ಹಲವು ಸರ್ಕಾರಿ ಶಾಲೆಗಳಿವೆ. ಅದರಲ್ಲಿ ಮುಧೋಳ ತಾಲೂಕಿನ ಶೈಕ್ಷಣಿಕ ವ್ಯಾಪ್ತಿಯ ಸಂಗಾಟ್ಟೆ ಗ್ರಾಮದ ಇಟ್ನಾಳ ತೋಟ, ಬಸವೇಶ್ವರ ನಗರದ ಸರ್ಕಾರಿ ಶಾಲೆಯೂ ಒಂದ. ಶಾಲೆಯು 1ರಿಂದ 5ನೇ ತರಗತಿಯವರೆಗೆ ಇದೆ. ಒಟ್ಟು 80 ಮಕ್ಕಳು ಓದುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಕ್ಕೆ ಪೂರಕವಾಗಿ ಶಾಲೆಯ ಅಭಿವೃದ್ಧಿಯಲ್ಲಿ ಶಿಕ್ಷಕ ಯಮನೂರ ಲಮಾಣಿ ಅವರು ಪ್ರಮು ಪಾತ್ರ ವಹಿಸಿ ಶಾಲೆಗೆ ಆಧುನಿಕ ಸ್ಪರ್ಶ ನೀಡಿ, ಅಂದಗೊಳಿಸಲಾಗಿದೆ.ದೂರದಿಂದ ನೋಡಿದರೆ ಇನ್ನಾವುದೋ ಖಾಸಗಿ ಶಾಲೆ ಇರಬೇಕೆಂದು ಕಾಣುತ್ತದೆ.
ಹತ್ತಿರ ಹೋದರೆ, ವಾಹ್..ಅದೆಷ್ಟು ಸುಂದರ ಈ ಪುಟ್ಟ ಹಳ್ಳಿಯ ಸರ್ಕಾರಿ ಶಾಲೆ’ ಎಂದು ಚಕಿತಗೊಳಿಸುವಷ್ಟು ಬಣ್ಣದ ಚಿತ್ತಾರದಿಂದ ಸಿಂಗಾರಗೊಂಡಿದೆ.ಶಾಲೆಗೆ ಚಿತ್ರಕಲೆಯ ಮೂಲಕ ಮೆರುಗನ್ನು ಕೊಡಲಾಗಿದೆ. ಕಲಿಕೆಗೆ ಪೂರಕವಾದಂತಹ ಚಿತ್ರಶಲೆಗಳು ಮೂಡಿಬಂದಿದ್ದು, ಮಕ್ಕಳು ಕೂಡಪ್ರತಿದಿನ ಶಾಲೆಗೆ ಬರುವ ಹಾಗೆ ಈ ಚಿತ್ರಗಳು ಆಕರ್ಷಿಸುತ್ತಿವೆ.ಶಾಲಾ ದಾಖಲಾತಿ ಆಂದೋಲನ: 2026-27 ನೇ ಸಾಲಿನ ಶಾಲೆ ದಾಖಲಾತಿ ಆಂದೋಲನವು ಸಂಗಾಟ್ಟಿ ಗ್ರಾಮದ ಇಟ್ಟಾಳ ತೋಟ, ಬಸವೇಶ್ವರ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ನಂತರ ಮುಖ್ಯ ಶಿಕ್ಷಕ ಯಮನೂರ ಲಮಾನ ಮಾತನಾಡಿ ಸರಕಾರದ ಸಂಯೋಜನೆಯಲ್ಲಿ ಅನೇಕ ಸವಲತ್ತುಗಳನ್ನು ಪಡೆದುಕೊಳ್ಳುವುದರೊಂದಿಗೆ ಅವುಗಳಪ್ರಯೋಜನವು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. 2026-27 ನೇ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ದ್ವಿ-ಭಾಷೆಗಳಲ್ಲಿ ಭೋದನೆ ನಡೆಯುತ್ತದೆ.
ಎಲ್ಲಾ ಪೋಷಕರು ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಹೆಚ್ಚು ಪ್ರಯೋಜನವನ್ನು ಪಡೆಯಬೇಕು ಎಂದು ಕರೆ ನೀಡಿದರು.ಸಂಗಾನಟ್ಟಿ ವ್ಯಾಪ್ತಿಯ ಸುತ್ತ ಶಾಲಾ ತನ್ನು ಕೂಗುತ್ತಾ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲುಮುಖ್ಯ ಶಿಕ್ಷಕ ಯಮನೂರ ಲಮಾಣಿ ಅವರು ಸಹಕಕರೊಂದಿಗೆ ಶಾಲೆಗೆ ಬಣ್ಣ ಬಳಿಸಿ ಶಾಲೆಯ ಅಂದ ಹೆಚ್ಚಿಸಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ನೀಡುತ್ತಿದ್ದಾರೆ.-ವಿದ್ಯಾರ್ಥಿ ಪಾಲಕರು.ಮುಖ್ಯ ಶಿಕ್ಷಕರ ಶ್ರಮ ಹಾಗೂ ಗ್ರಾಮಸ್ಥರಸಹಕಾರದಿಂದ ಶಾಲೆ ಉದವಾಗುವುದರ ಜೊತೆಗೆ ಗುಣಮಟ್ಟದ ಶಿಕ್ಷಣದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಬಿಇಒ, ಮುಧೋಳಪ್ರೇರೆಪಿಸಿದರು. ಈ ವೇಳೆ ಆರ್.ವೈ. ನರವಗೋಳ, ಎಸ್. ಡಿ. ಬೆರಜನವರ, ಎಂ. ಆರ್. ನಾಗನೂರ ಮತ್ತು ಪಾಲಕರು, ಮಕ್ಕಳು ಇದ್ದರು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 