ಏಕ ಪೋಷಕ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ,ಬುಕ್ ವಿತರಣೆ
Scholarship for education of single parent children, distribution of books
ಧಾರವಾಡ 08: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಹಾಗೂ ಅಕ್ಸಲರೇಟ ಇಂಡಿಯಾ ಫೌಂಡೆಶನ್ ಟ್ರಸ್ಟ ಹಾಗೂ ಎಪಿಕೇಸಿ ಲೈಫಸೈನ್ಸ ಅನಾಲೇಟಿಕ್ ಪ್ರೈವೆಟ್ ಲಿಮಿಟೆಡೆ ಇವರ ಸಂಯುಕ್ತಾಶ್ರಯದಲ್ಲಿ ದಿ. 06 ರಂದು ಏಕಪೋಷಕ ಹಾಗೂ ಹಾಗೂ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ವಿಧ್ಯಾರ್ಥಿವೇತವನವನ್ನು ಹಾಗೂ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮೊದಲನೇಯ ತರಗತಿಯಿಂದ ಪಿಯುಸಿ, ಪದವಿ, ಇತ್ಯಾದಿ ಓದುತ್ತಿರುವ 150 ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಹಾಗೂ ಪುಸ್ತಕ ವಿತರಣೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತಹ ಎಸ್ ಎಫ್ ಸಿದ್ದನಗೌಡರ ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ ಧಾರವಾಡ ರವರು ಮಾತನಾಡಿ ಎಐಎಫ್‌ಟಿ ತಂಡದವರು ಸುಮಾರು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಸರಕಾರ ಯೋಜನೆಗಳ ಜೊತೆಗೆ ಇಂತಹ ಸಂಸ್ಥೆಗಳು ಮುಂದೆ ಬಂದರೆ ಮಕ್ಕಳಿಗೆ ತುಂಬಾ ಅನೂಕೂಲವಾಗುತ್ತದೆ. ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಅಥಿತಿಗಳಾದ ದೀಪಾ ಜಾವೂರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಇವರು ಮಾತನಾಡಿ ಪಾಲನೆ, ಪೋಷಣೆ ಮತ್ತು ರಕ್ಷಣೆಗೆ ಒಳಪಟ್ಟ ಮಕ್ಕಳಿಗೆ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಅದರೊಂದಿಗೆ ವಿವಿಧ ಸಂಸ್ಥೆಗಳು ಮಕ್ಕಳಿಗೆ ಸಹಾಯ ಒದಗಿಸುತ್ತಿವೆ, ಆದರೆ ಸೌಲಭ್ಯ ಪಡೆದ ಮಕ್ಕಳು ಇದರ ಉಪಯೋಗವನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಅದರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಯಾವುದೇ ಮಗು ತೊಂದರೆಗೆ ಒಳಪಟ್ಟಿದ್ದು ಕಂಡು ಬಂದಲ್ಲಿ ತಕ್ಷಣ 1098 ಗೆ ಅಥವಾ 112 ಗೆ ಕರೆ ಮಾಡುವಂತೆ ತಿಳಿಸಿದರು.
ಅಕ್ಸಲರೇಟ ಇಂಡಿಯಾ ಫೌಂಡೆಶನ್ ಟ್ರಸ್ಟನ ಮಾರ್ಗದರ್ಶಕರಾದ ಪ್ರಕಾಶ ಹಳಿಯಾಳ ರವರು ಮಾತನಾಡಿ ಕೇವಲ ಶಿಷ್ಯವೇತನ ಪಡೆಯುವುದು ಸಾಧನೆಯಲ್ಲ. ಅದಕ್ಕೆ ತಕ್ಕಂತೆ ಮಕ್ಕಳ ಶ್ರಮ ಪಟ್ಟು ಓದಬೇಕು ಸಮಾಜದ ಉತ್ತಮ ನಾಗರಿಕರಾಗಬೇಕು ಒಳ್ಳೆಯ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲೆಯಬೇಕು ಎಂದು ತಿಳಿಸಿದರು. ಅಕ್ಸಲರೇಟ ಇಂಡಿಯಾ ಫೌಂಡೆಶನ್ ಟ್ರಸ್ಟನ ಕಾರ್ಯದರ್ಶಿಗಳಾದ ಸಿವಿ ಕಾಮತ್ ಇವರು ಮಾತನಾಡಿ ನಮಗೆ ಈ ಕೆಲಸವನ್ನು ಪ್ರಾರಂಭಿಸುವಂತೆ ನಮಗೆ ಇಂಟೆನಶನ್ ಇತ್ತು ಆದರೆ ಹೇಗೆ ಸಹಾಯ ಮಾಡಬೇಕು ಎಂಬುದು ಗೊತ್ತಿರಲಿಲ್ಲಾ. ಆದರೆ ದೇವರ ಕೃಪೆಯಿಂದ ಮಕ್ಕಳಿಗೆ ಸಹಾಯ ಮಾಡುವ ಅನೂಕೂಲ ಮಾಡಿಕೊಟ್ಟಿರುತ್ತಾನೆ ಇದರ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ನೀವು ಸಹ ಮುಂಬರುವ ದಿನಗಳಲ್ಲಿ ಇಂತಹ ಮಕ್ಕಳಿಗೆ ಸಹಾಯ ಮಾಡಿ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿದಂತಹ ಕುಮಾರಿ ಸ್ವಾತಿ ಮಾಳಗಿ ಇವರು ಮಾತನಾಡಿ ಇಲಾಖೆಯಿಂದ ಹಾಗೂ ಟ್ರಸ್ಟ ವತಿಯಿಂದ ಕೇವಲ ಮಗುವಿಗೆ ಸಹಾಯ ಮಾಡುತ್ತಿಲ್ಲ ಒಂದು ಕುಟುಂಬಕ್ಕೆ ಸಹಾಯ ಮಾಡಿದಂತೆ ಸರ್ಕಾರದ ಯಾವುದೇ ಯೋಜನೆಯನ್ನು ಅನಿಷ್ಠಾನಗೊಳಿಸುವಲ್ಲಿ ಎಲ್ಲರು ಪ್ರಯತ್ನ ಮಾಡಬೇಕು. ಶಾಲೆಯ ಸುತ್ತಮುತ್ತ ಇರುವ ಅಂಗಡಿಗಳಲ್ಲಿ ಸಿಗರೇಟ ಹಾಗೂ ಇತ್ಯಾದಿ ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ಎಲ್ಲರು ಕ್ರಮವಹಿಸುವಂತೆ ತಿಳಿಸಿದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಅಥಿತಿಯಾದ ಸುಪ್ರಿಯಾ ಭಟ್ ರವರು ಮಾತನಾಡಿ ಸಂಗೀತವು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ವಹಿಇಸುತ್ತದೆ. ಸಂಗೀತದಿಂದ ಮನಸ್ಸಿಗೆ ತುಂಬಾ ಹಿತವನ್ನು ನೀಡುತ್ತದೆ. ಪ್ರತಿ ದಿನ ಓಂಕಾರದಿಂದ ದಿನವನ್ನು ಪ್ರಾರಂಭಿಸಿದರೆ ಒಳ್ಳೆಯದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಕ್ಸಲರೇಟ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮಾರ್ಗದರ್ಶಕರಾದ ರವೀಂದ್ರ, ಗಜಾನನ ಕಾಮತ, ಚೇತನ್ ಸಿ ಎನ್, ಚಂದ್ರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸಮಾಜ ಕಾರ್ಯಕರ್ತರಾದ ಕರೆಪ್ಪ ಕೌಜಲಗಿ ಇವರು ಸ್ವಾಗತಿಸಿದರು.ಕ್ಷೇತ್ರ ಕಾರ್ಯಕರ್ತರಾದ ಮಹಮದ್ ಅಲಿ ತಹಶಿಲ್ದಾರ ಇವರು ನಿರೂಪಿಸಿದರು.
ಸದರಿ ಮಾಹಿತಿಯನ್ನು ತಮ್ಮ ಪತ್ರಿಕೆಯಲ್ಲಿ ಉಚಿತವಾಗಿ ಪ್ರಕಟಿಸಿ ಸಾರ್ವಜನಿಕರಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಹಾಗೂ ಆಕ್ಸಲರೇಟ ಇಂಡಿಯಾ ಫೌಂಡೇಶನ್ ಸಂಸ್ಥೆಯಿಂದ ಒದಗಿಸುತ್ತಿರುವ ಸೌಕರ್ಯಗಳ ಮಾಹಿತಿಯನ್ನು ಸಾರ್ವಜನಿಕರಲ್ಲಿ ಅರಿವನ್ನು ನೀಡಬೇಕಾಗಿ ಈ ಮೂಲಕ ವಿನಂತಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 