ರನ್ನಬೆಳಗಲಿಯಲ್ಲಿ ಸಾವಿತ್ರಿಬಾಯಿ ಅವರ ಜಯಂತಿ ಆಚರಣೆ
Savitribai Jayanti Celebrations in Rannabelagali
ರನ್ನಬೆಳಗಲಿ: ಜ.5: ಪಟ್ಟಣದ ಮುಧೋಳ ನಿಪ್ಪಾಣಿ ಹೆದ್ದಾರಿ ಮಾರ್ಗದಲ್ಲಿರುವ ಮಹಾತ್ಮ ಜ್ಯೋತಿಬಾ ಫುಲೆಯವರ ವೃತ್ತದಲ್ಲಿ ಶನಿವಾರ ದಂದು ಸ್ಥಳೀಯ ಮಾಳಿ ಸಮಾಜ ಸೇವಾ ಸಮಿತಿಯ ಆಶ್ರಯದಲ್ಲಿ "ಸಾವಿತ್ರಿಬಾಯಿ ಫುಲೆ"ಯವರ ಜಯಂತಿ ಕಾರ್ಯಕ್ರಮ ಜರಗಿತು. ಮಹಾದೇವ ಕುಲಗೂಡ ಜ್ಯೋತಿಬಾಪುಲೆ ಯುವ ಸಂಘಟನೆಯ ಅಧ್ಯಕ್ಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶೋಷಣೆಯ ವರ್ಗಗಳ,ಮಹಿಳೆಯರಿಗೆ ಶಿಕ್ಷಣ ನೀಡಿದ ಮಹಾಮಾತೆ, ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅವರು ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಹೋರಾಟಗಾರರಲ್ಲಿ ಪ್ರಮುಖ ರಾಗಿದ್ದಾರೆ.
ಬ್ರಿಟಿಷರ ಆಡಳಿತ ಅವಧಿಯಲ್ಲಿ, ಅನೇಕ ಕಂದಾಚಾರ,ಮೂಡನಂಬಿಕೆಗಳಲ್ಲಿ ನೆರಳುತ್ತಿದ್ದ ಕೆಳವರ್ಗದ ಸಮುದಾಯಗಳ ಉನ್ನತಿಗಾಗಿ ಶಿಕ್ಷಣವೇ ಮದ್ದು ಎಂಬುದನ್ನು ಅರಿತು. ಎಲ್ಲಾ ಶೋಷಣೆಯ ವರ್ಗಗಳ ಮಹಿಳೆಯರಿಗಾಗಿ ಮೊದಲ ಮಹಿಳಾ ಶಾಲೆ ಸ್ಥಾಪಿಸಿದ ಮಹಾಸಾಧಕಿ ಸಾವಿತ್ರಿಬಾಯಿ ಫುಲೆ ಎಂದು ತಿಳಿಸಿದರು. ಯೋಗ ಶಿಕ್ಷಕರಾದ ರಾಘವೇಂದ್ರ ನೀಲನ್ನವರ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಕಿಯರ ಜನ್ಮದಿನವನ್ನಾಗಿ ಸರ್ಕಾರ ಆಚರಿಸಬೇಕು.ರಾಷ್ಟ್ರದ ಮೊದಲ ಶಿಕ್ಷಕಿಯಾಗಿ, ಜೀವನದಿದ್ದಕ್ಕೂ ಅನೇಕ ಕಷ್ಟಗಳನ್ನು ಎದುರಿಸಿ. ಯಾವುದೇ ಕಷ್ಟ ಕಾರ್ಪಣಯಗಳಿಗೆ ಸೋಲದೆ ನೊಂದ ಸ್ತ್ರೀಯರ ಕುಲಕ್ಕೆ ಶಕ್ತಿ ಮಾತೆಯಾಗಿ, ಸ್ತ್ರೀ ಕುಲಕ್ಕೆ ಅವರ ಕೊಡುಗೆ ಅಪಾರವಾಗಿದೆ ಆದರಿಂದ ಅವರ ಜಯಂತಿಯು ರಾಷ್ಟ್ರೀಯ ಶಿಕ್ಷಕಿಯರ ಜಯಂತಿಯಾಗಿ ರಾಷ್ಟ್ರದ ತುಂಬೆಲ್ಲ ಆಚರಿಸುವಂತಾಗಲಿ ಎಂದು ತಿಳಿಸಿದರು.
ಮುಖಂಡರಾದ ಹಣಮಂತ ಇಟಾಣಿ, ಸಂಗಪ್ಪ ಅಮಾತಿ, ಸದಾಶಿವ ಹೊಸಟ್ಟಿ, ಸದಾಶಿವ ಕುಲಗೋಡ, ಸಿದ್ದು ಮಾಳಿ, ಮಹಾಲಿಂಗಪ್ಪ ಲಾಗದವರ, ನಿಂಗಪ್ಪ ಅರೇನಾಡ, ಶ್ರೀಶೈಲ ಕುಲಗೋಡ, ರಂಗಪ್ಪ ಒಂಟಗೋಡಿ, ಪರಮಾನಂದ ಮಾಳಿ, ರಾಮಣ್ಣ ಕುಲಗೋಡ, ಪಂಡಿತ ಪೂಜೇರಿ, ಪ್ರಕಾಶ ಕೊಣ್ಣೂರ, ರಾಮಲಿಂಗ ಯಾದವಾಡ, ಶ್ರೀಶೈಲ ಕಡಪಟ್ಟಿ, ಅಶೋಕ ಗರಗದ, ಸಂದೀಪ ಹೇಗಾಡಿ, ಹೊನ್ನಪ್ಪ ಹೊಸಟ್ಟಿ, ಜ್ಯೋತಪ್ಪ ಕಡಪಟ್ಟಿ, ವಿಷ್ಣು ಹೂಗಾರ, ಭೀಮಶಿ ಜಂಬಗಿ, ಮಹಾಲಿಂಗಪ್ಪ ಹೇಗಾಡಿ, ಅನಂತ ಕುಲಕರ್ಣಿ, ಶಿವಪ್ಪ ಅಮಾತಿ, ಮಲ್ಲು ಧನವಾಡ, ಸುರೇಶ ಮಂಟೂರ ಇನ್ನಿತರರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 