'ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯ

ಶಿವಭಜನೆ ಹಾಗೂ ಸಂಗೀತ ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದೇಶ್ವರ ಶರಣರು ನೆರವೇರಿಸಿದರು


ಮೂಡಲಗಿ 26: ಕತ್ತಲನ್ನು ಹೋಗಲಾಡಿಸುವ ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ ಎಂದು ಇಟ್ನಾಳದ ಸಿದ್ಧೇಶ್ವರ ಶರಣರು ಹೇಳಿದರು.

ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ಅವರ 31ನೇ ಪುಣ್ಯಸ್ಮರಣೆ ಹಾಗೂ ಅವಬಾಯಿ ಐಹೊಳೆ ಅವರ 14ನೇ ಪುಣ್ಯಸ್ಮರಣೆ ನಿಮಿತ್ತವಾಗಿ ಏರ್ಪಡಿಸಿದ್ದ ಶಿವಭಜನೆ ಹಾಗೂ ಸಂಗೀತ ಕಾರ್ಯಕ್ರಮದ ಉದ್ಘಾಟನೆಯ ಸಾನಿಧ್ಯವಹಿಸಿ ಮಾತನಾಡಿದ ಅವರು ಸತ್ಸಂಗದ ಪ್ರಭಾವು ಮನುಷ್ಯನದ ಸಾರ್ಥಕ ಬದುಕನ್ನು ನಿಮರ್ಿಸುತ್ತದೆ ಎಂದರು.

ಇಟ್ನಾಳದ ಶಾಬುಜಿ ಐಹೊಳೆ ಅವರು ಭಜನೆ, ಸತ್ಸಂಗದ ಮೂಲಕ ಅನೇಕರಿಗೆ ಪ್ರೇರಣೆಯಾದರು. ಸದಾಶಿವ ಐಹೊಳೆ ಅವರಂತ ಸಂಗೀತದಲ್ಲಿ ಶ್ರೇಷ್ಠ ಸಾಧಕರಾಗಲು ಕಾರಣೀಕರ್ತರಾದರು ಎಂದರು. 

ಮುಖ್ಯ ಅತಿಥಿ ಬಾಲಶೇಖರ ಬಂದಿ ಮಾತನಾಡಿ ಅನಭಾವ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಲಿವೆ. ನಾಡಿನ ಉದ್ದಗಲಕ್ಕೂ ಇರುವ ಭಜನಾ ಕಲಾ ತಂಡಗಳಿಗೆ ಸರಕಾರವು ಮಾಸಾಶನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅವಶ್ಯವಿದೆ ಎಂದರು.

ಮೂಡಲಗಿ ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿ ನಿದರ್ೇಶಕ ಸದಾಶಿವ ಶೀಲವಂತ, ಪ್ರೊ. ಎ.ಪಿ. ರಡ್ಡಿ ಮಾತನಾಡಿದರು. 

ಅಧ್ಯಕ್ಷತೆವಹಿಸಿದ್ದ ಎಸ್.ಕೆ. ಕೊಪ್ಪದ ರಾಮನಗೌಡ ವಜ್ರಮಟ್ಟಿ ಕಲಾವಿದರಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿದ ಗೌರವಿಸಿದರು. 

ಸಮಿತಿಯ ಅಧ್ಯಕ್ಷ ಗಾಯಕ ಸದಾಶಿವ ಐಹೊಳೆ ಪ್ರಾಸ್ತಾವಿಕ ಮಾತನಾಡಿ ಪ್ರತಿ ತಂದೆ, ತಾಯಿ ಸ್ಮರಣೆ ನಿಮಿತ್ತವಾಗಿ ಭಜನೆ, ಸಂಗೀತ ಉತ್ಸವ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುತ್ತಿದ್ದೇವೆ ಎಂದರು.

ರಾಯಬಾಗ ತಾಲೂಕು ಪಂಚಾಯ್ತಿ ಸದಸ್ಯ ಮಾದು ಮಾರಾಪುರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಠ್ಠಲ ಅರಭಾವಿ, ಸಮಿತಿಯ ಸಂಚಾಲಕ ಮಹಾದೇವ ಐಹೊಳೆ, ರಾಮಕೃಷ್ಣ ಐಹೊಳೆ ಇದ್ದರು. 

ಭಜನೆ, ಸಂಗೀತ ಕಾರ್ಯಕ್ರಮ: ಧಾರವಾಡ ಆಕಾಶವಾಣಿ ನಿಲಯ ಕಲಾವಿದ ಸದಾಶಿವ ಐಹೊಳೆ, ಓಂಕಾರ ಕರಿಕಂಬಿ, ಗುರುಪಾದಪ್ಪ, ಶಿವಪುತ್ರಯ್ಯ ಮಠಪತಿ, ಶಿವಾನಂದ ಹುಲಗಬಾಳಿ, ಚಿದಾನಂದ ಕಾಂಬಳೆ, ಸಿದ್ಲಿಂಗ ಯಡಳ್ಳಿ, ಭೀಮಗೌಡ ಪಾಟೀಲ, ಸತ್ಯಪ್ಪ ಬಸಳಿಗುಂದಿ, ಕಲ್ಲಪ್ಪ ಸುಣಧೋಳಿ ಹಾಗೂ ವಿವಿಧ ಭಜನಾ ಕಲಾವಿದರು ಭಜನೆ, ಗಾಯನಗಳ ಮೂಲಕ ಶ್ರೋತೃಗಳ ಮನತಣಿಸಿದರು.

ಬಾಲಗಾಯಕಿ ಅವಬಾಯಿ ಐಹೊಳೆಯ ಗಾಯನವು ಎಲ್ಲರ ಗಮನಸೆಳೆಯಿತು. 

ಮಹಾದೇವ ಪೋತರಾಜ ನಿರೂಪಿಸಿದರು. ಶಾನೂರ ಐಹೊಳೆ ವಂದಿಸಿದರು.