ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ: ಬಸವಗೋಪಾಲಶ್ರೀ
Satsang brings peace of mind: Basavagopalasri
ಲೋಕದರ್ಶನ ವರದಿ
ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ: ಬಸವಗೋಪಾಲಶ್ರೀ
ಮಹಾಲಿಂಗಪುರ 29: ಸಮೀಪದ ಚಿಮ್ಮಡ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರಿಗಳ ಸ್ವಾಗತ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಸಾಧು ಸಂತರು, ಮಹಾನ್ ಪುರುಷರ ಕುರಿತ ಚರ್ಚೆಯಿಂದ ಜ್ಞಾನವೃದ್ಧಿಯಾಗುತ್ತದೆ, ದೇಶಪ್ರೇಮ ಬೆಳೆಯುತ್ತದೆ ಹಾಗೂ ಮಕ್ಕಳಿಗೆ ದೇಶದ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ನಾವು ಯಾರಿಗೂ ಅನ್ಯಾಯ ಮಾಡಬಾರದು ಅಣ್ಯಾಯ ಸಹಿಸಲೂಬಾರದು. ದೇಶದ ವಿಷಯ ಬಂದಾಗ ಒಗ್ಗಟ್ಟಾಗಿರಬೇಕೆಂದರು.
ಕಟ್ಟೆಯ ಮೇಲೆ ಕುಳಿತು ಇನ್ನೊಬ್ಬರ ಕುರಿತು ಮಾತನಾಡುತ್ತ ನಮ್ಮ ಘನತೆ, ಗೌರವಗಳನ್ನು ನಾವೇ ಹಾಳು ಮಾಡಿಕೊಳ್ಳುವುದಕ್ಕಿಂತ ದೇವರು ಮಹಾಪುರುಷರ ಕುರಿತ ಚರ್ಚೆಮಾಡಿದಲ್ಲಿ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಹೇಳಿದರು.
ಬಾವಲತ್ತಿಯ ವಿಜಯ ವೇದಾಂಗ ಮಾತನಾಡಿ ದೇವರು ಧರ್ಮದದಲ್ಲಿ ಜೊಳ್ಳು ಪೊಳ್ಳು ಹೋಗಿ ಗಟ್ಟಿ ಕಾಳುಗಳು ಮಾತ್ರ ಉಳಿಯಲಿವೆ. ಶರಣ ಮಹಾತ್ಮರು ನಿಜ ಭಕ್ತರಲ್ಲಿ ಯಾವತ್ತೂ ನೆಲೆಸಿರುತ್ತಾರೆಂದರು.
ಯೂಥ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ ಬಂಡಿಗಣಿ ಮಠದ ಇತಿಹಾಸ ಶ್ರೀಗಳ ಸಾರ್ವಜನಿಕ ಸೇವೆಗಳ ಕುರಿತು ವಿವರಿಸಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ,ಬಿ ಎಸ್ ಪಾಟೀಲ,ಆರ್ ಎಂ ಬಗನಾಳ, ಹರಳಯ್ಯ ಅಥಣಿ, ದುಂಡಪ್ಪಾ ಪಾಟೀಲ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ದಾನೇಶ್ವರ ಶ್ರೀಗಳನ್ನು ಬ್ರಹತ್ ರಥದ ಮೇಲೆ ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಾವಿರಾರು ಜನ ಭಕ್ತಾಧಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 