ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸತೀಶಕುಮಾರ ಅಡವಿಗೆ ಸನ್ಮಾನ
Satishkumar Adawi honored at Hazrat Peer Raj Baskar Devara Jatrotsava of Googihal village
ಲೋಕದರ್ಶನ ವರದಿ
ತಾಂಬಾ 10 : ಉಪಕಾರ ಮಾಡಿದವರನ್ನು ಯಾವತ್ತು ಸ್ಮರಿಸಬೇಕು ಅದು ಮನುಷ್ಯ ಧರ್ಮ ಆದರೆ ಇವತ್ತಿನ ಜನರು ಮಾಡಿದ ಉಪಕಾರವನ್ನು ಬೀಟ್ಟು ಕ್ಷಣಿಕ ಯೋಚನೆ ಮಾಡುತ್ತಾರೆ ಅಂತವರಿಗೆ ಹಜರತ್ ಪೀರ್ ರಾಜ್ ಬಸ್ಕರ್ ತಕ್ಕ ಶಿಕ್ಷೇನಿಡುತ್ತಾನೆ ಎಂದು ನೂತನ ಕೆಡಿಪಿ ಸದಸ್ಯ ಸತೀಶಕುಮಾರ ಅಡವಿ ಹೆಳಿದರು.
ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಒಂದು ಚಿಕ್ಕ ಗ್ರಾಮಕ್ಕೆ ಜಮೀನು ನೀಡಿದ ಬೊರಳಗಿ ಮನೆತನದವರು ಹಾಗೂ ಈ ಗ್ರಾಮಕ್ಕೆ ವಿದುತ್ ಸಂಪರ್ಕ ಕಲ್ಪಿಸುವ ಕಾರ್ಯಮಾಡಿದ್ದು ಸಾಲೂಟಗಿ ಯೋಗಪ್ಪಗೌಡ್ರು ಈ ಗ್ರಾಮವು ಒಂದು ಪುಟ್ಟ ದ್ವೀಪದಂತೆ ಇತ್ತು ಯಾವದೆ ರಸ್ತೆ ಸಂಪರ್ಕ ಇರಲಿಲ್ಲ ಅದನ್ನು ಗುರುತ್ತಿಸಿ ಇಲ್ಲಿ ರಸ್ತೆ ಸಂಪರ್ಕ ಕಲ್ಪಿಸಿ ಕೊಟ್ಟ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕಾರ್ಯ ಶ್ಲಾಘನಿಯ.
ಅದರಂತೆ ಈಗ ಬಸ್ ಸೌಕರ್ಯನು ಕುಡಾ ಮಾಡಿದ್ದಾರೆ. ಇದಕ್ಕೆಲ್ಲಕ್ಕೂ ಕಾರಣಿಕರ್ತರಾದ ಕರಿಮಸಾಬ ಕಸಾಬ ಹಾಗೂ ಶರಣಪ್ಪ ಅಡವಿ ಅವರನ್ನು ನೆನಪಿಸಿ ಕೊಳ್ಳಬೆಕೆಂದರು. ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಪ್ರಕಾಶ ಮುಂಜಿ, ರವಿ ನಡಗಡ್ಡಿ, ಸುನಂದ ಎಂಪೂರೆ, ಮಲ್ಲಪ್ಪ ಸಣ್ಣತಂಗಿ, ಅಶೋಕ ಚೌಧರಿ, ನಜೀರ ಗೌರ, ಕಾಂತನಗೌಡ ಪಾಟೀಲ, ಹಿರಗಪ್ಪ ನಾಯ್ಕೋಡಿ, ಮಶ್ಯಾಕ ಕಸಾಬ, ಹಮ್ಮಿದ ಚೌಧರಿ, ವಿಠ್ಠಲ ಅವಟಿ ಸೇರಿದಂತೆ ಮತ್ತಿತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 