ಸತೀಶ ಪಾಟೀಲ ಅವರಿಗೆ ಹಾವೇರಿ ಕಚೇರಿಯಲ್ಲಿ ಗೌರವಿಸಿ ಸನ್ಮಾನ
Satish Patil honored at Haveri office
ಹಾವೇರಿ 21 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಹಾವೇರಿ ಪ್ರಾದೇಶಿಕ ನಿರ್ದೇಶಕರಾಗಿ ಆಗಮಿಸಿದ ರಾಘವೇಂದ್ರ ಕುಲಕರ್ಣಿ ಅವರಿಗೆ ಹಾಗೂ ಹಾವೇರಿ ಪ್ರಾದೇಶಿಕ ಕೇಂದ್ರದಿಂದ ಬಾಗಲಕೋಟಿ ಜಿಲ್ಲೆಯ ಪ್ರಾದೇಶಿಕ ಕೇಂದ್ರಕ್ಕೆ ವರ್ಗಾವಣೆಯಾದ ಕ್ರಿಯಾಶೀಲ ನಿರ್ದೇಶಕರಾಗಿದ್ದ ಸತೀಶ ಪಾಟೀಲ ಅವರಿಗೆ ಹಾವೇರಿ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಕಾಯಕವೇ ಕೈಲಾಸ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸತೀಶ ಪಾಟೀಲ ಅವರು ಹಾವೇರಿ ಪ್ರಾದೇಶಿಕ ಕೇಂದ್ರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಾ ಬರುತ್ತಿದ್ದರು. ಅವರು ಸಿಬ್ಬಂದಿಗಳೊಂದಿಗೆ ಒಳ್ಳೆಯ ಸಹೋದರತ್ವ ಮನೋಭಾವನೆಯನ್ನು ಹೊಂದಿದ್ದರು. ಪ್ರಾಮಾಣಿಕ ಕೆಲಸ ಮಾಡುತ್ತಾ ಜಿಲ್ಲೆಯಲ್ಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಪ್ರವೇಶ ಪಡೆಯಲು ತುಂಬಾ ನಿರಂತರವಾಗಿ ಶ್ರಮವಹಿಸುತ್ತಿದ್ದರು.
ಅವರ ವರ್ಗಾವಣೆಯಿಂದ ಬಾಗಲಕೋಟೆಗೆ ಹೋಗುತ್ತಿರುವುದು ತುಂಬಾ ನೋವು ಅನಿಸುತ್ತಿದೆ. ಆದರೆ ಇಲಾಖೆಯ ನಿಯಮದಿಂದ ಹೋಗುವುದು ಅನಿವಾರ್ಯ. ಸತೀಶ ಪಾಟೀಲ ಅವರಿಗೆ ಒಳ್ಳೆಯದು ಆಗಲಿ ಎಂದು ಭಾವನಾತ್ಮಕವಾಗಿ ಸಿಬ್ಬಂದಿಗಳು ಮಾತನಾಡಿದರು.ಇದೇ ಅವಧಿಯಲ್ಲಿ ನೂತನವಾಗಿ ಆಗಮಿಸಿದ ರಾಘವೇಂದ್ರ ಕುಲಕರ್ಣಿ ಅವರಿಗೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಸಿಬ್ಬಂದಿಗಳು ಅವರನ್ನು ಸ್ವಾಗತಿಸಿದರು.ಇದೇ ಅವಧಿಯಲ್ಲಿ ನಿಂಗಪ್ಪ ಆರೇರ ಅವರು ಅಮ್ಮಾ ಸಂಸ್ಥೆ(ರಿ) ವತಿಯಿಂದ ಸತೀಶ ಪಾಟೀಲ ಅವರಿಗೆ ಗೌರವಿಸಿದರು.ಈ ಸಂದರ್ಭದಲ್ಲಿ ಪ್ರಾದೇಶಿಕ ಕೇಂದ್ರದ ಸಿಬ್ಬಂದಿಗಳಾದ ಕೊಟ್ರೇಶ ಬಸೇಗಣ್ಣಿ, ಕಿರಣ ಚಲವಾದಿ,ಸುನೀಲಕುಮಾರ ಪಾಟೀಲ, ಪ್ರಶಾಂತ ಎನ್ ಹಾಗೂ ರಾಮಚಂದ್ರ ಗಾಳೆಪ್ಪನವರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 