ಸತೀಶ ಚೌಗುಲೆ ಜನ್ಮದಿನೋತ್ಸವ, ಸಮಾರೋಪ ಸಮಾರಂಭ
Satish Chowgule Birthday Celebration, Closing Ceremony
ರಾಯಬಾಗ, 30 : ತೆರೆ ಮರೆಯಲ್ಲಿ ಇದ್ದು ನಮ್ಮ ಜೀವನಕ್ಕೆ ಬೆಳಕಾಗಿರುವ ತಂದೆತಾಯಿಯನ್ನು ವೃದ್ಧಾಪ್ಯದಲ್ಲಿ ಜೋಪಾನವಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಹಿರೇವಡ್ಡಟ್ಟಿ ಮಣಕವಾಡ ಅನ್ನದಾನಿಶ್ವರ ದೇವ ಮಂದಿರ ಮಹಾಮಠದ ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗುರುವಾರ ಪಟ್ಟಣದ ಚೌಗುಲೆ ಕಾಲೇಜ ಆವರಣದಲ್ಲಿ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸತೀಶ ಚೌಗುಲೆ ಜನ್ಮದಿನೋತ್ಸವ ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜ ನಮ್ಮನ್ನು ಗೌರವಿಸುವಂತೆ ನಾವು ಸಾಧನೆ ಮಾಡಬೇಕು. ನಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕೆಂದು ಕಲಿಸುವುದು ಶಿಕ್ಷಣ, ಅಂತಹ ಒಳ್ಳೆಯ ಶಿಕ್ಷಣವನ್ನು ಚೌಗುಲೆ ಶಿಕ್ಷಣ ಸಂಸ್ಥೆ ನೀಡುತ್ತಿರುವ ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ಯುವ ಪೀಳಿಗೆಗೆ ವಿಜ್ಞಾನಿಗಳು ಆದರ್ಶವಾಗಬೇಕೆಂದರು.ಜಮಖಂಡಿಯ ಓಲೆಮಠದ ಆನಂದ ದೇವರು, ಜುಂಜರವಾಡದ ಶಿವಲಿಂಗ ದೇವರು ಮಾತನಾಡಿದರು. ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷೆ ಭಾರತಿ ಚೌಗುಲೆ, ಕಾರ್ಯದರ್ಶಿ ವಿನಯ ಚೌಗುಲೆ, ಐಶ್ವರ್ಯ ಚೌಗುಲೆ, ಸಿದ್ದು ಚೌಗುಲೆ, ಪ್ರಾಚಾರ್ಯ ಎಸ್.ಎಸ್.ದಿಗ್ಗೆವಾಡಿ, ಎಸ್.ಎ.ನಾಂದಣಿ, ಎಸ್ ಎಸ್ ಕಾಡಾಪುರೆ, ಎಮ್.ಐ.ಬಡಿಗೇರ, ಶಿವಾಜಿ ಭೂಯಿ , ಸುರೇಶ ಶಿಂದೆ, ಆಶಾ ಕಾಂಬಳೆ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 