ಸಾತಿಹಾಳ ಮಾರುತೇಶ್ವರ ಜಾತ್ರಾ ಮಹೋತ್ಸವ
Satihal Maruteshwara Fair Festival
ದೇವರಹಿಪ್ಪರಗಿ 02 : ಪಟ್ಟಣದ ಸಮೀಪವಿರುವ ಸಾತಿಹಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾರುತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ಹಾಗೂ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರದಂದು ಬೆಳಿಗ್ಗೆ 7ಗಂಟೆಯಿಂದ ತೊಟ್ಟಿಲೋತ್ಸವ ಶ್ರೀ ಮಾರುತೇಶ್ವರ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಹೋಮ ಹವನ ನೆರವೇರುವುದು.ನಂತರ 11ಗಂಟೆಂಗೆ ಕುಂಕುಮಪೂಜೆ ನೆರವೇರಿಸಲಾಗುವುದು, ಮಧ್ಯಾಹ್ನ ಗುತ್ತಿಗೆದಾರ ಎಸ್.ಐ.ಡೋಣೂರಮಠ ಅವರಿಂದ ಅನ್ನ ಸಂತರೆ್ಣ ನಡೆಯಲಿದೆ.
ಸಾರ್ವಜನಿಕರಿಂದ ಸಾಯಂಕಾಲ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ,ರಾತೂ 7ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ ನಂತರ ರಾತ್ರಿ ಗಂಟೆಗೆ "ಮುತ್ತಿನಂತ ಅತ್ತೆಗೆ" ಅರ್ಥಾರ್ಥ ಮೋಸದ ಮೈದುನ... ಎಂಬ ಸುಂದರ ಸಾಮಾಜಿಕ ನಾಟಕದ ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ ಹಾಗೂ ವಿ.ಪ ಸದಸ್ಯರಾದ ಸುನಿಲಗೌಡ ಪಾಟೀಲ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಉದ್ಘಾಟಕರಾಗಿ ಮಾಜಿ ಶಾಸಕರುಗಳಾದ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಶರಣಪ್ಪ ಸುಣಗಾರ, ವಿಶೇಷ ಅವ್ಹಾನಿತರಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಪ್ರಭುಗೌಡ ಲಿಂಗದಳ್ಳಿ ಚಬನೂರ, ಆನಂದಗೌಡ ದೋಡಮನಿ, ಮುಖಂಡರಾದ ನಾಗಪ್ಪ ಶಿವೂರ, ಗುರುಶಾಂತ ಧಾಶ್ಯಾಳ,ಬಿ.ಕೆ.ಪಾಟೀಲ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸುವರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 