ಸರ್ವಜ್ಞ ವಿದ್ಯಾಪೀಠ: ಶಾಲಾ ಸಂಸತ್ ಚುನಾವಣೆ

ಸರ್ವಜ್ಞ ವಿದ್ಯಾಪೀಠ: ಶಾಲಾ ಸಂಸತ್ ಚುನಾವಣೆ  Sarvajna Vidyapeetha: School Parliament Election

 ತಾಳಿಕೋಟಿ : ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸನ್ 2026-27 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಇತ್ತೀಚೆಗೆ ಜರುಗಿತು. ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಚುನಾವಣೆಯನ್ನು ತಂತ್ರಜ್ಞಾನ ಬಳಸಿ ಸುಗಮವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಹಾಗೂ ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಯಾಗಿ ಶಾಲೆಯ ಮುಖ್ಯ ಗುರಗಳಾದ ಸಂತೋಷ ಪವಾರ ಕಾರ್ಯನಿರ್ವಹಿಸಿದರು. ಸಹಾಯಕರಾಗಿ ರಾಜು ಜವಳಗೇರಿ, ಬಸವರಾಜ ಚಳ್ಳಗಿ,ಶಾಂತಗೌಡ ಬಿರಾದಾರ, ಮತ್ತು ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಿದರು. ಮತದಾನದ ನಂತರ ನಡೆದ ಮತ ಎಣಿಕೆಯಲ್ಲಿ ಕನ್ನಡ ಮಾಧ್ಯಮದಲ್ಲಿ: ನಾಲ್ಕನೇ ತರಗತಿ ಪ್ರತಿನಿಧಿಯಾಗಿ ಶ್ರೇಯಾ ಕುಂಬಾರ, 5ನೇ ತರಗತಿ ಸಮರ್ಥ ಚಳೇಕಾರ, 6ನೇ ತರಗತಿ ಅಭಿಷೇಕ್ ಚಿನಗುಡಿ, 7ನೇ ತರಗತಿಯಲ್ಲಿ ಸಮರ್ಥ ಬನ್ನಿ, 8ನೇ ತರಗತಿ ನೀರೀಕ್ಷಿತ ಚಿನಗುಡಿ, 9ನೇ ತರಗತಿ ವಿಭಾಗದಲ್ಲಿ ಅ ಭಾಗದಲ್ಲಿ ಸೃಷ್ಟಿ ಬಿರಾದಾರ, ಬಿ ವಿಭಾಗದಲ್ಲಿ ಶಿವಕುಮಾರ ಪೂಜಾರಿ, 10ನೇ ತರಗತಿ ಅ ವಿಭಾಗದಲ್ಲಿ ಯಶ್ ರಾಜ್ ರಾಥೋಡ್ ಬಾಯ್ ಭಾಗದಲ್ಲಿ ಚನ್ನಬಸವ ಸಜ್ಜನ್ ಆಯ್ಕೆಯಾದರು.

ಆಂಗ್ಲ ಮಾಧ್ಯಮ ವಿಭಾಗದಲ್ಲಿ: ನಾಲ್ಕನೇ ತರಗತಿಯಲ್ಲಿ ನಾನಾಗೌಡ ದೇಸಾಯಿ, 5ನೇ ತರಗತಿಯಲ್ಲಿ ಹುಜೆರ್ ಹಚ್ಚಾಳ, 6ನೇ ತರಗತಿಯಲ್ಲಿ, ಸಂಗೀತ ದುಮಗೊಂಡಿ, ನಾರಾಯಣ ಸಿಂಗ್ ದೇವಿ,7ನೇ ತರಗತಿಯಲ್ಲಿ ಸಮರ್ಥ್‌ ಹೂಗಾರ, 8ನೇ ತರಗತಿಯಲ್ಲಿ ಚನ್ನಬಸವ ಚಣಗಿ, 9ನೇ ತರಗತಿ ಅ ವಿಭಾಗದಲ್ಲಿ ಆರಾಧ್ಯ ಗೋನಾಳ, ಬ ವಿಭಾಗದಲ್ಲಿ ಆದಿನಾಥ ಜೋಶಿ, 10ನೇ ತರಗತಿ ಶ್ರೇಯ ಕದಂ, ಬ.ವಿಭಾಗದಲ್ಲಿ ಸಚಿನ್ ಬಾಗೇವಾಡಿ ವಿದ್ಯಾರ್ಥಿಗಳು ಆಯ್ಕೆಯಾದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ ಚುನಾವಣೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಖಾತೆಗಳನ್ನು ಹಂಚಿಕೊಡಲಾಯಿತು.