ಸರ್ದಾರ ವಲ್ಲಭಭಾಯ್ ಪಟೇಲರು ದೇಶದ ಏಕೀಕರಣದ ರೂವಾರಿ: ಗುರುಮಾತೆ ಎಂ.ಎನ್.ಮುಂಜಣ್ಣಿ
Sardar Vallabhbhai Patel is the father of the country's unification: Gurumate M.N. Munjanni
ವಿಜಯಪುರ ಅ 31, ಪಟೇಲರು ತಮ್ಮ ದೂರದರ್ಶಿತ್ವ, ದೇಶಭಕ್ತಿ, ಜಾಣತನ, ಮನವೊಲಿಸುವ ಸಾಮರ್ಥ್ಯದಿಂದ ದೇಶದ ಏಕತೆಗೆ ಶ್ರಮಿಸಿದ ಅಪ್ರತಿಮ ವ್ಯಕ್ತಿಯಾಗಿದ್ದಾರೆ. ಅವರ ತತ್ವಾದರ್ಶ ಎಲ್ಲರಿಗೂ ಮಾರ್ಗದರ್ಶಿ ಎಂದು ಗುರುಮಾತೆಯರಾದ ಎಂ.ಎನ್.ಮುಂಜಣ್ಣಿ ಮತ್ತು ಶಿಕ್ಷಕಿಯರಾದ ಶಬಾನ ಬೇಗಂ ಕೋತ್ವಾಲ್ ಮೆಡಮ್ ರವರು ಹೇಳಿದರು.
ಶುಕ್ರವಾರದಂದು ನಗರದ ಕೆಬಿಎಚ್‌ಪಿಎಸ್, ಶಾಲೆ ನಂ.10 ಜೋರಾಪುರ ಪೇಠ ವಿಜಯಪುರ ಈ ಶಾಲೆಯ ವತಿಯಿಂದ ಹಮ್ಮಿಕೊಂಡ ಈ ಶಾಲೆಯಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ನಿಮಿತ್ಯ ರಾಷ್ಟ್ರೀಯ ಏಕತಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ವಕೀಲ ವೃತ್ತಿ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ, ಸರಳ ಜೀವನ, ಕಷ್ಟ ಕಾರ್ಪಣಯಗಳಿಗೆ ತಮ್ಮನ್ನು ತಾವು ಅರ್ಿಸಿಕೊಂಡು, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅಸ್ಪೃಶ್ಯತೆ, ಮದ್ಯಪಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದ ಅವರು ಯುವ ಜನತೆಗೆ ಸ್ಫೂರ್ತಿಯ ಸೆಲೆ. ಅವರ ಆದರ್ಶ ಮತ್ತು ದೇಶ ಪ್ರೇಮವು ವಿದ್ಯಾರ್ಥಿಗಳಲ್ಲೂ ಬೆಳೆಯಬೇಕು ಎಂದು ಆಶಿಸಿದರು.
ಮುಖ್ಯ ಶಿಕ್ಷಕಿಯರಾದ ಎಂ.ಎನ್.ಮುಂಜಣ್ಣಿ ಮತ್ತು ಶಬಾನ ಬೇಗಂ ಕೋತ್ವಾಲ್ ಮೆಡಮರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ದಾರ್ ಪಟೇಲ್ ಅವರು ನಿಜವಾದ ರಾಜಕೀಯ ಪ್ರಜ್ಞೆ ಹೊಂದಿದ್ದ ಮುತ್ಸದ್ಧಿಯಾಗಿದ್ದರು. ಅವರ ಏಕೈಕ ಗುರಿ ದೃಢವಾದ ಮತ್ತು ಸಂಪೂರ್ಣ ಏಕೀಕೃತವಾದ ಭಾರತವನ್ನು ಕಟ್ಟುವುದಾಗಿತ್ತು ಎಂದು ಹೇಳಿದರು.
ಶಿಕ್ಷಕಿಯರಾದ ಶಬಾನ ಬೇಗಂ ಕೋತ್ವಾಲ್ ಮೆಡಮ್‌ರವರು ಕಾರ್ಯಕ್ರಮ ನಿರ್ವಹಿಸಿದರು. ಅತಿಥಿ ಶಿಕ್ಷಕಿ ಪೂಜಾ.ಕುಲಕರ್ಣಿ ಮೆಡಮ್ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಮಾತೆಯರಾದ ಎಂ.ಎನ್.ಮುಂಜಣ್ಣೀ, ಝಡ್.ಎಸ್.ಆಸ್ಕಿ, ಪಿಕೆ. ಖರಾತ್ ಸರ್, ಎ.ಐ. ಮಾಗಿ, ಮೆಡಮ್, ಶಬಾನ ಬೇಗಂ ಕೋತ್ವಾಲ್, ಪೂಜಾ.ಕುಲಕರ್ಣಿ ಮೆಡಮ್ ಶಿಕ್ಷಕಿಯರು ಮತ್ತು ಶಾಲಾ ಸಿಬ್ಬಂದಿಯವರು ಎಸ್‌ಡಿಎಂಸಿ ಅಧ್ಯಕ್ಷರು, ಎಸ್‌ಡಿಎಂ.ಸಿ. ಸದಸ್ಯರಾದ ಶಿವಾನಂದ. ಅಫಜಲಪೂರರವರು ಈ ಕಾರ್ಯಕ್ರಮದಲ್ಲಿ ಇದ್ದರು. ಎಲ್ಲ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನೀಯರು, ಪಾಲಕರು, ತಾಯಂದಿರರು, ಇನ್ನೀತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 