ತಾಯಿಯ ಸ್ಮರಣಾರ್ಥ ಸಸಿ ವಿತರಣೆ: ಪರಿಸರ ಕಾಳಜಿಗೆ ಮೆಚ್ಚುಗೆ
Sapling distribution in memory of mother: Appreciation for environmental concern
ಲೋಕದರ್ಶನ ವರದಿ
ಕಲಕೇರಿ: “ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು” ಎಂಬ ಮಾತಿನಂತೆ ತಾಯಿಯ ಮಹಿಮೆ ಅಪಾರ. ಹೆತ್ತ ತಾಯಿ ನೀಡಿದ ನೋವು- ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ಮಕ್ಕಳ ಮೇಲೆ ಸದಾ ಪ್ರೀತಿ ಹಾಗೂ ವಾತ್ಸಲ್ಯ ಧಾರೆ ಎರೆಯುವ ತಾಯಿಯ ಸ್ಥಾನಕ್ಕೆ ಸಾಟಿಯಿಲ್ಲ ಎಂದು ಯೋಗಿ ತಂಡದ ಮಹಾಗುರುಗಳಾದ ಡಾ. ಎನ್. ಚಿಕ್ಕಮಠ ಹೇಳಿದರು.
ಕಲಕೇರಿ ಗ್ರಾಮದ ಮಾತೃಸೇವಾ ಸಂಸ್ಥೆಯ ವತಿಯಿಂದ ಮಾತೋಶ್ರೀ ದಿ. ಗಂಗಮ್ಮ ಅಡಕಿ ಅವರ 13ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಸ್ಥಳೀಯ ವಿದ್ಯುತ್ ವಿತರಣಾ ಕೇಂದ್ರದ (ಕೆಇಬಿ) ಆವರಣದಲ್ಲಿ ಸಸಿ ನೆಟ್ಟು, ನೀರುಣಿಸುವ ಮೂಲಕ ಸಸಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾತೃಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಅಡಕಿ ಮಾತನಾಡಿ, ತಮ್ಮ ತಾಯಿಯ ಸವಿನೆನಪಿಗಾಗಿ ಕಳೆದ 12 ವರ್ಷಗಳಿಂದ ವಿವಿಧ ಶಾಲಾ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳಿಗೆ ಸುಮಾರು 500ರಿಂದ 800 ಹಣ್ಣಿನ ಹಾಗೂ ಹೂವಿನ ಸಸಿಗಳನ್ನು ವಿತರಿಸುತ್ತಾ ಬಂದಿರುವುದಾಗಿ ತಿಳಿಸಿದರು. ತಾಯಿಯ ಸ್ಮರಣಾರ್ಥ ಪರಿಸರದ ಬೆಳವಣಿಗೆಗಾಗಿ ನಡೆಸುತ್ತಿರುವ ಈ ಅಳಿಲು ಸೇವೆ ನಿರಂತರವಾಗಿರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಎಂ. ಸಾಲೋಡಗಿ, ಜವಾಹರ ಕುಲಕರ್ಣಿ, ಬಸವರಾಜ ಜಂಬಗಿ, ಗೂಳಪ್ಪ ವಡವಡಗಿ, ಶ್ರೀಶೈಲ ನಾಯ್ಕೋಡಿ, ಎಚ್.ಜಿ. ಕಳ್ಳಿಮನಿ, ಈರಘಂಟೆಪ್ಪ ಮೊಪಗಾರ, ಕೆ.ಆರ್. ಪಾಟೀಲ, ಮಡು ಜಂಬಗಿ, ಮಲ್ಲಿಕಾರ್ಜುನ ಬಳ್ಳಾರಿ, ಮನೋಜ ಸಜ್ಜನ, ಶಂಕರಗೌಡ ಪಾಟೀಲ, ಪುನೀತ ಸಜ್ಜನ, ರಾಜಶೇಖರ ಗುಮಶೆಟ್ಟಿ, ಕುಮಾರಗೌರವ ಅಡಕಿ, ಸುಪ್ರೀತ್ ಅಡಕಿ, ಬಲವಂತ ಮೊಪಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 