ಶಿಂದಿಕುರಬೇಟ ಸಿದ್ಧರಾಮೇಶ್ವರ ಶಾಲೆಯಲ್ಲಿ ಸಂಕಾಂ್ರತಿ ಹಬ್ಬ ಆಚರಣೆ
Sankranti festival celebrated at Siddarameshwara School, Shindikurabeta
ಘಟಪ್ರಭಾ, 15 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕನ್ನಡ ಆದರ್ಶ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮಕರ ಸಂಕ್ರಮಣ ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಹಳ್ಳಿ ಸೊಗಡಿನ ಬಟ್ಟೆಯನ್ನು ಧರಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿನಿಯರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವು ಜನಮನಸೊರೆಗೊಂಡಿತು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಖ್ಯಾದದಿಂದ ತಯಾರಿಸಿದ ಆಹಾರವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸಂಕ್ರಾಂತಿ ಹಬ್ಬದ ಕಳೆ ಎದ್ದುಕಾಣುತಿತ್ತು.
ವೇದಿಕೆ ಮೇಲೆ ಶಾಲೆಯ ಸ್ಥಳಿಯ ಆಡಳಿತ ಮಂಡಳಿ ಅಧ್ಯಕ್ಷ ಜ್ಯೋತ್ತೆಪ್ಪ ಬಂತಿ, ಭೀಮಣ್ಣ ಕಳಸನ್ನವರ, ಮಹ್ಮದ ಇಸಾಕ ಅನಸಾರಿ, ಮಾರುತಿ ಶಿರಗುರಿ, ಬಾಳು ದೇವಮಾನೆ, ವಿಠ್ಠಲ ಕಾಶಪ್ಪಗೋಳ, ಸದಾಶಿವ ಆಲೋಶಿ, ರಾಮಪ್ಪ ಕಟ್ಟಿಕಾರ, ತುಕಾರಾಮ ಬೆಳಗಲಿ, ವಿಠ್ಠಲ ಪಾಟೀಲ, ಬಸವರಾಜ ಗೋಕಾಕ, ವಿಠ್ಠಲ ಕರೋಶಿ, ಮುಖ್ಯೋಪಾಧ್ಯಾಯ ಮಹಾದೇವ ಕಡಕೋಳ, ಎಸ್.ಎಸ್. ದೊಡಮನಿ, ಎಸ್.ಎಸ್.ಮೊಗಾನಿ, ಎಸ್.ಆರ್.ತರಾಳ, ಪೂಜೇರಿ ಹಾಗೂ ವಡರಟ್ಟಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮವನ್ನು ಆರಧ್ಯಾ ಬೆಳಗಲಿ ಸ್ವಾಗತಿಸಿದರು. ಪವಿತ್ರಾ ಪಟಾಯತ ನಿರೂಪಿಸಿದರು.ಸನಮ ತಟಗಾರ ವಂದಿಸಿದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 