ಹಿರಾಶುಗರ ಕಾರ್ಖಾನೆಗೆ ಎ.ಬಿ. ಮತ್ತು ಕತ್ತಿ ಒಂದಾದರೂ

ಹಿರಾಶುಗರ ಕಾರ್ಖಾನೆಗೆ ಎ.ಬಿ. ಮತ್ತು ಕತ್ತಿ ಒಂದಾದರೂ Sankeshwar News- 28-07

ಸಂಕೇಶ್ವರ 28 :ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಈ ಸಲ ಪ್ರಸಕ್ತ ಸಾಲಿನ ಹಂಗಾಮವು ಆರಂಭವಾಗುತ್ತದೆಯೋ ಅಥವಾ ಇಲ್ಲವೋ ಕಬ್ಬು ಪೂರೈಸುವ ರೈತರಲ್ಲಿ ಹಾಗೂ ಕಾರ್ಮಿಕರಲ್ಲಿ ಆತಂಕ ಉಂಟಾಗಿತ್ತು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಹಕಾರಿ ತತ್ವದಅಡಿಯಲ್ಲಿ ಪ್ರಾರಂಭಿಸಿದ್ದರು ಅಲ್ಲಿಯ ಕೆಲವೊಂದು ಕಾರ್ಖಾನೆ ಆವರಣದಲ್ಲಿದ್ದ ಮಹಾದೇವ ಮಂದಿರ ಕಾರ್ಖಾನೆಯ ಕೆಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು ಕಳೆದ 2-3 ತಿಂಗಳಲ್ಲಿ ಸಂಚಾಲಕ ಮಂಡಳಿಯವರು ಜೊಲ್ಲೆ ಇವರ ಏಕ ಪಕ್ಷಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದನ್ನು ಸಂಚಾಲಕ ಮಂಡಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದಲ್ಲಿ ಜೊಲ್ಲೆಯವರ ಮೇಲೆ ಮನಸ್ತಾಪಗೊಂಡು ನಿರ್ದೇಶಕರು ಹಾಗೂ ಜೊಲ್ಲೆ ನಡುವೆ ಭಿನ್ಮಮತ ಸ್ಪೋಟಕಗೊಂಡ ಬಗ್ಗೆ ರೈತರಲ್ಲಿ ಕಾರ್ಮಿಕರಲ್ಲಿ ಈ ಸುದ್ದು ಕಾಳ್ಗಿಚ್ಚಿನಂತೆ ಹರಡಿದಾಗ ಒಂದಾನೊಂದು ಕಾಲದಲ್ಲಿ ರಾಷ್ಟ್ರ ಮಟ್ಟದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಿದ್ಧ ಕಾರ್ಖಾನೆಯಂದು ಹೆಗ್ಗಳಿಕೆಗೆ ಪಾತ್ರವಾಗಿತ್ತು, ಸಂಚಾಲಕ ಮಂಡಳಿ ಹಾಗೂ ಜೊಲ್ಲೆಯವರ ಮುಸ್ಕೀನ ಗುದ್ದಾಟದಿಂದ ಈ ಕಾರ್ಖಾನೆಗೆ ಬೀಗ ಹಾಕುವ ಎಲ್ಲ ಲಕ್ಷಣಗಳು ಕಾಣುತ್ತಿದ್ದವು, ಅಂದಿನ ಮುಂಬೈ ಪ್ರಾಂತದಲ್ಲಿ ಸಹಕಾರಿ ಸಚಿವರಾಗಿದ್ದ ದಿವಂಗತ ಎಂ.ಪಿ. ಪಾಟೀಲರು ಸಹಕಾರ ಮಹರ್ಷಿ ದಿವಂಗತ ಅಪ್ಪಣ್ಣಗೌಡಾ ಪಾಟೀಲ ಮತ್ತು ಸಹಕಾರಿ ಹಿರಿಯ ಧುರೀಣ ದಿವಂಗತ ಬಸಗೌಡಾ ಪಾಟೀಲ ದಿವಂಗತ ವಿಶ್ವನಾಥ ಕತ್ತಿ ಇವರೆಲ್ಲರೂ ಸಚಿವರ ಕಡೆ ಹೋದಾಗ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಿದರು, ಈಗ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವುದು ಇದನ್ನು ಮನಗಂಡು ಕಳೆದ 31 ವರ್ಷಗಳಿಂದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಮಾಜಿ ಸಚಿವ ಎ.ಬಿ. ಪಾಟೀಲರು ಈ ಕಾರ್ಖಾನೆಯ ಕಡೆಗೆ ಸುಳಿಯುತ್ತಿರಲಿಲ್ಲ ಈಗ ಕಳೆದ 2-3 ತಿಂಗಳಲ್ಲಿ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಹುಕ್ಕೇರಿ ಶಾಸಕ ನೀಖೀಲ ಉಮೇಶ ಕತ್ತಿ ಹಾಗೂ ಎ.ಬಿ. ಪಾಟೀಲರು ಇವರೆಲ್ಲರೂ ಸೇರಿ ಸಂಧಾನ ಕ್ರಿಯೆ ನಡೆಸಿ ಸಹಕಾರಿ ತತ್ವದ ಮೇಲೆ ಈ ಸಕ್ಕರೆ ಕಾರ್ಖಾನೆಯನ್ನು ಮುನ್ನಡೆಸಲು ಒಪ್ಪಂದದೊಂದಿಗೆ ಬಂದರು ನಂತರ ಶ್ರಾವಣ ಮಾಸದ ಶುಭ ಮೂಹುರ್ತದಲ್ಲಿ ಪುರಾತಣ ಕಾಲದಿಂದ ಪ್ರಸಿದ್ಧವಾದ ಶಂಕರಚಾರ್ಯ ಮಠಕ್ಕೆ ಭೆಟ್ಟಿ ನೀಡಿ ಶಂಕರಲಿಂಗ ಮಠದ ಶ್ರೀಗಳಾದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಜಿಯವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಎಲ್ಲ ಧುರೀಣರು ಶಾಲು ಹೂಮಾಲೆ ಹಾಕಿ ಅವರನ್ನು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು ನಂತರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಆವರಣದಕ್ಕೆ ಆಗಮಿಸಿ ದಿವಂಗತ ಅಪ್ಪಣಗೌಡಾ ಪಾಟೀಲ ಮತ್ತು ದಿವಂಗತ ಬಸಗೌಡಾ ಪಾಟೀಲ ಇವರ ಪ್ರತಿಮೆಗೆ ಮಾಜಿ ಸಚಿವ ಎ.ಬಿ. ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಹುಕ್ಕೇರಿ ಮತಕ್ಷೇತ್ರದ ಶಾಸಕ ನೀಖೀಲ ಉಮೇಶ ಕತ್ತಿ ಇವರೆಲ್ಲರೂ ಪ್ರತಿಮೆಗೆ ಹೂಮಾಲೆ ಹಾಕಿ ಆಶೀರ್ವಾದ ಪಡೆದುಕೊಂಡರು ನಂತರ ಸಕ್ಕರೆ ಕಾರ್ಖಾನೆಯ ಕಛೇರಿಯಲ್ಲಿ ಪತ್ರಿಕಾ ಗೋಷ್ಟಿಯನ್ನು ಏರಿ​‍್ಡಸಿದ್ದರು ಮಾಜಿ ಸಚಿವ ಎ.ಬಿ. ಪಾಟೀಲರು ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ತಾವುಗಳಾದ ಎ.ಬಿ.ಪಾಟೀಲ, ರಮೇಶ ಕತ್ತಿ, ದಿವಂಗತ ಉಮೇಶ ಕತ್ತಿ ನಾವೆಲ್ಲರೂ ಸಚಿವರಾಗಿ ಹಾಗೂ ರಮೇಶ ಕತ್ತಿಯವರು ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದಾರೆ ಇದಕ್ಕೆಲ್ಲ ಕಾರಣ ಈ ಕಾರ್ಖಾನೆಯ ಮಾತೃಭೂಮಿಯನ್ನು ಕತ್ತಿ ಕುಟುಂಬ ಹಾಗೂ ಎ.ಬಿ. ಪಾಟೀಲ ಕುಟುಂಬವು ಮರೆಯಲು ಸಾಧ್ಯವಿಲ್ಲವೆಂದು ಎ.ಬಿ. ಪಾಟೀಲರು ತಿಳಿಸಿದರು. 

ಅಲ್ಲದೇ ರೈತರ ಹಾಗೂ ಕಾರ್ಮಿಕರ ಜೀವನಾಡಿಯಾಗಿದ್ದ ಈ ಸಕ್ಕರೆ ಕಾರ್ಖಾನೆಯನ್ನು ರಮೇಶ ಕತ್ತಿಯವರು ಮತ್ತು ತಾವು ರೈತರ ಸಹಕಾರದಿಂದ ಸಹಕಾರಿ ತತ್ವದ ಅಡಿಯಲ್ಲಿ ಮುನ್ನಡೆಸಲು ಸನ್ನಧರಾಗಿದ್ದವೆಂದು ಹೇಳಿದರು, ಕಾರ್ಖಾನೆಯ ಸದಸ್ಯ ಹಾಗೂ ಶಾಸಕ ನೀಖೀಲ ಉಮೇಶ ಕತ್ತಿ ಕಾರ್ಖಾನೆಯ ಚೇರಮನ ಬಸವರಾದ ಕಲ್ಲಟ್ಟಿ ವೈಸ್ ಚೇರಮನ ಅಶೋಕ ಪಟ್ಟಣಶೆಟ್ಟಿ, ಅಪ್ಪಾಸಾಹೇಬ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಸುರೇಶ ಬೆಲ್ಲದ, ಪ್ರಭುದೇವ ಪಾಟೀಲ, ಪರಸಪ್ಪಾ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮಲ್ಲಿಕಾರ್ಜುನ ಪಾಟೀಲ, ರಮೇಶ ಕತ್ತಿ, ಪೃಥ್ವಿ ಕತ್ತಿ, ಪವನ ಕತ್ತಿ, ವಿನಯಗೌಡಾ ಪಾಟೀಲ, ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ರೋಹನ ನೇಸರಿ, ನಂದು ಮುಡಸಿ, ಪಿಂಟೂ ಕೋಳಿ, ಚಿದಾನಂದ ಕರ್ದನ್ನವರ ಹಾಗೂ ಮೊದಲಾದವರು ಉಪಸ್ಥಿತ ಇದ್ದರು.