ಲಿಂಗೈಕ್ಯರಾದ ಉತ್ತಂಗಿಯ ಶಂಕರ ಸ್ವಾಮೀಜಿ
Sankara Swamiji of Uttangi passed away
ಹೂವಿನಹಡಗಲಿ 02: ತಾಲ್ಲೂಕಿನ ಉತ್ತಂಗಿ ಗ್ರಾಮದ ಶಂಕರಸ್ವಾಮಿ ಸಂಸ್ಥಾನ ಮಠದ ಪೀಠಾದಿಪತಿ ಶಂಕರ ಸ್ವಾಮೀಜಿ ಅವರು ಶನಿವಾರ ಅನಾರೋಗ್ಯದಿಂದಾಗಿ ಶ್ರೀಗಳು ಲಿಂಗೈಕ್ಯರಾದರು. ಶ್ರೀಗಳುಮಠದ 138 ಎಕರೆ ಜಮೀನಿನಲ್ಲಿ ಇವರು ತನಗಾಗಿ ಏನನ್ನೂ ಬೇಡಲಿಲ್ಲ, ಮಠಕ್ಕಾಗಿ ಯಾರ ಬಳಿಯೂ ಕೈ ಚಾಚಲಿಲ್ಲ. ಬದಲಾಗಿ ಮಠದ ಆಸ್ತಿಯನ್ನೇ ಸರ್ಕಾರ, ಸಮಾಜದ ಒಳಿತಿಗಾಗಿ ಅರ್ಿಸಿ ನಿಸ್ಪೃಹ ಸೇವೆ ಸಲ್ಲಿಸಿದರು. ಸ್ವಾಮೀಜಿ ಅಗಲಿಕೆಗೆ ಗ್ರಾಮದ ಜನರು ಕಂಬನಿ ಮಿಡಿದು, ಭಕ್ತಿಯ ನಮನ ಸಲ್ಲಿಸಿದರು.ಉತ್ತಂಗಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗ್ರಾಮ ಪಂಚಾಯಿತಿ, ಸಮುದಾಯ ಭವನ, ಸರ್ಕಾರಿ ಆಸ್ಪತ್ರೆ, ರಂಗಮಂದಿರ ಕಟ್ಟಡ ನಿರ್ಮಾಣಕ್ಕೆ ಹಾಗೂ ಹೊಳಗುಂದಿ.ಹನಸಿ, ಒಡೆಯಂಪುರದಲ್ಲಿ ಶಾಲೆ, ವಸತಿ ನಿಲಯ, ಆಶ್ರಯ ಪ್ಲಾಟ್, ಸ್ಮಶಾನಕ್ಕೆ ಸ್ವಾಮೀಜಿ ಬೆಲೆ ಬಾಳುವ ಮಠದ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಡೆಯಂಪುರ ಶ್ರೀಗಳ ಹುಟ್ಟೂರು. ಪಾಲಾಕ್ಷಯ್ಯ-ದೇವೀರಮ್ಮ ಅವರ ಪೂರ್ವಾಶ್ರಮದ ತಂದೆ, ತಾಯಿ. 1962ರಲ್ಲಿ ಉತ್ತಂಗಿಯ ಶಂಕರ ಸಂಸ್ಥಾನಮಠದ 19ನೇ ಪೀಠಾಧಿಪತಿಯಾಗಿ ನಿಯುಕ್ತಿಗೊಂಡು,ಶಂಕರ ಸ್ವಾಮೀಜಿ ಅಂತಿಮಯಾತ್ರೆ ಭಕ್ತರ ಸಮ್ಮುಖದಲ್ಲಿ ಭಾನುವಾರ ಜರುಗಿತು.
ಕೆರೆಯ ನೀರು ಕೆರೆಗೆ ಚೆಲ್ಲುವೆ, ಇದರಲ್ಲಿ ನನ್ನದೆಂಬುದು ಏನೂ ಇಲ್ಲ. ಊರು ಅಭಿವೃದ್ಧಿಯಾಗಬೇಕು. ಮುಂದಿನ ಪೀಳಿಗೆ ಶಿಕ್ಷಣ ಪಡೆದು, ಸುಖವಾಗಿ ಬದುಕಬೇಕೆಂದು ಶಂಕರ ಸ್ವಾಮೀಜಿ ಹೇಳುತ್ತಿದ್ದರು’ ಎಂದು ಕರಿಗಾರ ಕೊಟ್ರ್ಪ ಸ್ಮರಿಸಿದರು.??ತಿಮ ದರ್ಶನ: ಉಜ್ಜಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಹಿರಿಶಾಂತವೀರಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಸೋಮಶಂಕರ ಸ್ವಾಮೀಜಿ. ಅಭಿನವ ಚನ್ನಬಸವ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ಹಂಪಸಾಗರದ ಶಿವಲಿಂಗ ರುದಮುನಿ ರುದ್ರಮುನಿ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮೀಜಿ ಇತರೆ ಮಠಾಧೀಶರು, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಇತರರು ಶ್ರೀಗಳ ಅಂತಿಮ ದರ್ಶನ ಪಡೆದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 