ಪಿಎಲ್ಡಿ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಸಂಜೀವ ಕುಲವಿಮಠ ಅವಿರೋಧ ಆಯ್ಕೆ

ಪಿಎಲ್ಡಿ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಸಂಜೀವ ಕುಲವಿಮಠ ಅವಿರೋಧ ಆಯ್ಕೆ  Sanjeeva Kulavimatha unanimously elected as the new Vice President of PLD Bank


ಬ್ಯಾಡಗಿ, 03: ಬ್ಯಾಡಗಿ ಪಿಎಲ್ಡಿ (ಕಐಆ) ಬ್ಯಾಂಕ್ನ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಸಂಜೀವ ಕುಲವಿಮಠ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಜಿ.ಬಿ. ಲೋಕೇಶ್ ಘೋಷಿಸಿದರು.  

ನೂತನ ಉಪಾಧ್ಯಕ್ಷರಾದ ಸಂಜೀವ ಕುಲವಿಮಠ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸನ್ಮಾನಿಸಿ ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ವಿರೂಪಾಕ್ಷಪ್ಪ ಬಳ್ಳಾರಿ, ತಮ್ಮ ಸರ್ಕಾರದ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರ ಪರಿಣಾಮ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿತ್ತು.

ಆದರೆ ಪ್ರಸ್ತುತ ಬ್ಯಾಂಕ್ ಅಭಿವೃದ್ಧಿಗೆ ಅಗತ್ಯವಿರುವ ನೆರವು ಲಭ್ಯವಾಗುತ್ತಿಲ್ಲ. ಬ್ಯಾಂಕ್ನ ಅಭಿವೃದ್ಧಿ ಹಾಗೂ ಅಸ್ತಿತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ತಾಲೂಕು ಅಧ್ಯಕ್ಷ ನಿಂಗಪ್ಪ ಬತ್ತಲಕಟ್ಟಿ ಮಾತನಾಡಿ, ಸರ್ಕಾರ ಇತರೆ ಬ್ಯಾಂಕ್ಗಳಿಗೆ ನೆರವು ನೀಡಿದರೂ ಪಿಎಲ್ಡಿ ಬ್ಯಾಂಕ್ಗೆ ಸಮರ​‍್ಕ ಸಹಾಯಧನ ದೊರೆಯುತ್ತಿಲ್ಲ. ಪಕ್ಷಾತೀತವಾಗಿ ಎಲ್ಲರೂ ಬ್ಯಾಂಕ್ನ ಸುಧಾರಣೆ ಹಾಗೂ ಅಭಿವೃದ್ಧಿಗೆ ಕೈಜೋಡಿಸಿದರೆ ಮಾತ್ರ ಬ್ಯಾಂಕ್ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಿಜಯ ಮಾಳಗಿ, ಈರಣ್ಣ ಚೌಟಿ, ಶಿವಯೋಗಿ ಉಕ್ಕುಂದ, ಸುಭಾಷ ಮಾಳಗಿ, ವಿನಯ ಹಿರೇಮಠ, ಪ್ರವೀಣ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.