ತಾಲೂಕ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಪುನರಾಯ್ಕೆ
Sangamesh Utnal re-elected as the new president of the Taluka Journalists' Association
ದೇವರ ಹಿಪ್ಪರಗಿ 10: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಅವರು 2 ನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ 2025/28 ನೇ ಸಾಲಿನ ಕಾನಿಪ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಗಮೇಶ ಉತ್ನಾಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಕುಂಬಾರ, ಉಪಾಧ್ಯಕ್ಷರಾಗಿ ಶ್ರೀಧರ ನಾಡಗೌಡ, ಮಂಜುನಾಥ ಬ್ಯಾಕೋಡ, ಖಜಾಂಚಿಯಾಗಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಕಾರ್ಯದರ್ಶಿಗಳಾಗಿ ಹುಸೇನ ಕೊಕಟನೂರ, ಮಳೆಪ್ಪಗೌಡ ಬಿರಾದಾರ ಸೇರಿದಂತೆ ಎಲ್ಲ 7 ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಉಸ್ತುವಾರಿಗಳಾದ ಮಹೇಶ ಶೆಟಗಾರ, ಮೋಹನ ಕುಲಕರ್ಣಿ, ಸೀತಾರಾಮ ಕುಲಕರ್ಣಿ, ಸಮೀರ ಇನಾಮದಾರ, ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟರು.
ಹಿರಿಯ ಪತ್ರಕರ್ತ ಮಹಮದ ರಫೀಕ ಮೋಮಿನ ಭೀಮಣ್ಣ ದಿಡ್ಡಿಮನಿ ಈರನಗೌಡ ಪಾಟೀಲ ಪ್ರವೀಣ ಕುಲಕರ್ಣಿ, ಸಂತೋಷ ಬಿಜ್ಜರಗಿ, ಮಲ್ಲಿಕಾರ್ಜುನ ಕಬ್ಬಿನ, ಹಸನ ನದಾಫ್, ರಫೀಕ್ ಪತ್ತೆ ಅಹ್ಮದ್, ಅಣ್ಣಸಾಹೇಬ ಹೂಗಾರ, ಸೋಮನಾಥ ನಡಗೇರಿ, ನಬಿರಸೂಲ ಗುಡ್ನಾಳ, ಶಂಕರಲಿಂಗ ಧೂಳಖೇಡ, ಮಯೂರ ಕುಮಾರ ತಿಳಗೂಳಕರ, ದುಂಡಪ್ಪಗೌಡ ಸಿಂದಗಿ, ಮಹಿಬೂಬ ಕೊಕಟನೂರ, ಸಿದ್ದು ಕಾಟಕರ, ಅಹಮದಅಲಿ ಮುಲ್ಲಾ, ಬಿ ಎಂ ವಂದಾಲ, ಎಸ್ ಎಸ್ ಜಮಾದಾರ ಸೇರಿದಂತೆ ಕಾ. ನಿ. ಪ. ತಾಲೂಕ ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 