ನಿಯಮಾನುಸಾರ ಶೀಘ್ರದಲ್ಲಿ ಸಾಲ ಮಂಜೂರ ಮಾಡಿ : ಸಂಸದ ಜಗದೀಶ ಶೆಟ್ಟರ್
Sanction loans as per rules soon: MP Jagadish Shettar
ಬ್ಯಾಂಕ ಪ್ರಗತಿ ಪರೀಶೀಲನಾ ಸಭೆ
ಬೆಳಗಾವಿ 29: ಜಿಲ್ಲೆಯ ವಿವಿಧ ಇಲಾಖೆಗಳ ಯೋಜನೆಗಳಡಿಯಲ್ಲಿ ಬ್ಯಾಂಕುಗಳಲ್ಲಿ ಸಲ್ಲಿಕೆಯಾದ ಸಾಲದ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಅರ್ಹರಿಗೆ ಸಾಲ ಮಂಜೂರು ಮಾಡಬೇಕು ಎಂದು ಜಿಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಲೋಕಸಭಾ ಸಂಸದರಾದ ಜಗದೀಶ್ಶೆಟ್ಟರ ಅವರು ಸೋಮವಾರ ಜಿಲ್ಲಾಪಂಚಾಯತ ಸಭಾಭವನದಲ್ಲಿ ನಡೆದ ಲೀಡ ಬ್ಯಾಂಕ ಪ್ರಗತಿ ಶೀಲನಾ ಸಭೆಯಲ್ಲಿ ಭಾಗವಹಿಸಿ ನುಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಬ್ಯಾಂಕುಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ವಿನಾಕಾರಣ ವಿಳಂಬ ಮಾಡದೇ ಸಾಲವನ್ನು ಮಂಜೂರ ಮಾಡುವ ಮೂಲಕ ಸರ್ಕಾರಿ ಯೋಜನೆಯ ನೆರವನ್ನು ಒದಗಿಸುವಂತೆ ಸೂಚಿಸಿದರು.
ಕಒಎಎಃಙ,ಕಒಖಃಙ್ಘಂಕಙ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪುವಂತೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಮತ್ತು ರೈತರ ಬೆಳದಂತಹ ಫಸಲುಗಳನ್ನು ನೈಸರ್ಗಿಕ ವಿಕೋಪಕಗಳಿಂದ ಕಾಪಾಡಿಕೊಳ್ಳಲು ಕಡ್ಡಾಯವಾಗಿ ಎಲ್ಲ ರೈತರನ್ನು ಪ್ರಧಾನಮಂತ್ರಿ ಫಸಲು ವಿಮಾಯೋಜನೆಯಡಿ ಒಳಗೊಳ್ಳುವಂತೆ ಮಾಡಿ ರೈತರು ಎಲ್ಲ ಕಾರ್ಯಕ್ರಮಗಳ ಸುದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸಂಸದ ಜಗದೀಶ್ಶೆಟ್ಟ ರ್ತಿಳಿಸಿದರು.
ಇದೇ ವೇಳೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ, ವಿವಿಧ ಇಲಾಖೆಗಳ ಅಡಿ ಸ್ವೀಕರಿಸಿದ ಸಾಲ ಮಂಜೂರಾತಿ ಅರ್ಜಿಗಳನ್ನು ನಿಯಮಾನುಸಾರ ತ್ವರೀತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಬ್ಯಾಂಕ ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಬ್ಯಾಂಕ ಸುರಕ್ಷತೆ ಬಗ್ಗೆ ಕಾಳಜಿ ವಹಿಸತಕ್ಕದ್ದು. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಎಲ್ಲ ಬ್ಯಾಂಕುಗಳಲ್ಲಿ ಸಿಬ್ಬಂದಿಗಳು ಜನ ಸಾಮಾನ್ಯರ ಅನುಕೂಲವಾಗುಂತೆ ಆದಷು ್ಟ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಜಿ.ಪಂ ರಾಹುಲ ಶಿಂಧೆ ತಿಳಿಸಿದರು.
ಲೀಡ್ಬ್ಯಾಂಕ್ಪ್ರಾ ದೇಶಿಕಮ್ಯಾನೇಜರ ಪ್ರಶಾಂತ ಘೋಡಕೆ ಮಾತನಾಡಿ ಜೂನ್ ಅಂತ್ಯದವರೆಗೆ ಜಿಲ್ಲೆಯ ಎಲ್ಲ ಬ್ಯಾಂಕಗಳು ಸೇರಿಕೃಷಿ ಕ್ಷೇತ್ರಕ್ಕೆ ರೂ.1406 ಕೋಟಿ, ಕೈಗಾರಿಕ ಕ್ಷೇತ್ರಕ್ಕೆ 2653.27 ಕೋಟಿ, ಶೈಕ್ಷಣಿಕ ಕ್ಷೇತ್ರಕ್ಕೆ ರೂ.13.57 ಕೋಟಿ, ಗೃಹಸಾಲ 75.03 ಕೊಟಿ ಸೇರಿದಂತೆ ಒಟ್ಟು 10801.80 ಕೋಟಿ ಸಾಲವನ್ನು ವಿತರಿಸಿರುವುದಾಗಿ ಸಭೆಗೆ ತಿಳಿಸಿದರು ಹಾಗೂ ಪ್ರಸಕ್ತ ವರ್ಷದಲ್ಲಿ 36237.48 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದರು.
ಸಭೆಯ ಬಳಿಕ ರಾಷ್ಟ್ರೀಯ ಗ್ರಾಮೀಣ ಜಿವನೋಪಾಯ ಅಭಿಯಾನದಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ಶಾವಿಗೆಯನ್ನ “ಬೆಳಗಾವಿ ಸಂಜೀವಿನಿ ಶಾವಿಗೆ” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರ ರವಿ ಎನ್ ಬಂಗಾರೆಪ್ಪನವರ, ಆರ್.ಬಿ.ಐ ಅಸಿಸ್ಟಂಟ್ಜ ಮ್ಯಾನೇಜರ್ ಆರ್.ಪ್ರಭಾಕರ, ನಬಾರ್ಡ ಅಧಿಕಾರಿ ಅಭಿನವ ಯಾಧವ ಹಾಗೂ ಎಲ್ಲಾ ಜಿಲ್ಲಾ ಬ್ಯಾಂಕ್ ಅಧಿಕಾರಿಗಳು ಮತ್ತು ಅನುಷ್ಠಾನ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 