ಸಿಯೋಲ್,
ಡಿ 18 ಕಾರ್ಮಿಕ ಚಟುವಟಿಕೆ ಹತ್ತಿಕ್ಕಿದ ಕಾರಣಕ್ಕಾಗಿ ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ಫೋನ್
ಮತ್ತು ಚಿಪ್ ತಯಾರಕ ಕಂಪೆನಿ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ನ ಅಧ್ಯಕ್ಷರಿಗೆ ಇಲ್ಲಿನ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.ಸ್ಯಾಮ್ಸಂಗ್ ಸಿಬ್ಬಂದಿ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಲು ರೂಪಿಸಿದ ಕಾರ್ಯಾಚರಣೆಗಾಗಿ ಅಧ್ಯಕ್ಷ ಲೀ ಸಾಂಗ್-ಹೂನ್ ಮತ್ತು ಕಾರ್ಯಕಾರಿ ಉಪಾಧ್ಯಕ್ಷ
ಕಾಂಗ್ ಕ್ಯುಂಗ್-ಹೂನ್ ಇಬ್ಬರಿಗೂ ತಲಾ 18 ತಿಂಗಳ ಶಿಕ್ಷೆ ವಿಧಿಸಲಾಗಿದೆ.ಇದರ ಬೆನ್ನಿಗೇ ಕಂಪೆನಿಯು ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದೆ. ಲೀ ಮತ್ತು
ಕಾಂಗ್ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವುದನ್ನು
ಸಿಯೋಲ್ ನ್ಯಾಯಾಲಯ ಎತ್ತಿಹಿಡಿದು ಇಬ್ಬರಿಗೂ ಸಮನಾಗಿ ಶಿಕ್ಷೆ ಪ್ರಕಟಿಸಿದೆ.