ಸಂಬರಗಿ: ವಿಶೇಷ ತಂಡದ ಭೇಟಿ-ಪರಿಶೀಲನೆ
ಲೋಕದರ್ಶನ ವರದಿ
ಸಂಬರಗಿ 20: ಸಂಬರಗಿ ಗ್ರಾಮ ಪಂಚಾಯತ ಕೇಂದ್ರದ ವಿಶೇಷ ತಂಡ (ಎನ್.ಎಲ್.ಎಮ್) ಭೇಟಿ ನೀಡಿ ಕೇಂದ್ರ ಸರಕಾರದ ಬರುವ ವಿವಿಧ ಯೋಜನೆಗಳು ಯೋಗ್ಯ ಫಲಾನುಭವಿಗಳಿಗೆ ತಲುಪುತ್ತಿದ್ದಾವೆಯೋ ಇಲ್ಲವೋ ಈ ಕುರಿತು ಪರಿಶೀಲನೆ ಮಾಡಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಸೂಚನೆ ನೀಡಿ ಮಾಹಿತಿ ಪಡೆದುಕೊಂಡರು.
ಕೇಂದ್ರ ತಂಡದ ಮುಖ್ಯಸ್ಥ ಮಧನ ದಳವಾಯಿ, ಶ್ರೀಶೈಲ ಭೋಸಲೆ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ಉಪ ಕಾರ್ಯದರ್ಶಿ ರಾಹುಲ ಕಾಂಬಳೆ ಇವರು ಗುರುವಾರ ಬೆಳಿಗ್ಗೆ 10.00 ಕ್ಕೆ ಗ್ರಾಮ ಪಂಚಾಯತಿಗೆ ಭೆಟ್ಟಿ ನೀಡಿ ಉದ್ಯೋಗ ಖಾತರಿ, ಪ್ರಧಾನ ಮಂತ್ರಿ ಸಡಕ ಯೋಜನೆ ಕಾಮಗಾರಿ ಹಾಗೂ ಹಲವಾರು ಕಾಮಗಾರಿಗಳನ್ನು ಮಾಡಿರುವ ಕೆಲಸಗಳನ್ನು ಪರಿಶೀಲನೆ ನೀಡಿದರು. ಕೆಲವು ಸಮಸ್ಯೆ ಬಂದಾಗ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಆ ಕುರಿತು ಮಾಹಿತಿ ಕೇಳಿದರು. ಉಧ್ಯೋಗ ಖಾತರಿ ಯೋಜನೆ, ನರೇಗಾ ಹಾಗೂ ಧಲಿತ ಕಾಲೋನಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಪರಿಶೀಲನೆ ಮಾಡಿದರು. ಹಲವಾರು ತಪ್ಪು ದೋಷ ಕಂಡುಬಂದಾಗ ಗ್ರಾಮ ಪಂಚಾಯತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮದ ಹೊರವಲದಲ್ಲಿ ಇರುವ ಪ್ರಾಥಮಿಕ ಕನ್ನಡ ಶಾಲೆಗೆ ಭೆಟ್ಟಿ ನೀಡಿ ಅಲ್ಲಿಯ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಚಚರ್ೆ ಮಾಡಿದರು. ಶಾಲೆಗೆ ಅವಶ್ಯಕವಿರುವ ಸೇವೆ ಕಲ್ಪಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಸಂಬರಗಿ 24ಘಿ7 ಸೇವೆ ಕಲ್ಪಿಸಲು ಗ್ರಾಮಸ್ಥರು ಕೇಂದ್ರ ತಂಡದವರಿಗೆ ಮನವಿ ಮಾಡಿಕೊಂಡರು. ಎಲ್ಲ ಸಮಸ್ಯೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಬೆಳಿಗ್ಗೆ 10.00 ರಿಂದ 03.00 ಗಂಟೆಯವರೆಗೆ ಕೇಂದ್ರ ತಂಡದ ಮುಖ್ಯಸ್ಥರು ವಿವಿಧ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಕಿರಣ ಶಿಂಧೆ, ಅಥಣಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ ಬಂಗಾರೆಪ್ಪನವರ, ಉಪ ತಹಶೀಲ್ದಾರ ಬಿ.ಬಿ ಮ್ಯಾಗೇರಿ, ಎಸ್. ಜಿ. ಕುಡ್ಡನ್ನವರ, ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ತಾನಗೆ, ಪಿಡಿಒ ಸಿ. ಜಿ. ಉಮರೆ, ಕಿರಿಯ ಅಭಿಯಂತರ ಸುರೇಶ ದೇವರಡ್ಡಿ, ಸತೀಶ ನರೂಟೆ, ಗ್ರಾಮ ಲೆಕ್ಕಾಧಿಕಾರಿ ಎಸ್. ಎಸ್. ಪತ್ತಾರ, ತುಕಾರಾಮ ಸೇಳಕೆ, ಧರೆಪ್ಪಾ ಕುಂಬಾರ, ಜಿ. ಎಸ್. ನಾಯಿಕ, ಶ್ರೀಮತಿ ಜಾಕಿಯಾ ಕರೋಶಿ, ಸೇರಿದಂತೆ ಹಲವಾರು ಗನ್ಯರು ಹಾಜರಿದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 