ಜೆಇಇ ಪರೀಕ್ಷೆಯಲ್ಲಿ ಎಕ್ಸಲಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ
Salman Godihal got 98.11 percent.
ಲೋಕದರ್ಶನ ವರದಿ
ಸಲ್ಮಾನ ಗೋಡಿಹಾಳಗೆ ಶೇ. 98.11
ವಿಜಯಪುರ 17: ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ
ಹೆಜ್ಜೆ ಹಾಕುತ್ತ ಸಾಗಿ ಬಂದಿರುವ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರತಿ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶದೊಂದಿಗೆ ಗುರುತಿಸಿಕೊಂಡು ಬಂದಿದೆ. ಅದರಂತೆಯೇ ಈ ಬಾರಿ ಪ್ರಥಮ ಹಂತದ ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅಮೋಘ ಸಾಧನೆ ಮಾಡಿದೆ.
ಐಐಟಿ, ಐಐಐಟಿ, ಎನ್‌ಐಟಿ ಸೇರಿದಂತೆ ಭಾರತದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಎಂಜೀನೀಯರಿಂಗ್ ಕೋರ್ಸಗಳಿಗೆ ಪ್ರವೇಶ ಪಡೆದುಕೊಳ್ಳುವುದಕ್ಕೆಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೂಲಕ ನಡೆಸಲಾಗುವ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಂದು ಸಾಧನೆ ಮಾಡಿದ್ದಾರೆ. ಜನೇವರಿ 2026ರಲ್ಲಿ ಜರುಗಿದ ಜೆಇಇ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಅತ್ಯಂತ ಸ್ಪರ್ಧಾತ್ಮಕವಾಗಿರುವ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅದರಲ್ಲಿಯೂ ಸಲ್ಮಾನ ಗೋಡಿಹಾಳ 98.11 ಪ್ರತಿಷತ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅತೀ ಹೆಚ್ಚು ಅಂಕಗಳನ್ನು ಪಡೆದ ಕೀರ್ತಿಗೆ ಪಾತ್ರನಾದರೆ ಇನ್ನುಳಿದಂತೆ ಸಂಕೇತ ಜಿ ಬಿರಾದಾರ(97.70) ಧೈರ್ಯಶೀಲ ಹವಾಲ್ದಾರ (96.85) ರುಮೇಝ ಶೇಖ್ (96.82) ಅಭೀಷೇಕ್ ಜಂಗಮಶೆಟ್ಟಿ (96.58) ಭೂಮಿಕಾ ತಳವಾರ(96.46), ಅನುಷ್ಕಾ ಮಹಿಶಾಳೆ(96.09) ಶ್ರೇಯಸ್ ಹಳಕಟ್ಟಿ(94.86), ಅನುಷಾ ಎಡವಣ್ಣವರ (94.43) ನಿವೇಶ ಮುಗಳಿ(94.23) ಬಸವಾ ಗೊಳಸಂಗಿ (93.82) ಕೀರ್ತಿ ಬಿರಾದಾರ (93.78) ಅನನ್ಯಾ ರೊಟ್ಟಿ (93.71) ಎನ್ ರಜತ್ (92.38) ಶ್ರೇಯಾ ಗಂಗರಗೊಂಡ (92.16) ನಿಖಿಲ್ ಕಿತ್ತೂರ (92.11) ಪ್ರತೀಕ್ ಪಿ. ಚವ್ಹಾಣ (91.76) ಹಣಮಂತ ನಂದ್ಯಾಳ (90.94) ಆದಿತ್ಯಾ ರಾಠೋಡ (90.33) ಪ್ರವೀಣ ಬಿರಾದಾರ (90.23) ಸುಜಯ್ ಕುಲಕರ್ಣಿ (90.00) ಸೇರಿದಂತೆ ಒಟ್ಟು 21 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶೇ 90 ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದು ಈ ಮೂಲಕ ಮುಂದಿನ ದಿನಗಳಲ್ಲಿ ಜರುಗುವ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿಯೂ ಸಹ ಅತ್ಯುತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುವ ಭರವಸೆ ಮೂಡಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ; ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳು ಸದಾ ಮಕ್ಕಳ ಶ್ರೇಯೋಭಿವೃದ್ಧಿಗಾಗಿಯೇ ಶ್ರಮಿಸುತ್ತವೆ. ಅದೇ ರೀತಿ ನಮ್ಮಲ್ಲಿ ಕಲಿಯುವ ಮಕ್ಕಳು ಸಹ ಸದಾ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕುವುದರೆಡೆಗೆ ದೃಷ್ಠಿ ನೆಟ್ಟಿರುತ್ತಾರೆ. ಇನ್ನೂ ಹೆಚ್ಚಿನ ಫಲಿತಾಂಗಳನ್ನು ನೀಡುವ ಮೂಲಕ ನಮ್ಮ ಸಂಸ್ಥೆ ಹೆತ್ತವರ ಕನಸುಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಸದಾ ಮಾಡುತ್ತದೆ ಎಂದು ಹೇಳುವ ಮೂಲಕ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಮಕ್ಕಳಿಗೆ ಹಾಗೂ ಅವರ ಸಾಧನೆಗೆ ನೆರವಾದ ಉಪನ್ಯಾಸಕ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಮಕ್ಕಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಸರ್ವ ಸದಸ್ಯ ಬಳಗ, ಕಾಲೇಜಿನ ಪ್ರಾಚಾರ್ಯ ಮಂಜುನಾಥ ಮ. ಜುನಗೊಂಡ ಸೇರಿದಂತೆ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿ ಅಭಿನಂದನೆಗಳನ್ನು ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 