ನಾಳೆ ಕೊಪ್ಪಳಕ್ಕೆ ಸಲೀಂ ಅಹಮದ್ ಹಾಗೂ ಹೈದರ್ ವಲಿ ಖಾದ್ರಿ ಸಾಹೇಬ್ ಆಗಮನ

ನಾಳೆ ಕೊಪ್ಪಳಕ್ಕೆ  ಸಲೀಂ ಅಹಮದ್ ಹಾಗೂ ಹೈದರ್ ವಲಿ ಖಾದ್ರಿ ಸಾಹೇಬ್ ಆಗಮನ Salim Ahmed and Haider Wali Qadri Saheb to arrive in Koppal tomorrow

ನಾಳೆ ಕೊಪ್ಪಳಕ್ಕೆ  ಸಲೀಂ ಅಹಮದ್ ಹಾಗೂ ಹೈದರ್ ವಲಿ ಖಾದ್ರಿ ಸಾಹೇಬ್ ಆಗಮನ 

ಕೊಪ್ಪಳ 23:  ಕೊಪ್ಪಳದಲ್ಲಿ ಇತ್ತೀಚಿಗಷ್ಟೇ ಜರುಗಿದ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ 1500 ಜನ್ಮದಿನೋತ್ಸವ ಕಾರ್ಯಕ್ರಮದ ಐತಿಹಾಸಿಕ ಯಶಸ್ವಿನ ರೂವಾರಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ಮತ್ತು  ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿ ಯಶಸ್ವಿನ ಕಾರಣಿ ಕರ್ತ ರಾಗಿರುವ ಮಹಾರಾಷ್ಟ್ರ ರಾಜ್ಯದ ಪವಿತ್ರ ಧಾರ್ಮಿಕ ಸುಕ್ಷೇತ್ರ ನೀಲಂಗ ದರ್ಗಾ ಶರೀಫ  ಪೀಠಾಧಿಪತಿ ಹಜರತ್ ಸೈಯದ್ ಶಾ ಹೈದರ್ ವಲಿ ಖಾದ್ರಿ ಸಾಹೇಬ್ ಯವರು ದಿ, 25 ರ ಶನಿವಾರ ದಂದು ಸಂಜೆ ವೇಳೆಗೆ ಕೊಪ್ಪಳಕ್ಕೆ ಆಗಮಿಸಲಿದ್ದಾರೆ,ಅಂದು ನಗರದ ಸಾಹಿತ್ಯ ಭವನದಲ್ಲಿ  ರಾತ್ರಿ 9:00  ಗಂಟೆಗೆ ಜರುಗಲಿರುವ ಅಖಿಲ ಭಾರತ ಬೃಹತ್ ಕವಿಗೋಷ್ಠಿ ಹಾಗೂ ಮುಷಾಯರಾ ಕಾರ್ಯಕ್ರಮ ದಲ್ಲಿ ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ಅದೇ ವೇಳೆ ಅವರ ಅಭಿಮಾನಿ ಬಳಗದ ವತಿಯಿಂದ ಅವರನ್ನು ಮತ್ತು ಸಮಾಜದ ಹಿರಿಯ ನಾಯಕ ಸೈಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಇತ್ತೀಚಿಗಷ್ಟೇ ಉತ್ತಮ ಸಮಾಜ ಸೇವಾ ಕ್ಷೇತ್ರದ ಕಾರ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ, ಕೆ ಎಂ ಸೈಯದ್ ರವರನ್ನು ಕೊಪ್ಪಳ ದಲ್ಲಿ ಅದ್ದೂರಿ ಸನ್ಮಾನ ಸಮಾರಂಭ ಕೂಡ ಜರುಗಲಿದೆ, ಈ ಎಲ್ಲಾ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಉರ್ದು ಅಕಾಡೆಮಿ ಅವರ ಸಂಯುಕ್ತ ಆಶ್ರಯ ದಲ್ಲಿ  ಫಿರ ದೋಸ್ ಸಾಂಸ್ಕೃತಿ ಕ್ರೀಡೆ ಮತ್ತು ತರಬೇತಿ ಸಂಸ್ಥೆ ಯ ವತಿಯಿಂದ ನಡೆಯಲಿದೆ ಎಂದು ಅಧ್ಯಕ್ಷರಾದ ಮೊಹಮ್ಮದ್ ರಫಿಯುದ್ದೀನ್ ಅಹಮದ್ ರವರು ತಿಳಿಸಿದ್ದಾರೆ, ಸದರಿ ಬೃಹತ್ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರ ಮಟ್ಟದ ಉರ್ದು ಹಿಂದಿ ಸಾಹಿತಿ ಮತ್ತು ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಲಿದ್ದಾರೆ, 

ಅಂದು ರಾತ್ರಿ ಒಂಬತ್ತು ಗಂಟೆಯಿಂದ ಬೆಳಗಿನ ಜಾವ ದ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಮ್ಮ ದೇಶದ ಹಿರಿಯ ಕವಿ ಮತ್ತು ಸಾಹಿತಿಗಳಾದ ಗಾಜಿಯಾ ಬಾದಿನ ಗೋವಿಂದ್ ಗುಲ್ಶನ್, ಶಕೀಲ್ ಅಹಮದ್ ಮುಂಬೈ, ನದೀಮ್ ಶಾದ್ ದೇವಬಂಧ ,ಸುರೇಂದರ್ ಸಿಂಗ್ ಶಜರ್, ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ, ಹಾಮಿದ ಭೂಸಾವಲ್ಲಿ, ಚಾಚಾ ಪಾಲಠುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವೀನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ, ಇಫ್ತೆ ಕಾರ್ ಶಕೀಲ್, ಮತ್ತು ಸ್ಥಳೀಯ ಕೊಪ್ಪಳದ ಹಿರಿಯ ಸಾಹಿತಿ ಮತ್ತು ಕವಿಗಳಾದ ಅನ್ವರ್ ಹುಸೇನ್, ಮೌಲಾನ ಮಹಮ್ಮದ್ ಅಲಿ ಹಿಮಾಯಿತಿ ಹಾಗೂ ವಿಜಾರತ್ ಅಲಿ ತಾಯರ್ ರವರು ತಮ್ಮ ಕವನ ವಾಚನ ಮಾಡಲಿದ್ದಾರೆ ಇದರಲ್ಲಿ ಇಬ್ಬರು ಹಾಸ್ಯ ಕವಿಗಳು ಪಾಲ್ಗೊಂಡು ಎಲ್ಲರನ್ನು ಭಾರಿ ಪ್ರಮಾಣದ ಹಾಸ್ಯಮಯ ಕವನ ವಾಚನ ಮಾಡಿ ಜನರನ್ನು ರಂಜಿಸಲಿದ್ದಾರೆ, ಇಲ್ಲಿನ ಉರ್ದು ಸಾಹಿತಿ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ರವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ,ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿವಿಧ ಗಣ್ಯರು ಅಧಿಕಾರಿ ವರ್ಗದವರು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ,