ಸೈದಾಪುರ ಗ್ರಾಮ ರಾಜ್ಯಕ್ಕೆ ಮಾದರಿಯಾಗುವಷ್ಟು ಅಭಿವೃದ್ಧಿ
Saidapura village is developed to the point of being a model for the state
ಬಾಗಲಕೋಟೆ 22 : ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ್- ಸಮೀರವಾಡಿ, ಕೇವಲ 14 ತಿಂಗಳಲ್ಲಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ ನೇತೃತ್ವದಲ್ಲಿ ಸೈದಾಪುರ ಗ್ರಾಮ ಪಂಚಾಯತಿಯಲ್ಲಿ ರಾಜ್ಯಕ್ಕೆ ಮಾದರಿಯಾಗುವಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ಶಾಸಕನಾದ ನನಗೆ ಇಲ್ಲಿ ಮಾಡಲು ಕೆಲಸಗಳನ್ನೇ ಉಳಿಸಿಲ್ಲ, ಸೈದಾಪುರ ಗ್ರಾಮ ಪಂಚಾಯತಿಯ ಕಾರ್ಯ ವೈಖರಿ ಅನುಸರಿಸಲು ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಮೀರವಾಡಿಯ ಶಿವಲಿಂಗೇಶ್ವರ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಜರುಗಿದ ಮುಕ್ತಿ ವಾಹನ, ಕುಡಿಯುವ ನೀರಿನ ಟ್ಯಾಂಕ್, ಕಸ ವಿಲೆವಾರಿ ವಾಹನ ಲೋಕಾರೆ್ಣಗೊಳಿಸಿ ಮಾತನಾಡಿದ ಅವರು, ಬೇರೆ ಗ್ರಾಮ ಪಂಚಾಯತಿಗಳು ಒಳಜಗಣದಲ್ಲಿಯೇ ಕಳೆಯುತ್ತಿದ್ದರೆ,
ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಒಂದಾಗಿ ಅಲ್ಪ ಅವಧಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾಕಷ್ಟು ಕೆಲಸ ಮಾಡಿದ್ದಾರೆ. ಮುಂಬರುವ ಜನನಾಯಕರು ಇದನ್ನು ಕಲಿಯಬೇಕು ಎಂದರು. ಕಾಲಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಮಾತನಾಡಿ, ಶಾಸಕರ ಸಿದ್ದು ಸವದಿಯವರು, ಗ್ರಾಪಂ ಸರ್ವ ಸದಸ್ಯರು, ಹಿರಿಯರ ಸಲಹೆ, ಸೂಚನೆ, ಸಹಕಾರದಿಂದ ಇಷ್ಟು ಅಭಿವೃದ್ಧಿ ಕೆಲಸ ಕೆಲಸ ಸಾಧ್ಯವಾಗಿದೆ. ನಮಗೆ ಸಾಕಷ್ಟು ಅನುದಾನ ಒದಗಿಸಿ ನಮ್ಮ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಕಾರಣರಾದ ಶಾಸಕ ಸಿದ್ದು ಸವದಿಯವರು ನಮ್ಮ ಸೌಭಾಗ್ಯ ಎಂದರು.
ಪಜಾ, ಪಪಂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚೆಕ್ ಹಾಗೂ 80 ಜನ ಅಂಗವಿಕಲರಿಗೆ ಫ್ಯಾನ್, ಪ್ರತಿ ಮನೆಗೂ ಕಸ ವಿಂಗಡಣೆ ಬಕೆಟ್ ವಿತರಣೆದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮುಕ್ತಿ ವಾಹನ ಇಲ್ಲ. ಆದರೆ, ಸೈದಾಪುರ ಗ್ರಾಮ ಪಂಚಾಯತಿಯಲ್ಲಿ ಅದರಲ್ಲೂ ವಿಶೇಷವಾಗಿ ಹೊಸ ತಂತ್ರಜ್ಞಾನ ಹೊಂದಿದ ಅಂಬಾರಿ ಮತ್ತು ಐರಾವತದಂತೆ ಕಂಗೊಳಿಸುವ ಮುಕ್ತಿ ವಾಹನ ವ್ಯವಸ್ಥೆ ಮಾಡಿರುವುದು ಗ್ರಾಪಂ ಅಧ್ಯಕ್ಷರು ಮತ್ತು ಸರ್ವಸದಸ್ಯರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ. ಸಿದ್ದು ಸವದಿ, ಶಾಸಕಮಾಡಲಾಯಿತು. 10 ಸಮುದಾಯಗಳಿಗೆ ತಲಾ 50ರಂತೆ 500 ಕುರ್ಚಿಗಳನ್ನು ವಿತರಿಸಲಾಯಿತು. ಮುಖಂಡರಾದ ರಂಗನಗೌಡ ಪಾಟೀಲ, ಮಲ್ಲಗೌಡ ಪಾಟೀಲ, ಬಸವರಾಜ ಪೂಜಾರಿ ಮಾತನಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಾಸ್ತಾವಿಕವಾಗಿ ಚಿನ್ನಪ್ಪ .ಎ.ಹಿರೆಕುರುಬರ ಮಾತನಾಡಿದರು. ಶಾಸಕ ಸಿದ್ದು ಸವದಿ ಪಿಕೆಪಿಯ ಅಧ್ಯಕ್ಷ ಪರಮಾನಂದ ಉಳ್ಳಾಗಡ್ಡಿ, ಉಪಾಧ್ಯಕ್ಷ ಮುತ್ತಪ್ಪ ಪಾಶ್ಚಾಪುರ ಮತ್ತು ಮನ್ಸೂರ್ ಯೂನಿಯನ್ ಪದಾಕಾರಿಗಳು, ಜಿಬಿಎಲ್ ನೌಕರರ ಅಸೋಸಿಯೇಷನ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಿವಲಿಂಗೇಶ್ವರ ದೇವಸ್ಥಾನ ಆರ್ಚಕ ಮಹಾಂತಯ್ಯ ಮಠಪತಿ ಸಾನಿಧ್ಯ ವಹಿಸಿ, ಮುಖಂಡರಾದ ಮುರಿಗೆಪ್ಪ ಗುಣದಾಳ, ಬಸವಣ್ಯಪ್ಪ ಬ್ಯಾಳಿ, ನಾಗಪ್ಪ ಕೇತಗೌಡ, ಮುತ್ತನಾಯಕ ನಾಯಕ ಮತ್ತು ಗ್ರಾಪಂ ಸರ್ವ ಸದಸ್ಯರ ವೇದಿಕೆ ಮೇಲಿದ್ದರು. ಅಂಬಿಗರ ಚೌಡಯ್ಯ ದಿನಾಚರಣೆ ನಂತರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸುಗಮವಾಗಿ ಕಾರ್ಯಕ್ರಮ ನೆರವೇರಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 