ಕೋಚ್ ಗಳಿಗೆ ಸಾಯ್ ಆಯೋಜಿಸಿರುವ 21 ದಿನಗಳ ಆನ್ ಲೈನ್ ಕಾರ್ಯಗಾರ ಆರಂಭ

ನವದೆಹಲಿ, ಏ 16,ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ರಾಷ್ಟ್ರೀಯ ಕ್ರೀಡಾ  ಒಕ್ಕೂಟ (ಎನ್ ಎಸ್ ಎಫ್)ಗಳ ಸಹಭಾಗಿತ್ವದಲ್ಲಿ ಕೋಚ್ ಗಳಿಗಾಗಿ ಗುರುವಾರದಿಂದ ಆಯೋಜಿಸಿರುವ 21 ದಿನಗಳ ದೀರ್ಘಾವಧಿಯ ಆನ್ ಲೈನ್ ಕಾರ್ಯಗಾರದ ಮೊದಲ ಅಧಿವೇಶನದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪಾಲ್ಗೊಂಡಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಸಂಜೀವ ಸಿಂಗ್ ನಡೆಸಿಕೊಟ್ಟ ಮೊದಲ ದಿನದ ಅಧಿವೇಶನದಲ್ಲಿ ರಿಜಿಜು, ಅಲ್ಲದೆ, ಕೇಂದ್ರ ಸಚಿವ ಹಾಗೂ ಭಾರತೀಯ ಆರ್ಚರಿ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಮುಂಡ ಸಹ ಪಾಲ್ಗೊಂಡಿದ್ದರು. ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿಜಿದು ಕಚೇರಿ, '' ಕೋಚ್ ಗಳಿಗಾಗಿ 21 ದಿನಗಳ ಕಾಲ ಆನ್ ಲೈನ್ ಕಾರ್ಯಗಾರವನ್ನು ಇಂದು (ಗುರುವಾರ) ಆರಂಭಿಸಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸಂಜೀವ ಸಿಂಗ್ ನಡೆಸಿಕೊಟ್ಟ ಈ ಅಧಿವೇಶನದಲ್ಲಿ ಕಿರಣ್ ರಿಜಿಜು ಮತ್ತು ಅರ್ಜುನ್ ಮುಂಡ ಪಾಲ್ಗೊಂಡಿದ್ದರು. ಸಾಯ್ ಮತ್ತು ಎನ್ ಎಸ್ ಎಫ್ ವತಿಯಿಂದ ಕೋಚ್ ಗಳ ಜ್ಞಾನ ಉನ್ನತೀಕರಣಕ್ಕೆ ಕೈಗೊಂಡ ಮೊದಲ ಆನ್ ಲೈನ್ ಉಪಕ್ರಮ ಇದಾಗಿದೆ,'' ಎಂದು ಹೇಳಿದೆ.