ಶರಣ ಸಂಸ್ಕೃತಿ ಉತ್ಸವ-2025 ನಾಲ್ಕನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ

ಶರಣ ಸಂಸ್ಕೃತಿ ಉತ್ಸವ-2025 ನಾಲ್ಕನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ Sahaja Shiva Yoga Demonstration

ಚಿತ್ರದುರ್ಗ 23 :  ಸೆಪ್ಟಂಬರ್ 2025, ಈ ಸೃಷ್ಟಿ ಮೂರು ಹಂತಗಳಲ್ಲಿ ನಿರ್ಮಾಣವಾಗಿದೆಎಂದು ಶಿರಸಂಗಿ  ಮಹಾಂತ ಸ್ವಾಮೀಜಿಯವರು ತಿಳಿಸಿದರು. 

ಶ್ರೀಗಳು ಶರಣ ಸಂಸ್ಕೃತಿಉತ್ಸವ 2025ರ ನಿಮಿತ್ತ ಶ್ರೀಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿನಾಲ್ಕನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತ ಮಾತನಾಡಿ,ಒಂದು ಸಣ್ಣ ಬೀಜ ಮೊಳಕೆಯೊಡೆದು ಮರವಾಗಬೇಕಾಗದರೆ ಮೂರು ಹಂತಗಳು ಬೇಕು. ಬೀಜವನ್ನು ಮಣ್ಣಿನಲ್ಲಿಇಟ್ಟರೆ ಮೊಳಕೆಯಾಗಿ ಸಸಿಯಾಗಿಮರವಾಗಿ ಫಲ ನೀಡುವಂತೆ, ಬಾಲ್ಯಯೌವ್ವನ ಮುಪ್ಪುಗಳನ್ನು ಅನುಭವಿಸುವ ಮಾನವತನ್ನದೇಹವನ್ನು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಬೇಕು.ನಿರಾಕಾರವಾದ ಮನಸ್ಸುಎಲ್ಲದಕ್ಕೂಕಾರಣ.ಅಂಗೈಯಲ್ಲಿ ಲಿಂಗವನ್ನುಇಟ್ಟುಕೊಂಡು ಶಿವಯೋಗವನ್ನು ಮಾಡುವ ಮೂಲಕ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬಹುದು.ಮನಸ್ಸಿನ ನೋವನ್ನು ಸಹಿಸಿಕೊಳ್ಳಬಹುದು.ಪ್ರತಿನಿತ್ಯ ಪ್ರಯತ್ನವಿದ್ದರೆ ಸಾಧಿಸುವ ಮನೋಭಾವನೆ ಮೂಡುತ್ತದೆ.ಸಾಧನೆಗೆ ಪ್ರಯತ್ನ ಮುಖ್ಯ.ಇಷ್ಟಲಿಂಗ ಪೂಜೆಸಾಧನೆಗೆಇರುವ ಸಾಧನ. ಸಾಧನೆಯಿಂದಾಗಿ ಸಿದ್ಧಗಂಗಾ ಶ್ರೀಗಳು ನಡೆದಾಡುವದೇವರೆಂದು ಪ್ರಖ್ಯಾತರಾದರು.ಸಾಧನೆಯಿಂದಾಗಿಮನುಷ್ಯ ಸಂಸ್ಕಾರವಂತನಾಗುತ್ತಾನೆ. ನಿತ್ಯ ಇಷ್ಟಲಿಂಗ ಪೂಜೆಯಿಂದ ಮನಸ್ಸು ಸುಂದರವಾಗುತ್ತದೆ.ಏಕಾಗ್ರತೆ ಹೆಚ್ಚಾಗುತ್ತದೆ.ಚಿಂತೆದೂರವಾಗುತ್ತದೆ. ಚಂಚಲವಾದ ಮನಸ್ಸನ್ನು ಹಿಡಿದಿಟ್ಟುಕೊಳ್ಳಬಹುದು.ಇಷ್ಟಲಿಂಗ ಪೂಜೆಯಿಂದಹಾವಿನ ವಿಷದ ಹಲ್ಲನ್ನುತೆಗೆಯುವಂತೆ ಮನಸ್ಸಿನ ವಿಷವನ್ನು ತೆಗೆಯಬಹುದು.ಅಸಾಧ್ಯವಾದುದನ್ನು ಸಾಧ್ಯ ಮಾಡಲು ಮನಸ್ಸು ಮುಖ್ಯ. ಬುದ್ಧ ಹೇಳಿದಂತೆ ಆಸೆಯದುಖಃಕ್ಕೆ ಮೂಲಎಂಬ ವಾಣಿಯಕುರಿತಂತೆ ಶಿಷ್ಯರು ಕೇಳಿದಾಗ ಬುದ್ಧ ಹೇಳುತ್ತಾರೆ, ನಾನು ಪಡೆಯುದಕ್ಕಿಂತ ಕಳೆದು ಕೊಂಡಿರುವುದು ಹೆಚ್ಚು, ಅದುಎಂದರೆಕೋಪವನ್ನು ಕಳೆದುಕೊಂಡ್ಡಿದ್ದೇನೆ ಎನ್ನುತ್ತಾರೆ.ಕಾಮ,ಕ್ರೋಧ, ಲೋಭ, ಮದ, ಮತ್ಸರಗಳನ್ನು ನಿಗ್ರಹಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯಎಂದು ನುಡಿದರು. 

ಕಾರ್ಯಕ್ರಮದಲ್ಲಿಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದಡಾ.ಬಸವಕುಮಾರ ಸ್ವಾಮೀಜಿಗಳು, ಶ್ರೀವಚನಾನಂದ ಸ್ವಾಮಿಗಳು, ಮುರುಘೇಂದ್ರ ಸ್ವಾಮಿಗಳು, ಹರಗುರು ಚರಮೂರ್ತಿಗಳು, ಸದ್ಭಕ್ತರು ಉಪಸ್ಥಿತರಿದ್ದರು.  ಜಮುರಾಕಲಾಲೋಕದ ಉಮೇಶ ಪತ್ತಾರ ವಚನಗೀತೆನಡೆಸಿಕೊಟ್ಟರು.