ಶಾಲೆಗಳ ಸುರಕ್ಷತೆಗೆ ಮೊದಲ ಆದ್ಯತೆ : ಕಟ್ಟಡ ರಕ್ಷಣೆಗೆ ಮೇಲ್ಛಾವಣಿ ಅಳವಡಿಕೆ
Safety of schools is top priority: Installing roofs to protect buildings
ನಾಗರಾಜ್ ಹರಪನಹಳ್ಳಿ
ಕಾರವಾರ ಜೂ.3 : ಸರ್ಕಾರಿ ಶಾಲೆಗಳ ಸುರಕ್ಷತೆಗೆ ಈಚಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ , ಶಿರಸಿ ಎರಡು ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಗಳಿದ್ದು,ಶಾಲೆಗಳ. ನಿರ್ವಹಣೆಗೆ 65 ಲಕ್ಷ ರೂ. ವೆಚ್ಚಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಶಾಲಾ ನಿರ್ವಹಣೆ ನಿಧಿಯಲ್ಲಿ ಆರ್. ಸಿ. ಸಿ .ಸ್ಲ್ಯಾಬ್ ಹಾಕಿದ ಶಾಲಾ ಕೊಠಡಿಗಳಿಗೆ ಮೇಲ್ಚಾವಣಿ ಆಳವಡಿಸಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನ್ಯೂಕ್ಲಿಯರ್ ಪವರ್ ಕಾರ್ೊರೇಷನ್ ಇಂಡಿಯಾದಿಂದ ಸಾಮಾಜಿಕ ಜವಾಬ್ದಾರಿ ನಿರ್ವಹಣಾ ನಿಧಿಯಿಂದ ಕಾರವಾರ ತಾಲೂಕಿನ ಮಲ್ಲಾಪುರ, ಕದ್ರಾ ,ಕೆರವಡಿ, ಬಾಳ್ನಿ, ಗೋಟೆ ಗಾಳಿ, ಹೋಟೆಗಾಳಿ, ಅಣಶಿ , ಬಾಳೆಮನಿ, ಕುರ್ನಿಪೇಟ ಸೇರಿದಂತೆ ಹತ್ತಾರು ಗ್ರಾಮಗಳ ಶಾಲೆಗಳು ಹೊಸ ಕಟ್ಟಡ,ಸಭಾ ಭವನ ,ಕುಡಿಯುವ ನೀರಿವ ವ್ಯವಸ್ಥೆ, ಸುಸಜ್ಜಿತ ಪ್ರಯೋಗಾಲಯಗಳು, ಗ್ರಾಂಥಾಲಯ ಹಾಗೂ ಅತಿಥಿ ಶಿಕ್ಷಕರ ಸೌಲಭ್ಯ ಕಂಡಿವೆ. ಕಾರವಾರ ತಾಲ್ಲೂಕಿನ ಪ್ರಾಥಮಿಕ ಶಿಕ್ಷಣ ಕೈಗಾ ಅಣುಸ್ಥಾವರ ಸುತ್ತ ಹದಿನಾರು ಕಿಮೀ ವ್ಯಾಪ್ತಿಯ 30 ಕ್ಕೂ ಹೆಚ್ಚು ಶಾಲೆಗಳು ಆಧುನಿಕ ಶಿಕ್ಷಣದ ಸೌಲಭ್ಯ ಕಂಡಿವೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಸಹ ಬೆಳೆದಿದೆ.
150 ಸರ್ಕಾರಿ ಶಾಲೆಗಳ ರಕ್ಷಣೆ : ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 150 ಶಾಲೆಗಳಿಗೆ ಮೇಲ್ಛಾವಣಿ ಹಾಕಲಾಗಿದೆ. ಇದರಿಂದ ಶಾಲಾ ಕಟ್ಟಡ ರಕ್ಷಣೆ ಮಾಡಲಾಗಿದೆ. 133 ಶಾಲೆಗಳ ಕೊಠಡಿಯಲ್ಲಿನ ಸಿಮೆಂಟ್ ನೆಲ ಹಾಸು ತೆಗೆದು ಹಾಕಿ, ಟೈಲ್ಸ ಅಳವಡಿಸಲಾಗಿದೆ. ಶಾಲೆಗಳಿಗೆ ಆಧುನಿಕ ಟಚ್ ನೀಡಲಾಗಿದೆ. 34.96 ಲಕ್ಷ ರೂ. ಇದಕ್ಕಾಗಿ ವೆಚ್ಚವಾಗಿದೆ. ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ . ಹಲವು ಶಾಲೆಗಳಿಗೆ ಶಾಲಾ ಕೊಠಡಿ ಪ್ರತ್ಯೇಕ ನಿಧಿಯಲ್ಲಿ ನಿರ್ಮಿಸಲಾಗಿದೆ. ಕೆಪಿಎಸ್ ಶಾಲೆಗಳು ಕಂಪ್ಯೂಟರ್ ,ಸ್ಮಾಟ ಕ್ಲಾಸ್ ರೂಂ ಹೊಂದಿವೆ. ಕಾರವಾರ ಕರಾವಳಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಹ 30 ಲಕ್ಷ ರೂ.ಶಾಲಾ ನಿರ್ವಹಣೆ, ಹೆಂಚು ಶಾಲೆಗಳ ಮರು ಹೊದಿಕೆ ಮಾಡಲಾಗಿದೆ. ಮಣ್ಣಿನ ಗೋಡೆ ಶಾಲಾ ಕೊಠಡಿ ಬಿಟ್ಟು 35 ಹೊಸ ಶಾಲಾ ಕೊಠಡಿ ನಿರ್ಮಿಸಲಾಗಿದೆ. ಇಂಥ 15 ಶಾಲೆಗಳ ಸುರಕ್ಷತೆಗೆ ಕ್ರಮ ಆಗಿದ್ದು ವಿದ್ಯಾರ್ಥಿಗಳು ಹೊಸ ಶಾಲಾ ಕೊಠಡಿಗೆ ಶಿಫ್ಟ ಆಗಿದ್ದಾರೆ.
ಹತ್ತಾರು ಶಾಲಾ ಕೊಠಡಿಗಳನ್ನು ರಿಪೇರಿ ಮಾಡಲಾಗಿದೆ. ಬೀಳುವ ಸ್ಥಿತಿಯ ಶಾಲಾ ಕಂಪೌಂಡುಗಳನ್ನು ಹತ್ತು ಕಡೆ ರಿಪೇರಿ ಮಾಡಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಕಡೆ ಶಾಲಾ ಕೊಠಡಿ ನಿರ್ಮಿಸಿಕೊಡಲಾಗಿದೆ. ಅಪಾಯಕಾರಿ ಮರ ಕಡಿತ: ಶಾಲೆಗಳ ಕೊಠಡಿಗಳ ಮೇಲೆ ಬೀಳುವ ಸ್ಥಿತಿಯಲ್ಲಿದ್ದ 36 ಕಡೆ ಮರಗಳನ್ನು ಗುರುತಿಸಿ ಕತ್ತರಿಸಲಾಗಿದೆ. ಕೆಲವು ಕಡೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಮರ ತೆಗೆದಿದ್ದು, ಕೆಲವು ಕಡೆ ಮರ ಟ್ರೀಮ್ ಮಾಡಲಾಗಿದೆ. ಶಾಲಾ ಕೊಠಡಿ ಮೇಲೆ ಬಂದ ಮರದ ಟೊಂಗೆ ಮಾತ್ರ ಕತ್ತರಿಸಲಾಗಿದೆ. ಉಳಿದಂತೆ ಶಾಲೆಗಳ ಸುರಕ್ಷಿತತೆಯನ್ನು ಹದಿನೈದು ದಿನಗಳಿಗೂ ಮೊದಲೇ ಖಾತ್ರಿ ಪಡಿಸಿ ಕೊಳ್ಳಲಾಗಿದೆ. ಮಳೆಗಾಲದ ಅನಾಹುತ ಮೊದಲೇ ಅಂದಾಜಿಸಿ ಶಿಕ್ಷಕರಿಂದ ಬಿಇಒ ಗಳಿಗೆ ಮಾಹಿತಿ ನೀಡಲಾಗಿದೆ. ಅನಾಹುತಕ್ಕೆ ಶಿಕ್ಷಣಾಧಿಕಾರಿಗಳೇ ಹೊಣೆ ಎಂದು ಎಚ್ಚರಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 