ದಾಂಡೇಲಿಯಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ದಾಂಡೇಲಿಯಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ Safety kits distributed to over 500 workers in Dandeli

ಲೋಕದರ್ಶನ ವರದಿ 

ದಾಂಡೇಲಿ 29 : ದಾಂಡೇಲಿಯ ಕಾರ್ಮಿಕ ಭವನದಲ್ಲಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಕಾರ್ಮಿಕ ಸೇವಾ ಕೇಂದ್ರದ ಮೂಲಕ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಆರ್‌.ವಿ ದೇಶಪಾಂಡೆ ನುಡಿದರು ಅವರು ಕಾರ್ಮಿಕ ಭವನದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆಯೋಜಿಸಲಾದ ಕಾರ್ಮಿಕರಿಗಾಗಿ ವಿವಿಧ ಸುರಕ್ಷತಾ ಕಿಟ್‌ಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 500 ಕ್ಕು ಹೆಚ್ಚು ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ತಹಶೀಲದಾರ ಶೈಲೇಶ್ ಪರಮಾನಂದ, ತಾಪಂ ಸಿ.ಓ ಟಿ.ಸಿ ಹಾದಿಮನಿ, ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ, ಯಲ್ಲಾಪೂರ  ಉಪವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ರಿಯಾಜ್ ಬಾಬು ಸಯ್ಯದ್ ಉಪಸ್ಥಿತರಿದ್ದರು. ಕಾರ್ಮಿಕ ನೀರೀಕ್ಷಕ ಚೇತನ ಕುಮಾರ ಹುಕುಂನವರ್ ಕಾರ್ಯಕ್ರಮ ಸಂಯೋಜಿಸಿದರು.