ಸದಾಶಿವ ಅಜ್ಜನವರ ಬಂಧನ ಸುದ್ದಿ ಸುಳ್ಳು
Sadashiva Ajjan's arrest news is false
ಸದಾಶಿವ ಅಜ್ಜನವರ ಬಂಧನ ಸುದ್ದಿ ಸುಳ್ಳು
ಜಮಖಂಡಿ 27: ನಗರದ ಆಲಗೂರ ಆರ್.ಸಿ.ಕೇಂದ್ರದ ಹೊಸ ಬಬಲಾದಿ ಮಠದ ಸದಾಶಿವ ಅಜ್ಜನವರನ್ನು ಬಂಧನವಾಗಿದೆ ಎಂಬುದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾನದಲ್ಲಿ ಹರಡಿದ್ದು. ಅದಕ್ಕೆ ಭಕ್ತರು ಕಿವಿಗೊಡಬೇಡಿ. ಸಿಐಡಿ ಅಧಿಕಾರಿಗಳು ವಿಚಾರಣೆಗೆ ಮಾತ್ರ ಕರೆದಿದ್ದರು ಎಂದು ಕಿರಿಯ ಸ್ವಾಮೀಜಿ ಶಿವರುದ್ರಯ್ಯ ಅಜ್ಜನವರು ಹೇಳಿದರು. ನಗರದ ಸರಕಾರಿ ಪ್ರವಾಸ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ ಮಹಾಲಕ್ಷ್ಮೀ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ನಲ್ಲಿ ಕೋಟ್ಯಾಂತರ ರೂ,ಗಳ ಹಗರಣ, ಅವ್ಯವಹಾರ ಮೋಸದ ಪ್ರಕರಣಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಆರೋಪಿ ಸಾಗರ ಸಬಕಾಳೆ ಎಂಬುವರು ಮಠಕ್ಕೆ ಆಗಮಿಸಿ. ತಮ್ಮಗೆ ಒಳ್ಳೆಯದು ಆಗಲಿ ಎಂದು ಸಂಕಲ್ಪ ಮಾಡಿಕೊಂಡಿದರು. ಅವರ ಸಂಕಲ್ಪ ಈಡೇರಿದ ಕಾರಣ ಮಠದ ಅಭಿವೃದ್ಧಿಗಾಗಿ ಹಾಗೂ ದಾಸೋಹಕ್ಕೆ ದೇಣಿಗೆ ಹಣವನ್ನು ನೀಡಿದ್ದು ಸತ್ಯ. ಅದು ಹಂತ ಹಂತವಾಗಿ ಸುಮಾರು 26 ಲಕ್ಷ ರೂ,ಗಳನ್ನು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಅದನ್ನು ಸಿಐಡಿ ತನಿಖಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಯಾವುದೇ ಭಕ್ತರು ಮಠಕ್ಕೆ ದೇಣಿಗೆ ನೀಡಿದಾಗ ಅದನ್ನು ಹೇಗೆ ಸಂಪಾದಿಸಿದೆ ಎಂದು ಕೇಳುವ ಪರಿಪಾಠ ಇರುವುದಿಲ್ಲ. ಆದ್ದರಿಂದ ಅನೇಕ ಭಕ್ತರು ಮಠಕ್ಕೆ ದೇಣಿಗೆ ನೀಡುತ್ತಾರೆ. ಅವರ ಬಗ್ಗೆ ವಿಚಾರಿಸುವುದು ಸರಿ ಇರುವುದಿಲ್ಲ ಎಂದು ಪ್ರಶ್ನಿಸಿದರು. ಅವರ ಖಾತೆಯಿಂದ ಹಣ ವರ್ಗಾವಣೆ ಆದ ಬಗ್ಗೆ ತನಿಖೆ ನಡೆಯುತ್ತಿದ್ದು, ಶ್ರೀಗಳನ್ನು, ವಿಚಾರಣೆಗೆ ಮಾತ್ರ ಕರಿಸಿದ್ದಾರೆ. ಕಾನೂನಿನ ಪ್ರಕಾರ ತನಿಖೆಗೆ ಹಾಜರಾಗಿ ತನಿಖಾಧಿಕಾರಿಗಳಿಗೆ ವಿವರಣೆ ನೀಡಿದ್ದಾಗಿ ತಿಳಿಸಿದ ಅವರು, ಶ್ರೀಗಳ ಬಂಧನವಾಗಿದೆ. ಎಂಬ ಸುಳ್ಳುಸುದ್ದಿ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಮಠದ ಭಕ್ತರು ಈ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದರು. ಮಠದ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡುವುದು, ಮಠದ ಅಭಿವೃದ್ಧಿ ಹಾಗೂ ಪ್ರತಿಸೋಮವಾರ ಹಾಗೂ ಅಮಾವಾಸ್ಯೆಯ ದಿನ ದಾಸೋಹ ನಡೆಸುತ್ತಿರುವುದಾಗಿ ತಿಳಿಸಿದರು. ಸದಾಶಿವ ಮುತ್ಯಾ, ಚಿಕ್ಕಪ್ಪ ಮುತ್ಯಾ ಹಾಗೂ ಚಂದ್ರವ್ವ ತಾಯಿಯ ಆಶೀರ್ವಾದವಿದೆ. ಯಾವುದೇ ಹುನ್ನಾರಕ್ಕೆ ಭಯ ಪಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಮಖಂಡಿಯ ಹೊಸ ಬಬಲಾದಿ ಮಠದ ಏಳಿಗೆ ಸಹಿಸದ ಕೆಲವರು ಹುನ್ನಾರ ನಡೆಸುತ್ತಿದ್ದು. ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಅನೇಕ ದಿನಗಳಿಂದ ಅವರ ಪ್ರಯತ್ನ ಸಫಲವಾಗಿಲ್ಲ ಎಂದರು. ಸದಾಶಿವ ಅಜ್ಜನವರು ಮಾತನಾಡಿ, ಮಾ.21 ಹಾಗೂ 22ರಂದು ಗೋಕಾಕನಿಂದ ಸಿಐಡಿ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆ ಎದುರಿಸಿ ಸಮರ್ಕವಾಗಿ ಉತ್ತರ ನೀಡಿ ಬಂದಿದ್ದೇನೆ ಎಂದು ವಿವರಣೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಹೊಸಬಬಲಾದಿ ಮಠದ ಸೂರ್ಯಕಿರಣ ಹಿರೇಮಠ, ವೆಂಕಪ್ಪ ಕುಂದಗೋಳ, ಪ್ರಜ್ವಲ ಸೊನ್ನಳ್ಳಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 