ಪುರಸಭೆ ಉಪಾಧ್ಯಕ್ಷರಾಗಿ ಸಚೀನ ಬೋಪಳೆ ಅವಿರೋಧ ಆಯ್ಕೆ

ಪುರಸಭೆ ಉಪಾಧ್ಯಕ್ಷರಾಗಿ ಸಚೀನ ಬೋಪಳೆ ಅವಿರೋಧ ಆಯ್ಕೆ Sachina Bopale elected unopposed as Municipal Vice President

ಸಂಕೇಶ್ವರ 23:ನಾಲ್ಕು ತಿಂಗಳ ಅವಧಿಗಾಗಿ ಸಂಕೇಶ್ವರ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಸದಸ್ಯ ಸಚೀನ ಭೋಪಳೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ ಕ್ವಳ್ಳಿ ಅವರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ನಾಲ್ಕು ತಿಂಗಳ ಅವಧಿಗಾಗಿ ಸೋಮವಾರ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಡಾ. ಜಯಪ್ರಕಾಶ ಕರಜಗಿ ಮತ್ತು ಬಿ.ಜೆ.ಪಿ. ಪಕ್ಷದಿಂದ ಸಚೀನ ಭೋಪಳೆ ನಾಮಪತ್ರ ಸಲ್ಲಿಸಿದ್ದರು.  

ಇದರಲ್ಲಿಯ ಕಾಂಗ್ರೆಸ್ಸಿನ ಪಕ್ಷದ ಕೆಲ ಸದಸ್ಯರು, ಬಿ.ಜೆ.ಪಿ.ಯ ಇಬ್ಬರು ಮಹಿಳಾ ಸದಸ್ಯರು ಈ ಚುನಾವಣೆಯಿಂದ ದೂರ ಉಳಿದರು. ಕೊನೆಯ ಘಳಿಗೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ಸಿನ ಡಾ. ಜಯಪ್ರಕಾಶ ನಾಗಪ್ಪಾ ಕರಜಗಿ ಇವರು ತಮ್ಮ ನಾಮಪತ್ರವನ್ನು ವಾಪಸ ಪಡೆದುಕೊಂಡರು, ಬಿಜೆಪಿಯ ಅಭ್ಯರ್ಥಿ ಸಚಿನ ಭೋಪಳೆ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರೆಂದು ಚುನಾವಣೆ ಅಧಿಕಾರಿಯಾಗಿದ್ದ ಹುಕ್ಕೇರಿ ತಹಶೀಲ್ದಾರ ಮಂಜುಳಾ ನಾಯಿಕ ಇವರು ಈ ಆಯ್ಕೆಯನ್ನು ಘೋಷಣೆ ಮಾಡಿದರು. 

ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಮಹಿಳಾ ಸದಸ್ಯರುಗಳಾದ ಸಂಗೀತಾ ಪ್ರವೀಣ ಕೋಳಿ, ಸವಿತಾ ನಷ್ಟಿ, ಶೇವಂತಾ ಕಬ್ಬೂರಿ, ಬಿ.ಜೆ.ಪಿ.ಯ ಮಹಿಳಾ ಸದಸ್ಯರುಗಳಾದ ಶ್ರೀವಿದ್ಯಾ ಬಾಂಬರೆ, ಮನೋರಮಾ ಸುಗತೆ, ಚುನಾವಣೆಯಿಂದ ದೂರ ಉಳಿದಿದ್ದರು ಪುರಸಭೆಯ ಬಿ.ಜೆ.ಪಿ.ಯಿಂದ ಚುನಾಯಿತಗೊಂಡ 12 ಸದಸ್ಯರು ಮತ್ತು ಸ್ವತಂತ್ರ ಅಭ್ಯರ್ಥಿಯಾದ ಗಂಗಾರಾಮ ಭೂಸಗೋಳ, ಅಜೀತ ಕರಜಗಿ, ಇವರುಗಳು ಬಿ.ಜೆ.ಪಿ.ಯ ಸದಸ್ಯನಿಗೆ ಬೆಂಬಲ ವ್ಯಕ್ತಪಡಿಸಿದರು, ಈ ಹಿನ್ನಲೆಯಲ್ಲಿ ಸಚೀನ ಭೋಪಳೆ ಅವಿರೋಧ ಆಯ್ಕೆಯಾದರು. ಈ ಚುನಾವಣೆಯಲ್ಲಿ ಹುಕ್ಕೇರಿ ಮತಕ್ಷೇತ್ರದ ಬಿಜೆಪಿ ಶಾಸಕ ನೀಖೀಲ ಉಮೇಶ ಕತ್ತಿಯವರ ಮುಂದಾಳತ್ವದಲ್ಲಿ ಈ ಚುನಾವಣೆಯು ಜರುಗಿತು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಪುರಸಭೆಯ ಅಧ್ಯಕ್ಷೆ ಸೀಮಾ ಬಂಡು ಹತನೂರೆ ಹಾಗೂ ಸದಸ್ಯರು ಹಾಜರರಿದ್ದರು. 

ಚಿಕ್ಕೋಡಿ ಜಿಲ್ಲಾ ಬಿ.ಜೆ.ಪಿ.ಯ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಸಂಕೇಶ್ವರ ಪುರಸಭೆ  ಉಪಾಧ್ಯಕ್ಷ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದರು, ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಶಿ ಇವರು ಸಹ ಕಾಂಗ್ರೆಸ್ ಪಕ್ಷದ ಚುನಾಯಿತರಾದ ಸದಸ್ಯರಿಗೆ ವಿಪ್ ಜಾರಿ ಮಾಡಿದರು. ಶಾಸಕ ನೀಖೀಲ ಕತ್ತಿಯವರು ಬಿ.ಜೆ.ಪಿ.ಯ ಇಬ್ಬರು ಸದಸ್ಯರಿಗೆ ಕ್ರಮ ಕೈಗೊಳ್ಳುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಇದರ ಬಗ್ಗೆ ವಿಚಾರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.