ಸೂಪರ್ ಸ್ಟಾರ್ ಸೂರ್ಯ ಅಭಿನಯದ ಸೂರ್ಯ ಅಭಿನಯದ ‘ಸೂರರೈ ಪೊಟ್ಟರು’ ಕನ್ನಡಕ್ಕೆ ಡಬ್
ಬೆಂಗಳೂರು, ಫೆ 17, ತಮಿಳು ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸೊರರೈ ಪೊಟ್ಟರು’ ನಾಲ್ಕು ಕಾಲ ಘಟ್ಟದಲ್ಲಿ ಜರುಗುವ ಸಿನಿಮಾ ಇತ್ತೀಚೆಗೆ ಚಿತ್ರದ ಆಡಿಯೋ ಬಿಡಯಗಡೆಯಾಗಿದ್ದು, ಚಿತ್ರ ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ ಈ ಚಿತ್ರ ಡಬ್ ಆಗಿ ಕನ್ನಡದ ಶೀರ್ಷಿಕೆಯೊಂದಿಗೆ ಬಿಡುಗಡೆ ಯಾಗುತ್ತಿದ್ದು, ಶೀರ್ಷಿಕೆ ಸದ್ಯದಲ್ಲೇ ಹೊರಬರಲಿದೆ. ಹೆಸರಾಂತ ಜಿ ಆರ್ ಗೋಪಿನಾಥ್ ಏರ್ ಡೆಕ್ಕನ್ ಸಂಸ್ಥೆಯ ಸಂಸ್ಥಾಪಕರ ಆವದಿಯಲ್ಲಿ ನಡೆದ ಘಟನೆಗಳು ಈ ಚಿತ್ರಕ್ಕೆ ಸ್ಪೂರ್ತಿ. ನಟ ಸೂರ್ಯ ಅರ್ಪಿಸುವ 2ಡಿ ಎಂಟರ್ಟೈನ್ಮೇಂಟ್ ಪ್ರೊಡಕ್ಷನ್ ತಮಿಳು ಸಿನಿಮಾ ‘ಸೊರರೈ ಪೊಟ್ಟರು’ ಚಿತ್ರವನ್ನು ಜನಪ್ರಿಯ ಸಿನಿಮಾ ‘ಇರುಧಿ ಸುಟ್ರು’ ನಿರ್ದೇಶಕಿ ಸುಧಾ ಕೊಂಗಾರ ನಿರ್ದೇಶಿಸಿದ್ದಾರೆ.
ಸೂಪರ್ ಸ್ಟಾರ್ ಸೂರ್ಯ ಜೊತೆ ಅಪರ್ಣ ಬಾಲಮುರಳಿ, ಮೋಹನ್ ಬಾಬು, ಪರೇಶ್ ರಾವಲ್, ಊರ್ವಶಿ, ಕರುಣಾಸ್ ಮುಖ್ಯ ಪಾತ್ರವನ್ನು ಅಭಿನಯಿಸಿದ್ದಾರೆ. ಜಿ ವಿ ಪ್ರಕಾಶ್ ಸಂಗೀತ ಒದಗಿಸಿರುವ ಈ ಚಿತ್ರದ ವಿಶೇಷಗಳಲ್ಲಿ ಸಾಹಸವನ್ನು ಹಾಲವುಡ್ ಅಲ್ಲಿ ‘ಫಾಸ್ಟ್ ಅಂಡ್ ಫ್ಯೂರಿಯಸ್’ ‘ಜೇಮ್ಸ್ ಬಾಂಡ್’ ಸಿನಿಮಾಗಳಿಗೆ ಕೌಶಲ್ಯವನ್ನು ತೋರಿದ ಗ್ರೆಗ್ ಪೊವೆಲ್ ಹಾಗೂ ವಿಕ್ಕಿ ನೀಡಿದ್ದಾರೆ. ನಂದಗೋಪಾಲ್ ಉಸ್ತುವಾರಿಯಲ್ಲಿ ಸಾಹಸ ಸನ್ನಿವೇಶಗಳ ಚಿತ್ರಣ ನಡೆದಿದೆ. ನಿಕೇತ್ ಬೊಮ್ಮಿರೆಡ್ಡಿ ಈ ಚಿತ್ರದ ಛಾಯಾಗ್ರಾಹಕರು. ಸುಮಾರು 70 ಸ್ಥಳಗಳಲ್ಲಿ ಈ ‘ಸೊರರೈ ಪೊಟ್ಟರು’ ಸಿನಿಮಾಕ್ಕೆ ಚಿತ್ರೀಕರಣ ಮಾಡಿರುವುದು ಸಹ ವಿಶೇಷ. ಚೆನ್ನೈ, ಹೈದರಾಬಾದ್, ಹೊಸೂರು, ಛತ್ತೀಸ್ಗಢ ಮಧುರೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಸತೀಶ್ ಸೂರ್ಯ ಸಂಕಲನ ಹಾಗೂ ಜಾಕಿ ಕಲಾ ನಿರ್ದೇಶನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 