ಎಸ್ಟಿಪಿ ನಿಮರ್ಾಣ: ಭೂಸ್ವಾಧೀನ ಕೈಬಿಡಲು ರೈತರ ಆಗ್ರಹ ಸಮಗ್ರ ಅಧ್ಯಯನಕ್ಕೆ ಸಮಿತಿ ರಚನೆ: ಸಚಿವ ಜಾರಕಿಹೊಳಿ
ಬೆಳಗಾವಿ: 05 : ಹಲಗಾ ಬಳಿ ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ಥಳದಲ್ಲಿಯೇ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ ಟಿಪಿ) ನಿಮರ್ಾಣ ಯೋಜನೆ ಅನುಷ್ಠಾನ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ರೈತರು, ಶಾಸಕರನ್ನು ಒಳಗೊಂಡಂತೆ ಐದು ಜನರ ಸಮಿತಿ ರಚಿಸಲಾಗುವುದು. ಸಮಿತಿ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
ಕೇಂದ್ರ ಸಕರ್ಾರ ಪುರಸ್ಕೃತ ಅಮೃತ ಯೋಜನೆಯಡಿ ಎಸ್ ಟಿಪಿ ನಿಮರ್ಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜ.5) ನಡೆದ ರೈತರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಿತಿಯು ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಎಸ್ ಟಿಪಿ ನಿಮರ್ಾಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಅಮೃತ ಯೋಜನೆಯಡಿ ಒಳಚರಂಡಿ 156 ಕೋಟಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಹಲಗಾ ಬಳಿಯ 19 ಎಕರೆ 8 ಗುಂಟೆ ಜಮೀನು ಸ್ವಾಧೀನಕ್ಕೆ 2013 ರಲ್ಲಿ ಐತೀಪರ್ು ನೀಡಲಾಗಿದೆ. ಅದರ ಪ್ರಕಾರ ಜಮೀನು ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ರೈತರು ಹೈಕೋಟರ್ಿನ ಮೂಲಕ ತಡೆಯಾಜ್ಞೆ ತಂದ ಪರಿಣಾಮ ಕೆಲಸ ವಿಳಂಬವಾಗಿದೆ ಎಂದು ಪಾಲಿಕೆ ಆಯುಕ್ತರಾದ ಶಶಿಧರ್ ಕುರೇರ್ ವಿವರಿಸಿದರು.
17-2-2017 ರಂದು ಆದೇಶ ನೀಡಿರುವ ನ್ಯಾಯಾಲಯವು ಭೂಸ್ವಾಧೀನ ಕ್ರಮಬದ್ಧಗೊಳಿಸಿ, ರೈತರ ಅಜರ್ಿ ವಜಾಗೊಳಿಸಲಾಗಿದೆ. ಒಮ್ಮೆ ಕ್ರಮಬದ್ಧವಾಗಿ ಭೂಸ್ವಾಧಿನದ ಬಳಿಕ ಹಿಂದಿರುಗಿಸುವುದಕ್ಕೆ ಅವಕಾಶವಿಲ್ಲ, ಆದರೆ ದರ ನಿಗದಿ ಬಗ್ಗೆ ರೈತರ ಅಹವಾಲು ಸ್ವೀಕರಿಸಿ, ಸಭೆಯ ನಡಾವಳಿ ಕಳಿಸಲು ಸಕರ್ಾರದ ನಿದರ್ೇಶನವಿದೆ ಎಂದು ಹೇಳಿದರು.
ಭೂಸ್ವಾಧೀನ ಕೈಬಿಡಲು ಆಗ್ರಹ:
ಜಮೀನು ನೀಡಲು ನಾವು ಸಿದ್ಧರಿಲ್ಲ. ಯಾವುದೇ ಕಾರಣಕ್ಕೂ ಈ ಯೋಜನೆಗೆ ನಮ್ಮ ಭೂಮಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ನೀರಾವರಿ ಜಮೀನು ಇರುವುದರಿಂದ ಇದನ್ನು ಬಿಟ್ಟುಕೊಟ್ಟರೆ ತೀವ್ರ ತೊಂದರೆಯಾಗುತ್ತದೆ. ಸುವರ್ಣ ವಿಧಾನಸೌಧ, ರಾಷ್ಟ್ರೀಯ ಹೆದ್ದಾರಿ ಮತ್ತಿತರ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಜಮೀನು ನೀಡಿರುವುದರಿಂದ ಹಲಗಾ ಹೊರತುಪಡಿಸಿ ಬೇರೆ ಕಡೆ ಸಕರ್ಾರಿ ಭೂಮಿ ಇರುವ ಕಡೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಅಹವಾಲು ಸಲ್ಲಿಸಿದರು.
ಯಾವ ಆಧಾರದ ಮೇಲೆ ಅಲಾರವಾಡ ಬದಲು ಹಲಗಾ ಗ್ರಾಮದ ಬಳಿ ಎಸ್ ಟಿಪಿ ನಿಮರ್ಾಣಕ್ಕೆ ನಿಧರ್ಾರ ಕೈಗೊಳ್ಳಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು, ತಾಂತ್ರಿಕ ತಂಡವು ಪರಿಶೀಲನೆ ನಡೆಸಿ ಅಲಾರವಾಡ ಬದಲು ಹಲಗಾ ಸೂಕ್ತ ಎಂದು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಅಭಯ್ ಪಾಟೀಲ ಮಾತನಾಡಿ, ಹಲಗಾ ಹೊರತುಪಡಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಖಾಲಿ ಇರುವ ಆರು ಎಕರೆ ಜಮೀನು ಎಸ್ ಟಿಪಿ ನಿಮರ್ಾಣಕ್ಕೆ ಸೂಕ್ತ ಇರುವ ಬಗ್ಗೆ ತಾಂತ್ರಿಕ ವರದಿ ನೀಡಿದರೆ ತಾವು ಭೂಸ್ವಾಧೀನಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ಯೋಜನೆ ಅನುಷ್ಠಾನ ಮತ್ತು ಭೂಸ್ವಾಧೀನ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಐದು ಜನರ ಸಮಿತಿ ರಚಿಸುವಂತೆ ಸಂಸದ ಪ್ರಕಾಶ್ ಹುಕ್ಕೇರಿ ಸಲಹೆ ನೀಡಿದರು.
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಅನಿಲ್ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ, ಜಿಪಂ ಸಿಇಒ ರಾಮಚಂದ್ರನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 