ಎಸ್ಎಸ್ಎಸ್ ಸಮಿತಿಯ ಬಿಸಿಎ ಮಹಾವಿದ್ಯಾಲಯದಲ್ಲಿ “ಪವರ್ ಬಿಐ ವರ್ಕಶಾಪ್-2026” ಆಯೋಜನೆ
SSS Committee organizes “Power BI Workshop-2026” at BCA College
ಲೋಕದರ್ಶನ ವರದಿ
ಕಾಗವಾಡ 16: ಬೆಳಗಾವಿ ನಗರದ ಎಸ್ಎಸ್ಎಸ್ ಸಮಿತಿಯ ಬಿಸಿಎ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಲ್ಲಿ ಡೇಟಾ ವಿಸುವಲೈಸೇಶನ್ ಹಾಗೂ ಬಿಸಿನೆಸ್ ಇಂಟೆಲಿಜೆನ್ಸ್ ಕುರಿತು ಜ್ಞಾನವನ್ನು ವೃದ್ಧಿಸುವ ಉದ್ದೇಶದಿಂದ “ಪವರ್ ಬಿಐ ವರ್ಕಶಾಪ್-2026” ಅನ್ನು ಇತ್ತೀಚಿಗೆ ಆಯೋಜಿಸಲಾಯಿತು. ವ್ಹಿಟಿಯು ಅಸ್ಪಿಸ್ಟ್ಂಟ್ ಸಾಪ್ಟವೇರ್ ಡೆವಲಪರ್, ಐಟಿ ಸೊಲ್ಯೂಶನ್ಸ್ ಸ್ಪೆಷಲಿಸ್ಟ್ ಹಾಗೂ ಸೈಬರ್ ಸೆಕ್ಯೂರಿಟಿ ತಜ್ಞ ಓಂಕಾರ ಕಾಂಬಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡುತ್ತ, ಮೈಕ್ರೋಸಾಪ್ಟ್ ಪಾವರ್ ಬಿಐಯ ಮೂಲಭೂತ ಅಂಶಗಳು ಹಾಗೂ ಆಧುನಿಕ ವ್ಯವಹಾರ ವಿಶ್ಲೇಷಣೆಯಲ್ಲಿ ಅದರ ಪ್ರಾಯೋಗಿಕ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮಹಾವೀರ ಪಿ. ಮಿರ್ಜಿ ಕಾಲೇಜಿನ ಮಾಜಿ ಪ್ರಾಂಶುಪಾಲ ಎ.ಬಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳನ್ನು ನಿರಂತರವಾಗಿ ಕಲಿತು, ಭವಿಷ್ಯಕ್ಕಾಗಿ ಕೈಗಾರಿಕಾ ಅವಶ್ಯಕತೆಗೆ ತಕ್ಕ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಪಾವರ್ ಬಿಐ ಮೂಲಭೂತಾಂಶಗಳು, ಡೇಟಾ ಮಾದರೀಕರಣ ಮತ್ತು ಪರಿವರ್ತನೆ, ಇಂಟರಾಕ್ಟಿವ್ ಡ್ಯಾಶ್ಬೋರ್ಡಗಳ ಡೇಟಾ ವಿಸುವಲೈಸೇಶನ್ನ ಉತ್ತಮ ವಿಧಾನಗಳು ಹಾಗೂ ನೈಜ ವ್ಯವಹಾರಿಕ ಒಳನೋಟಗಳ ಕುರಿತು ತಿಳಿದುಕೊಂಡರು. ಕಾರ್ಯಾಗಾರವು ಅತ್ಯಂತ ಸಂವಾದಾತ್ಮಕ ಹಾಗೂ ಮಾಹಿತಿ ಪೂರ್ಣವಾಗಿದ್ದು, ವಿದ್ಯಾರ್ಥಿಗಳು ಡ್ಯಾಶ್ಬೋರ್ಡಗಳ ರಚನೆ ಮತ್ತು ಬಿಸಿನೆಸ್ ರಿಪೋಟಿಂರ್ಗ್ ಸಾಧನಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಪ್ರದರ್ಶನಗಳು ಹಾಗೂ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ಕಾರ್ಯಾಗಾರವು ಬಿಸಿಎ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅನುಭವವನ್ನು ನೀಡಿದ್ದು, ಇಂದಿನ ಡೇಟಾ ಆಧಾರಿತ ಜಗತ್ತಿನಲ್ಲಿ ಬಿಸಿನೆಸ್ ಇಂಟೆಲಿಜೆನ್ಸ್ ಸಾಧನಗಳ ಮಹತ್ವವನ್ನು ಅರಿಯಲು ಸಹಾಯ ಮಾಡಿತು. ವರ್ಕಶಾಪ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ವೇಳೆ ಫ್ಯಾಕಲ್ಟಿ ಸಂಯೋಜಕ ಅಕ್ಷಯ ಜಿ.ಕೆ., ಪ್ರಾಂಶುಪಾಲ ಅನೀಲ ಹಾಲಭಾಂವಿ, ಮಹಾವೀರ ಪಿ. ಮಿರ್ಜಿ ಕಾಲೇಜಿನ ಮಾಜಿ ಪ್ರಾಂಶುಪಾಲ ಎ.ಬಿ. ಪಾಟೀಲ ಸೇರಿದಂತೆ ಸಮಿತಿಯ ಶಾಲೆ ಮತ್ತು ಕಾಲೇಜು ಕಾರ್ಯಕಾರಿ ಮಂಡಳಿಯ ಸದಸ್ಯರು, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 