ಎಸ್ ಐಆರ್ ಕೆಲಸ ನಿಷ್ಠೆಯಿಂದ ಮಾಡಿ ಅಕ್ರಮ ಮತದಾರರ ಪತ್ತೆ ಹಚ್ಚಿ: ಬೊಮ್ಮಾಯಿ
SIR work faithfully and detect illegal voters: Bommai
ಶಿಗ್ಗಾವಿ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ವಿಧಾನ ಸಭಾ ಮತಕ್ಷೇತ್ರದ ಬಿ.ಎಲ್.ಎ - 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನನಗೆ ನಿಮ್ಮನ್ನು ನೊಡಿ ಬಹಳ ಸಂತೋಷವಾಗಿದೆ. ಗಡಿಯಲ್ಲಿ ಸೈನಿಕರು ಇರುವಂತೆ ಕಷ್ಟ ಕಾಲದಲ್ಲಿ ನೀವು ನನ್ನನ್ನು ಸುರಕ್ಷೆ ಮಾಡುವ ಸೈನಿಕರ ಥರ ಕಾಣುತ್ತಿದ್ದಿರಿ ಎಂದು ಹೇಳಿದರು.
ಬಿಎಲ್ ಎ 2 ಗಳು ಸರಿಯಾಗಿ ಕೆಲಸ ಮಾಡಿದರೆ ಪಾಕಿಸ್ತಾನ ಭಾರತ ಮ್ಯಾಚ್ ಆದ ಹಾಗೆ ಆಗುತ್ತದೆ. ಭಾರತ ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಕುಂತಹಾಗೆ ನೀವು ಕುಂತಿದ್ದಿರಿ.ಶಿಗ್ಗಾವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಗೆ ಸಂಕಲ್ಪ ಮಾಡಿ ಸಂಘಟಿತರಾಗಿ ನೀವು ಬಂದಿದ್ದೀರಿ, ಬಿಎಲ್ ಎ 2 ಗಳು, ನಿಮ್ಮ ಕೆಲಸ ಏನಿದೆ ಅಂತ ತಿಳಿದಕೊಳ್ಳಿ, ಒಂದು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಯಾರು ಅನಧಿಕೃತವಾಗಿದ್ದಾರೆ. ಯಾವ ರೀತಿ ಸುಳ್ಳು ಹೇಳಿ ಹೆಸರು ಸೇರಿಸಿದ್ದಾರೆ. ಅದನ್ನು ಪತ್ತೆ ಹಚ್ಚಬೇಕು.
ಎಸ್ ಆರ್ ಐ ಕೆಲಸ ಸರ್ಕಾರಿ ಕೆಲಸ ಅಲ್ಲ ಸರ್ಕಾರಿ ಅಧಿಕಾರಿಗಳ ಮುಖಾಂತರ ಮಾಡುವ ಕೆಲಸ ಅಷ್ಟೆ ಆದರೆ ನೀವು ನ್ಯಾಯ ಸಮ್ಮತವಾಗಿ ಸತ್ಯದ ಪರವಾಗಿ ಕಾನೂನು ಪರವಾಗಿ ಇರಬೇಕು. ದೇಶದ ಭದ್ರತೆಯಲ್ಲಿ ಸೈನಿಕರು ಎಷ್ಟು ಪ್ರಮುಖವೊ, ಪ್ರಜಾಪ್ರಭುತ್ವದಡಿಯಲ್ಲಿ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬಿಎಗಳ ಮೇಲಿದ್ದು, ನಡೆಯುವ ಎಆರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಶಿಗ್ಗಾವಿ ಸವಣೂರ ಕ್ಷೇತ್ರವನ್ನು ಮೊದಲಿನ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಕ್ಷೇತ್ರದಲ್ಲಿ ಯಾವುದೇ ತೋಟಗಳಿಗೆ ಹೋದರೆ ಇಸ್ಪೆಟು, ಒಸಿ ಆಡುವುದು ಕಾಣಿಸುತ್ತದೆ.
ಅಲ್ಲಿ ಊಟದ ಎಲಿ ಬದಲು ಇಸ್ಪೀಟ್ ಎಲೆ ಇಟ್ಟಿರುತ್ತಾರೆ. ಈ ಕ್ಷೇತ್ರದ ಯುವಕರು ಹಾಳಾಗುತ್ತಿದ್ದಾರೆ. ಎಸ್ಪಿ ಸೇರಿದಂತೆ ಯಾವುದೇ ಅಧಿಕಾರಿಗಳ ಭಯ ಇಲ್ಲದಂತಾಗಿದೆ. ಕ್ಷೇತ್ರದಲ್ಲಿ ಗಾಂಜಾ, ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಾವು ತಂದ ಯೋಜನೆಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಶಿಗ್ಗಾವಿ ಬಂಕಾಪುರ ಸವಣೂರು ಮೂರು ಪಟ್ಟಣಗಳಿಗೆ ನಾನು ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಆದರೆ, ಈಗಿನವರು ಈ ಯೋಜನೆಗೆ ಅನುಮೋದನೆ ಪಡೆದು ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇಡಿ ಕರ್ನಾಟಕ ಅಭಿವೃದ್ದಿ ಅಷ್ಟೆ ಅಲ್ಲಾ ಶಿಗ್ಗಾವಿ ಸವಣುರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು ನೀವು ಎಷ್ಟು ಸಕ್ರೀಯರಾಗಿ ಕೆಲಸ ಮಾಡುತ್ತೀರಿ ಅಷ್ಟು ಅನುಕೂಲ ಆಗುತ್ತದೆ. ಎಲ್ಲಿ ಅನ್ಯಾಯ ಆಗಿದೆ ಅದನ್ನು ಸರಿ ಪಡಿಸಿ, ಶುದ್ದವಾದ ಮತದಾರರ ಪಟ್ಟಿ ಸಿದ್ದವಾಗಲಿ, ಇದೊಂದು ಅವಕಾಶ ಸಿಕ್ಕಿದೆ. ಇನ್ನೊಬ್ಬರನ್ನು ನೋಡಬೇಡಿ ನ್ಯಾಯ ಸಮ್ಮತವಾಗಿ ಮತದಾರರ ಮಟ್ಟಿ ಸಿದ್ದ ಪಡಿಸಿ ನಿಮ್ಮ ಕೆಲಸ ಮಾಡಿ, ನಾನೂ ಕೂಡ ಕೆಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತೇನೆ, ಮುಂಬರುವ ಜಿಪಿ, ಟಿಪಿ ಚುನಾವಣೆಗಳಿಗೆ ಸನ್ನದ್ದರಾಗಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ತ ಸದಸ್ಯ ಎಸ್.ವಿ.ಸಂಕನೂರ, ಯುವ ಮುಖಂಡ ಭರತ ಬೊಮ್ಮಾಯಿ, ಶಿಗ್ಗಾಂವ ಮಂಡಳದ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ಮಂಡಳದ ಅಧ್ಯಕ್ಷ ಶಿವಪುತ್ರ್ಪ ಕಲಕೋಟಿ, ಮುಖಂಡರುಗಳಾದ ಮಹಾಂತೇಶ ಬಿಜ್ಜೂರ, ಡಿ.ಎಸ್.ಮಾಳಗಿ, ಎಂ.ಎನ್ ಹೊನಕೇರಿ, ಶಿವಾನಂದ ಮ್ಯಾಗೇರಿ,ಕರೆಪ್ಪ ಕಟ್ಟಿಮನಿ, ಶಿವಪ್ರಸಾದ ಸುರಗೀಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧಾ ಪಾಟೀಲ್, ನವೀನ ಸವಣೂರ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 