ತಡವಲಗಾದಲ್ಲಿ ಎಸ್‌ಐಆರ್ ಜನ ಜಾಗೃತಿ ಜಾಥಾ
SIR Public Awareness Rally in Tadavalaga
ಇಂಡಿ 10: ಎಸ್‌ಐಆರ್ ಎಂದರೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ಹೊಸದಾಗಿ ಹೆಸರು ಸೇರಿಸುವ ಪ್ರಕ್ರಿಯೆಯಾಗಿದೆ. ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರ ಹೆಸರನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಕೂಡಾ ಇಂದು ಬೆಳಗ್ಗೆ ಹತ್ತು ಗಂಟೆಗೆ ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆ, ಮರುಳಸಿದ್ದೇಶ್ವರ ಪ್ರೌಢ ಶಾಲೆ ಹಾಗೂ ಸರ್ಕಾರಿ ಉರ್ದು ಶಾಲೆಗಳ ಮಕ್ಕಳು ಹಾಗೂ ಶಿಕ್ಷಕರು ಸೇರಿ ನೂರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಸ್‌ಐಆರ್ ಮತದಾನ ಜನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ವಿದ್ಯಾರ್ಥಿಗಳು ಮತದಾನ ನಮ್ಮ ಹಕ್ಕು, ಮತದಾನದಿಂದ ಯಾರು ವಂಚಿತರಾಗಬಾರದು. ಎಂಬ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಜಾಥಾದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಹೊಸಮನಿ, ಮಾದೇವಪ್ಪ ಗೊಳ್ಳಗಿ, ಮಲ್ಲಿಕಾರ್ಜುನ ಗುಡ್ಲಮನಿ, ಮಳಸಿದ್ದಪ್ಪ ನಡಗೇರಿ ಹಾಗೂ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ಮುಖ್ಯ ಗುರುಮಾತೆ ಗೀತಾ ಗೌರ, ಕೆ ಜಿ ಎಸ್ ಮುಖ್ಯ ಗುರುಮಾತೆ ಎಸ್ ಕೆ ಬಡಿಗೇರ, ಕೆ ಬಿ ಎಮ್ ಪಿ ಎಸ್ ಶಾಲೆಯ ಮುಖ್ಯ ಗುರು ಜಿ ಡಿ ಬಜೇಂತ್ರಿ, ಉರ್ದು ಶಾಲೆಯ ಮುಖ್ಯಗುರು ಬಿ ಸಿ ಕುಮಸಿಗಿ, ದೈಹಿಕ ಶಿಕ್ಷಕರಾದ ಎಚ್ ಎಲ್ ನದಾಫ ಹಾಗೂ ಎನ್ ಎನ್ ಕವಟಗಿ, ಪ್ರೇಮಾ ಮುರಾಳ, ಅಕ್ಷತಾ ನಾಗ್ರೇಸಿ, ಬಿ ಎಮ್ ಬಡಿಗೇರ, ಬಸವರಾಜ ತಾರಾಪೂರ, ಜೆ ಎಚ್ ತೇಲಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 