ಜಿ.ಎಚ್.ಕಾಲೇಜು ವಿದ್ಯಾಥರ್ಿನಿ ರೇಣುಕಾಳ ಕೊಲೆಯ ಪ್ರಕರಣ ಖಂಡಿಸಿ ಎಸ್ಎಫ್ಐ ಪ್ರತಿಭಟನೆ
ಲೋಕದರ್ಶನ ವರದಿ
ಹಾವೇರಿ 11: ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ನೇತೃತ್ವದಲ್ಲಿ ನಗರದಲ್ಲಿಂದು ಜಿ.ಎಚ್.ಕಾಲೇಜು ವಿದ್ಯಾಥರ್ಿನಿ ರೇಣುಕಾಳ ಕೊಲೆಯ ಪ್ರಕರಣವನ್ನು ಖಂಡಿಸಿ ಹಾಗೂ ಸೂಕ್ತ, ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ ಬಸವರಾಜ ಭೋವಿ ಮಾತನಾಡಿ, ಸವಣೂರು ತಾಲೂಕಿನ ಮಣ್ಣೂರು ಗ್ರಾಮದ ಜಿ.ಎಚ್.ಕಾಲೇಜು ವಿದ್ಯಾಥರ್ಿನಿ ರೇಣುಕಾಳನ್ನ ಎರಡು ದಿನಗಳ ಹಿಂದೆ ದುಷ್ಕಮರ್ಿಗಳು ಅಪಹರಿಸಿದ್ದರು. ನಿನ್ನೆ ದಿನ ವಿದ್ಯಾಥರ್ಿನಿಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ಅರೆಬೆಂದ ದೇಹವನ್ನು ನೋಡಿದರೆ ದುಷ್ಕಮರ್ಿಗಳು ಬಾಲಕಿಯ ಮೇಲೆ ಅತ್ಯಾಚಾರ ಗೈದು ಕೊಂದು ಹಾಕಿರುವ ಅನುಮಾನ ವ್ಯಕ್ತವಾಗುತ್ತಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚುತ್ತಿವೆ ಈ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಂಡು ಮಹಿಳೆಯರಿಗೆ ವಿದ್ಯಾಥರ್ಿನಿಯರಿಗೆ ಸೂಕ್ತ ರೀತಿಯಲ್ಲಿ ರಕ್ಷಣೆ ಕೊಡಬೇಕು ಆದರೆ ರಕ್ಷಣೆ ಕೊಡುವಲ್ಲಿ ವಿಫಲವಾಗಿರುವುದರಿಂದ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಈ ಘಟನೆಯನ್ನು ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿಯು ತೀವ್ರ ತೆರನಾಗಿ ಖಂಡಿಸುತ್ತದೆ ಎಂದರು.
ಲಿಂಗತ್ವ ಅಲ್ಪ ಸಂಖ್ಯಾತ ಸಂಘಟನೆಯ ಮುಖಂಡರಾದ ಅಕ್ಷತಾ ಕೆ.ಸಿ ಮಾತನಾಡಿ, ಇಂತಹ ಘಟನೆಗಳಿಂದ ವಿದ್ಯಾಥರ್ಿನಿಯರು, ಮಹಿಳೆಯರು ಮನೆಯಿಂದ ಹೊರಬರಲು ಭಯ ಪಡುವ ಸ್ಥಿತಿ ನಿಮರ್ಾಣವಾಗಿದೆ. ಕಳೆದ ತಿಂಗಳು ಇಂತಹದೆ ಪ್ರಕರಣ ಕೋಲಾರದ ಮಾಲೂರಿನಲ್ಲಿಯೂ ಇದೆ ತರಹದ ಘಟನೆ ನಡೆದಿತ್ತು 10ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ವಿದ್ಯಾಥರ್ಿನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು ಈ ಘಟನೆ ಮಾಸುವ ಮುನ್ನವೇ ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಕರಣ ನಡೆದಿರುವುದು ವಿಷಾದನೀಯ ಸಂಗತಿ ಎಂದರು.
ಸಿಐಟಿಯು ಜಿಲ್ಲಾ ಸಂಚಾಲಕರಾದ ವಿನಾಯಕ ಕುರುಬರ ಮಾತನಾಡಿ, ಮಣ್ಣೂರು ಗ್ರಾಮದ ವಿದ್ಯಾಥರ್ಿನಿಯನ್ನು ಕೊಲೆ ಮಾಡಿದ ದುಷ್ಕಮರ್ಿಗಳನ್ನು ಒಂದು ವಾರದೊಳಗಾಗಿ ಬಂಧನ ಮಾಡಬೇಕು. ರೇಣುಕಾ ಕೊಲೆ ಪ್ರಕರಣವು ಸಮಗ್ರ ತನಿಖೆಯಾಗಬೇಕು ಹಾಗೂ ಈ ಕುರಿತು ಪ್ರತ್ಯೇಕ ಸಮಿತಿಯೊಂದನ್ನು ರಚಿಸಬೇಕು, ಜಿಲ್ಲೆಯಾದ್ಯಂತ ವಿದ್ಯಾಥರ್ಿನಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಬೇಕು, ನ್ಯಾ.ವಮರ್ಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ಶಾಲಾ-ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡರಾದ ಜ್ಯೊತಿ ದೊಡ್ಮನಿ, ಪ್ರಯಾಂಕಾ, ಮುಕ್ತಾನಂದ ಹಿರೇಮನಿ, ಪ್ರಮೋದಿನಿ ಸಾತಪತಿ,. ಲಕ್ಷ್ಮೀ, ಕೃಷಿದಾ ಮುಂದಿನಮನಿ, ಲಕ್ಷ್ಮೀ ಮಡ್ಲೂರು, ಅಪರ್ಿತಾ ಪಟ್ಟಣಶೆಟ್ಟಿ, ಕಾವ್ಯಾ, ಲತಾ, ದೀಪಾ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಹೊನ್ನಪ್ಪ ತಗಡಿನಮನಿ, ರವೀದ್ರ ಶೆಟ್ಟರ, ಫರೀದಾ ಸೇರಿದಂತೆ ಸಾವಿರಾರು ವಿದ್ಯಾಥರ್ಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 