ಉದ್ಘಾಟನೆ ಸಮಾರಂಭ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ ್ಷ ಎಸ್‌ಎಫ್‌ಐ ಕಾರ್ಯಕರ್ತರು ಮನವಿ

 ಉದ್ಘಾಟನೆ ಸಮಾರಂಭ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ ್ಷ ಎಸ್‌ಎಫ್‌ಐ ಕಾರ್ಯಕರ್ತರು ಮನವಿ  SFI activists request to provide hostel facilities for the inauguration ceremony

ಲೋಕದರ್ಶನ ವರದಿ 



ಉದ್ಘಾಟನೆ ಸಮಾರಂಭ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ ್ಷ ಎಸ್‌ಎಫ್‌ಐ ಕಾರ್ಯಕರ್ತರು ಮನವಿ  

ಹಾವೇರಿ 07 : ತಾಲ್ಲೂಕಿನ ಕಳಿಹಾಳ್ಳ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿಯುತ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಕನಿಷ್ಟ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟರಾಗಿ ಆಗಮಿಸಿದ ಶಾಸಕ ರುದ್ರ​‍್ಪ ಲಮಾಣಿ ಅವರಿಗೆ ಉದ್ಘಾಟನೆ ಸಮಾರಂಭ ಬಿಡಿ ಮೊದಲು ಹಾಸ್ಟೆಲ್ ಸೌಲಭ್ಯ ಕೊಡಿ ಎಂದು ಶಾಸಕರಿಗೊಂದು ಬಹಿರಂಗ ಮನವಿ ಪತ್ರ ಅಭಿಯಾನ ನಡೆಸಿ ಎಸ್‌ಎಫ್‌ಐ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು. 

    ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ ನಮ್ಮ ಪ್ರಶ್ನೆ ಇರೋದು ಇಷ್ಟೇ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಏನು ಸೌಲಭ್ಯ ವಿದೆ ಎಂದು ಭಾಷಣ ಮಾಡುತ್ತಿರಿ? ಪ್ರತಿ ನಿತ್ಯವೂ ವಿದ್ಯಾರ್ಥಿಗಳು ಅನುಭವಿಸುವ ಕಷ್ಟಗಳಿಗೆ ಪರಿಹಾರ ಹುಡುಕುತ್ತೇವೆ ಎಂದು ಹೇಳುತ್ತಿರಾ? ಎಷ್ಟು ದಿನ ಅಂತಾ ವಿದ್ಯಾರ್ಥಿಗಳು ನರಕ ಅನುಭವಿಸಬೇಕು? ಹೆಸರಿಗಸ್ಟೆ ವಸತಿಯುತ ಕಾಲೇಜ್! ಹಾಸ್ಟೆಲ್ ಇನ್ನೂ ಪ್ರಾರಂಭವಾಗಿಲ್ಲ, ಸರಿಯಾದ ಸಮಯಕ್ಕೆ ಬಸ್ಸ್‌ ವ್ಯವಸ್ಥೆ ಇಲ್ಲ, ಸುಸಜ್ಜಿತ ರಸ್ತೆಯಿಲ್ಲ, ಗುಡ್ಡಗಾಡದಲ್ಲಿರುವ ನೂರಾರು ವಿದ್ಯಾರ್ಥಿ/ನಿಯರಿಗೆ, ಉಪನಾಕರಿಗೆ ಸುರಕ್ಷಿತೆ ಎಲ್ಲಿದೆ? ಯಾರಿಗಾದರೂ ಧೀಡಿರ್ ಆರೋಗ್ಯ ಸಮಸ್ಯೆ ಎದುರಾದರೆ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ, ಕರೆದುಕೊಂಡು ಹೋಗಲು ಬಸ್ಸಿಲ್ಲ, ರಸ್ತೆಯ ಸರಿಯಿಲ್ಲ ಹೀಗಿರುವಾಗ ಹೇಗೆ ಪಾಠ ಕೇಳಬೇಕು? ಹೇಗ ಪಾಠ ಮಾಡಬೇಕು? ಹೇಳಿ ಉತ್ತರ ನೀಡಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. 

           ಎಸ್‌ಎಫ್‌ಐ ಮುಖಂಡ ಕೃಷ್ಣ ನಾಯ್ಕ ಅವರು ರುದ್ರ​‍್ಪ ಲಮಾಣಿ ಅವರಿಗೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ? ಘನತೆ ಗೌರವದಿಂದ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಇತರೆ ಕನಿಷ್ಟ ಮೂಲಭೂತ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟನೆ ಮಾಡಿ ನಿಮಗೆ ವಿದ್ಯಾರ್ಥಿ ಸಮುದಾಯ ಮನದುಂಬಿ ಅಭಿನಂದನೆ ಸಲ್ಲಿಸುತ್ತದೆ. ಇಲ್ಲದಿದ್ದರೆ ಸೌಲಭ್ಯ ಸಿಗುವವರೆಗೂ ಧಿಕ್ಕಾರದ ಕೂಗು ಮೊಳಗತ್ತಿರುತ್ತದೆ ಎಂದು ಕೃಷ್ಣ ನಾಯಕ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎ?????? ಕಾಲೇಜ್ ಘಟಕ ಮುಖಂಡರಾದ ಆಜೀಮ್ ಬೆಂತುರ್, ಹೊನ್ನಪ್ಪ ತಳವಾರ, ಗೌತಮ ಪೂಜಾರ್, ಸುಚಿತ್ರ ಲಂಬಾಣಿ, ಲಕ್ಷ್ಮಿ ಮಾಳಗಿ, ಯಲ್ಲಮ್ಮಕುಮಾರಿ, ಮಧು ಕಳ್ಳಿಹಾಳ, ಮೇಘನ ಎಂ ಪಿ, ರಾಜೇಶ್ವರಿ ಜಿ ಹೆಚ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.