ಉದ್ಘಾಟನೆ ಸಮಾರಂಭ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ- ಎಸ್‌ಎಫ್‌ಐ ಕಾರ್ಯಕರ್ತರು ಮನವಿ
SFI activists appeal to provide hostel facilities instead of opening ceremony
ಉದ್ಘಾಟನೆ ಸಮಾರಂಭ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ- ಎಸ್‌ಎಫ್‌ಐ ಕಾರ್ಯಕರ್ತರು ಮನವಿ
ಹಾವೇರಿ 06: ತಾಲ್ಲೂಕಿನ ಕಳಿಹಾಳ್ಳ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿಯುತ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಕನಿಷ್ಟ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟರಾಗಿ ಆಗಮಿಸಿದ ಶಾಸಕ ರುದ್ರ್ಪ ಲಮಾಣಿ ಅವರಿಗೆ "ಉದ್ಘಾಟನೆ ಸಮಾರಂಭ ಬಿಡಿ ಮೊದಲು ಹಾಸ್ಟೆಲ್ ಸೌಲಭ್ಯ ಕೊಡಿ" ಎಂದು ಶಾಸಕರಿಗೊಂದು ಬಹಿರಂಗ ಮನವಿ ಪತ್ರ ಅಭಿಯಾನ ನಡೆಸಿ ಎಸ್‌ಎಫ್‌ಐ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ನಮ್ಮ ಪ್ರಶ್ನೆ ಇರೋದು ಇಷ್ಟೇ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಏನು ಸೌಲಭ್ಯ ವಿದೆ ಎಂದು ಭಾಷಣ ಮಾಡುತ್ತಿರಿ? ಪ್ರತಿ ನಿತ್ಯವೂ ವಿದ್ಯಾರ್ಥಿಗಳು ಅನುಭವಿಸುವ ಕಷ್ಟಗಳಿಗೆ ಪರಿಹಾರ ಹುಡುಕುತ್ತೇವೆ ಎಂದು ಹೇಳುತ್ತಿರಾ? ಎಷ್ಟು ದಿನ ಅಂತಾ ವಿದ್ಯಾರ್ಥಿಗಳು ನರಕ ಅನುಭವಿಸಬೇಕು? ಹೆಸರಿಗಸ್ಟೆ ವಸತಿಯುತ ಕಾಲೇಜ್! ಹಾಸ್ಟೆಲ್ ಇನ್ನೂ ಪ್ರಾರಂಭವಾಗಿಲ್ಲ, ಸರಿಯಾದ ಸಮಯಕ್ಕೆ ಬಸ್ಸ್ ವ್ಯವಸ್ಥೆ ಇಲ್ಲ, ಸುಸಜ್ಜಿತ ರಸ್ತೆಯಿಲ್ಲ, ಗುಡ್ಡಗಾಡದಲ್ಲಿರುವ ನೂರಾರು ವಿದ್ಯಾರ್ಥಿ/ನಿಯರಿಗೆ, ಉಪನ್ಯಾಸಕರಿಗೆ ಸುರಕ್ಷಿತೆ ಎಲ್ಲಿದೆ? ಯಾರಿಗಾದರೂ ಧೀಡಿರ್ ಆರೋಗ್ಯ ಸಮಸ್ಯೆ ಎದುರಾದರೆ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ, ಕರೆದುಕೊಂಡು ಹೋಗಲು ಬಸ್ಸಿಲ್ಲ, ರಸ್ತೆಯ ಸರಿಯಿಲ್ಲ ಹೀಗಿರುವಾಗ ಹೇಗೆ ಪಾಠ ಕೇಳಬೇಕು? ಹೇಗ ಪಾಠ ಮಾಡಬೇಕು? ಹೇಳಿ ಉತ್ತರ ನೀಡಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡ ಕೃಷ್ಣ ನಾಯ್ಕ ಮಾತನಾಡಿ, ಯಾರ ಪ್ರತಿಷ್ಠಿತೆಗೆ ತುರುತುರಿಯಲ್ಲಿ ನಗರದಲ್ಲಿದ ಕಾಲೇಜ್ ಅನ್ನು ಗುಡ್ಡಗಾಡು ಪ್ರದೇಶಕ್ಕೆ ದೂಡಿದ್ದಿರಿ? ನಮ್ಮ ಕಾಲೇಜಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ವಿದ್ಯಾರ್ಥಿಗಳ ಅನೇಕ ಬಾರಿ ಹೋರಾಟದ ಕೂಗು ಕೇಳಲಿಲ್ಲವೇ? ಉತ್ತರ ನೀಡಿ ಶಾಸಕರೇ ಉತ್ತರ ನೀಡಿ? ಕಾಲೇಜ್ ಮುಂದೆ ವಿದ್ಯಾರ್ಥಿಗಳು ಧರಣಿ,
ಹೋರಾಟ ಮಾಡಿದಾಗ ನಿಮ್ಮ ಕಿವಿ ಕೇಳಲಿಲ್ವೇ? ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಜಾನೆ ಯಿಂದ ಸಂಜೆಯ ತನಕ ಬಿಸಿಲು ಮಳೆ ಲೆಕ್ಕಿಸದೆ ನಡೆಸಿದ ಹೋರಾಟದ ಕೂಗು ಕೇಳಲಿಲ್ವೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ? ಘನತೆ ಗೌರವದಿಂದ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಇತರೆ ಕನಿಷ್ಟ ಮೂಲಭೂತ ಸೌಲಭ್ಯಗಳ ಜೊತೆಗೆ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟನೆ ಮಾಡಿ ನಿಮಗೆ ವಿದ್ಯಾರ್ಥಿ ಸಮುದಾಯ ಮನದುಂಬಿ ಅಭಿನಂದನೆ ಸಲ್ಲಿಸುತ್ತದೆ. ಇಲ್ಲದಿದ್ದರೆ ಸೌಲಭ್ಯ ಸಿಗುವವರೆಗೂ ಧಿಕ್ಕಾರದ ಕೂಗು ಮೊಳಗತ್ತಿರುತ್ತದೆ ಎಂದು ಕೃಷ್ಣ ನಾಯಕ ಆಗ್ರಹಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಕಾಲೇಜ್ ಘಟಕ ಮುಖಂಡರಾದ ಆಜೀಮ್ ಬೆಂತುರ್, ಹೊನ್ನಪ್ಪ ತಳವಾರ, ಗೌತಮ ಪೂಜಾರ್, ಸುಚಿತ್ರ ಲಂಬಾಣಿ, ಲಕ್ಷ್ಮಿ ಮಾಳಗಿ, ಯಲ್ಲಮ್ಮ ಕುಮಾರಿ, ಮಧು ಕಳ್ಳಿಹಾಳ, ಮೇಘನ ಎಂ ಪಿ, ರಾಜೇಶ್ವರಿ ಜಿ ಹೆಚ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 