ಸಮಾನ ಶಿಕ್ಷಣಕ್ಕಾಗಿ ಎಸ್‌ಎಫ್‌ಐ ಜಿಲ್ಲಾ ಸಮ್ಮೇಳನ

  ಸಮಾನ ಶಿಕ್ಷಣಕ್ಕಾಗಿ ಎಸ್‌ಎಫ್‌ಐ ಜಿಲ್ಲಾ ಸಮ್ಮೇಳನ  SFI District Conference for Equal Education

ಲೋಕದರ್ಶನ ವರದಿ 

ಹಾವೇರಿ  11: “ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ, ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ” ಎಂಬ ಆಶಯದೊಂದಿಗೆ ಭಾರತ ವಿದ್ಯಾರ್ಥಿ ಫೆಡರೇಷನ್  ಹಾವೇರಿ ಜಿಲ್ಲಾ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನದ ಲೋಗೋವನ್ನು ನಗರದ ಪರೀಶೀಲನಾ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.  

ವಕೀಲ ನಾರಾಯಣ ಕಾಳೆ ಮಾತನಾಡಿ, ದೇಶದ ಸ್ವಾತಂತ್ರ್ಯ ಚಳವಳಿ, ಅಧ್ಯಯನ, ಹೋರಾಟ ಹಾಗೂ ತ್ಯಾಗದ ಪರಂಪರೆಯನ್ನು ಹೊಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಯಾಗಿದೆ. ಸಮಾನ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳನ್ನು ಸಂಘಟಿಸುವುದರ ಜೊತೆಗೆ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಿದೆ ಎಂದರು.  

ಖಈಋ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ಶಿಕ್ಷಣದ ಉಳಿವಿಗಾಗಿ ಹಾಗೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಶಿಕ್ಷಣ ಪ್ರೇಮಿಗಳು ಒಂದಾಗಬೇಕು. ವಿಭಜಕ ಶಕ್ತಿಗಳನ್ನು ತಡೆದು ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆ ಬಲಪಡಿಸಬೇಕಿದೆ ಎಂದು ಹೇಳಿದರು.  

ಶುಲ್ಕ ಹೆಚ್ಚಳ, ಡೊನೇಷನ್ ಹಾವಳಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮರ​‍್ಕ ಬಸ್ ಸೌಲಭ್ಯ, ಟಿಕೆಟ್ ದರ ಹೆಚ್ಚಳ ವಿರೋಧ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ, ವೃತ್ತಿಪರ ಶಿಕ್ಷಣ ಜಾರಿ, ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ ಹಾಗೂ ಬೋಧಕ-ಬೋಧಕೇತರ ಹುದ್ದೆಗಳ ಖಾಯಂ ನೇಮಕಾತಿಗಾಗಿ ಖಈಋ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.  

ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲೂಕುಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗಾಗಿ ಹೋರಾಟ ನಡೆಸಿ ಯಶಸ್ಸು ಸಾಧಿಸಲಾಗಿದೆ. ಹಾವೇರಿ ವಿಶ್ವವಿದ್ಯಾಲಯದ ಉಳಿವಿಗಾಗಿ ಪ್ರಗತಿಪರ ಸಂಘಟನೆಗಳ ಸಮಿತಿ ರಚಿಸಿ ಹೋರಾಟ ರೂಪಿಸಲಾಗಿದ್ದು, ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಇನ್ನಷ್ಟು ಬಲಿಷ್ಠ ಹೋರಾಟಗಳ ಅಗತ್ಯವಿದೆ ಎಂದರು.  

ಆಗಸ್ಟ್‌ 25ರಂದು ಹಾವೇರಿಯ ರಾಜ್ಯ ಸರ್ಕಾರಿ ನೌಕರರ ಸಭಾ ಭವನದಲ್ಲಿ ಖಈಋ ಹಾವೇರಿ ಜಿಲ್ಲಾ ವಿದ್ಯಾರ್ಥಿಗಳ 9ನೇ ಜಿಲ್ಲಾ ಸಮ್ಮೇಳನ ನಡೆಯಲಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.  

ಈ ಸಂದರ್ಭದಲ್ಲಿ ಶ್ರೇಯಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪೇಸ್ವಾಮಿ ಹೊಸಮನಿ, ಸೌಭಾಗ್ಯಲಕ್ಷ್ಮೀ ಹೊಸಮನಿ, ಆಙಈಋ ಮುಖಂಡ ವಿಠ್ಠಲ ಗೌಳಿ, ಖಈಋ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಾಗವತ್, ಕಾಲೇಜು ಘಟಕದ ಅಧ್ಯಕ್ಷೆ ಚೈತ್ರಾ ಕೊರವರ, ಮುಖಂಡರಾದ ಶೋಭಾ ದೇವರಮನಿ, ಲಿಂಗರಾಜ ಪೂಜಾರ, ಭುವನ್ ಚೌಟಗಿ, ಆದಿತ್ಯ ಎಚ್‌., ವಿನೋದ್ ತಿಗಡಿ, ರೋಷನ್ ದಿಡಗೂರು, ಹನುಮಂತಗೌಡ ಭರಮಗೌಡ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.