ಎಸ್ ಬಿ ಐ ಬ್ಯಾಂಕ್: ಗ್ರಾಹಕರೇ ಜಾಣರಾಗಿ ಜಾಗೃತರಾಗಿರಿ, ಹುಲಿಕಟ್ಟಿಯಲ್ಲಿ ಅರಿವು ಜಾಗೃತಿ
SBI Bank: Customers, be smart and aware, awareness in the tiger cage
ರಾಣೇಬೆನ್ನೂರು 14 : ಸಮಾಜದಲ್ಲಿ ಇಂದಿನ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರದ ಜೊತೆಗೆ ವಂಚಿಸುವುದು ಹೇಗೆ ಎನ್ನುವುದನ್ನು ವಂಚನೆ ಮಾಡುವವರು ಸಹ ಅಧಿಕ ಸಂಖ್ಯೆಯಲ್ಲಿ ಮುಂದಾಗಿದ್ದಾರೆ. ನಾಗರಿಕರು ಮೋಸ ವಂಚನೆಗೆ ಬಲಿಯಾಗದೆ ಅತ್ಯಂತ ಜಾಗರೂ ಕತೆಯಿಂದ ತಮ್ಮ ವಹಿವಾಟು ನಡೆಸಲು ಮುಂದಾಗಬೇಕು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೊಟ್ರೇಶ್ ಕರೆ ನೀಡಿದರು. ಅವರು ತಾಲೂಕಿ ಹುಲಿಕಟ್ಟಿ ಗ್ರಾಮದಲ್ಲಿ, ಕುಮಾರಪಟ್ಟಣಂ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಆಯೋಜಿಸಿದ್ದ, ಗ್ರಾಹಕರ ಅರಿವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕು ಗ್ರಾಹಕರಿಗೆ ಅನೇಕ ರೀತಿಯ ಸವಲತ್ತುಗಳು ಕಲ್ಪಿಸಿದೆ ಅದರ ಬಗ್ಗೆ ಸರಿಯಾದ ರೀತಿಯಲ್ಲಿ ಪ್ರತಿಯೊಬ್ಬರು ತಿಳಿದುಕೊಂಡಾಗ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಎಂದರು. ಪ್ರಸ್ತುತ ದೇಶದ ಎಲ್ಲಾ ಭಾಗಗಳಲ್ಲಿ ಗ್ರಾಹಕರು ಅನೇಕ ರೀತಿಯಲ್ಲಿ ವಂಚನೆಗಿಡಾಗುತ್ತಿದ್ದಾರೆ ಅದಕ್ಕಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ "ಜಾಣರಾಗಿರಿ, ಜಾಗೃತರಾಗಿರಿ " ಎನ್ನುವ ಧೇಯ ವಾಕ್ಯದೊಂದಿಗೆ ಅರಿವು, ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು. ಸರಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಬೇಕಾದರೆ ಮತ್ತು ನೇರವಾಗಿ ನಿಮ್ಮ ಖಾತೆಗೆ ಹಣವು ಜಮೆ ಆಗಬೇಕಾದರೆ ಕೆ. ವೈ. ಸಿ. ಮತ್ತು ಎನ್. ಪಿ. ಸಿ. ಐ. ಕಡ್ಡಾಯವಾಗಿ ಆಗಿರಬೇಕು ಇದರಿಂದ ಹಣ ಬರುವುದು ನಿಲ್ಲುವುದಿಲ್ಲ.
ಯಾರಾದರೂ ದೂರವಾಣಿ ಕರೆ ಮಾಡಿ ಹಣ ನೀಡುವ ಆಮಿಷ ಒಡ್ಡಿದರೆ ಅದಕ್ಕೆ ಬಲಿಯಾಗಬಾರದು. ಯಾರೂ ಸುಮ್ಮ ಸುಮ್ಮನೆ ಹಣ ಕೊಡುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನ ನಾಗರಿಕದಲ್ಲಿ ಇರಬೇಕು ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ಕುಡುಪಲಿ ಅವರು, ನಾಗರಿಕರು ಬ್ಯಾಂಕಿನ ಸೌಲಭ್ಯಗಳನ್ನು ಎಲ್ಲ ರೀತಿಯಿಂದ ಪಡೆಯಬಹುದು ಆದರೆ ವ್ಯವಹಾರಿಕವಾಗಿ ಸರಿಯಾಗಿದ್ದರೆ ಅಗತ್ಯ ಸೌಲಭ್ಯಗಳನ್ನು ಕೊಡುವಲ್ಲಿ ಮುಂದಾಗುತ್ತಾರೆ ಅದರ ಕಡೆ ಗ್ರಾಹಕರು ಗಮನಹರಿಸಬೇಕು. ಸರ್ಕಾರದಿಂದ ಬರುವ ಪಿ. ಎಂ. ಕಿಸಾನ್ ಯೋಜನೆ, ಗೃಹಲಕ್ಷ್ಮಿ ಹಣ, ಬೆಳೆ ವಿಮೆ, ಬೆಳೆ ಪರಿಹಾರ ಹಾಗೂ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಯಾಪ ವೇತನ, ಅಂಗವಿಕಲತೆ ವೇತನ ಸೇರಿ ಮೊದಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ
ಪ್ರತಿಯೊಬ್ಬರು ಈ ಕೆವೈಸಿ ಹಾಗೂ ಎನ್ ಪಿ ಸಿ ಐ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದರು. ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕರಿಯಪ್ಪ ಮಸಲಾಡದ, ಕೊಟ್ರೇಶ ಬಣಕಾರ, ಪರಶುರಾಮ ಭಟ್ಟಂಗಿ, ಎಸ್. ಬಿ ಐ. ಬ್ಯಾಂಕ್ ವಿಜಯ ಕುಮಾರ, ಮೇಲ್ವಿಚಾರಕ ಭೋಜರಾಜ, ವಿರೂಪಾಕ್ಷಪ್ಪ,ಮಮುತಾ ಚಂದ್ರ್ಪ ಬಣಕಾರ, ಮಲ್ಲಿಕಾರ್ಜುನಯ್ಯ ಹನಗೋಡಿಮಠ, ರೇಣುಕಮ್ಮ ಕೆಂಚನಗೌಡ್ರು, ರಾಜಪ್ಪ ಬಣಕಾರ, ಬೀರೇಶ್ ಕೋಲಕಾರ,ಅಶೋಕ ಮುರಡಪ್ಪನವರ, ವಾಸುದೇವ ತುವಾರ ಸೇರಿದಂತೆ, ನೂರಾರು ಗ್ರಾಹಕರು, ಗ್ರಾಮಸ್ಥರು ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 